ಕಲಬುರಗಿ: ಇತ್ತೀಚಿನ ವರ್ಷಗಳಲ್ಲಿ ಯುವಜನತೆ ಮತ್ತು ಮಧ್ಯವಯಸ್ಸಿನವರು ಹೆಚ್ಚಾಗಿ ಹೃದಯಾಘಾತಕ್ಕೆ ತುತ್ತಾಗುತ್ತಿದ್ದಾರೆ.
ಇದೀಗ ಕಲಬುರಗಿ ಜಿಲ್ಲಾ ನ್ಯಾಯಲಯದಲ್ಲಿ ಹೃದಯಾಘಾತದಿಂದ ಹಿರಿಯ ನ್ಯಾಯಾಧೀಶರು ಸಾವನಪ್ಪಿರುವ ಘಟನೆ ಜರುಗಿದೆ. ವಿಶ್ವನಾಥ್ ವಿ ಮೂಗತಿ (44) ಸಾವನ್ನಪ್ಪಿದ ದುರ್ದೈವಿ. ಕಳೆದ ವಾರವೇ ಕಲಬುರಗಿ ಕೋರ್ಟ್ಗೆ ವಿಶ್ವನಾಥ್ ಅವರು ವರ್ಗಾವಣೆಯಾಗಿದ್ದರು.
ನೀವು ಕೂಡ ಜಾಸ್ತಿ ಉಪ್ಪಿನಕಾಯಿ ತಿಂತೀರಾ!? ಹಾಗಿದ್ರೆ ಈ ಸಮಸ್ಯೆಗಳು ಗ್ಯಾರಂಟಿ!
ಇಂದು ಬೆಳಗ್ಗೆ ಎಂದಿನಂತೆ ಕೋರ್ಟ್ಗೆ ಬಂದಿದ್ದರು. ಆದ್ರೆ ಕೋರ್ಟ್ ಹಾಲ್ಗೆ ಬರುವುದಕ್ಕಿಂತ ಮುಂಚೆ ಎದೆಯಲ್ಲಿ ನೋವು ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಲಾಗಿದೆ. ಆದರೆ ಆಸ್ಪತ್ರೆ ಕರೆತರುವ ಮುನ್ನವೇ ನ್ಯಾಯಧೀಶರು ಕೊನೆ ಉಸಿರೆಳೆದಿದ್ದಾರೆ.