ಮೊರಾದಾಬಾದ್:- ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ನೀನ್ಯಾಕೆ ಸಾಯ್ಬಾರ್ದು ಎಂದು ಗಂಡ ಕೇಳಿದ್ದಕ್ಕೆ ಮನನೊಂದು ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೂರು ತಿಂಗಳಿಗೆ ಸಾಕಾಯ್ತು ಲವ್ ಮ್ಯಾರೇಜ್.. ಪತ್ನಿಯನ್ನು ಗರ್ಭಿಣಿ ಮಾಡಿ ಪತಿ ಎಸ್ಕೇಪ್!
ಅಮ್ರೀನ್ ಜಹಾನ್ ಸುಮಾರು ನಾಲ್ಕು ತಿಂಗಳ ಹಿಂದೆ ಪ್ರೇಮ ವಿವಾಹವಾಗಿದ್ದರು. ಅವರ ಪತಿ ಬೆಂಗಳೂರಿನಲ್ಲಿ ವೆಲ್ಡರ್ ಆಗಿ ಕೆಲಸ ಮಾಡುತ್ತಿದ್ದಾರೆ. ಅಮ್ರೀನ್ ತನ್ನ ಕುಟುಂಬದೊಂದಿಗೆ ಮೊರಾದಾಬಾದ್‌ನಲ್ಲಿ ವಾಸಿಸುತ್ತಿದ್ದರು. ಗರ್ಭಪಾತವಾದ ನಂತರ ತನ್ನ ಅತ್ತೆ-ಮಾವ ಕಿರುಕುಳ ನೀಡುತ್ತಿದ್ದರು ಎಂದು ಆಕೆ ಆರೋಪಿಸಿದ್ದಾಳೆ.
ಮಾಡುವ ಪ್ರತಿ ಕೆಲಸದಲ್ಲೂ ತಪ್ಪು ಹುಡುಕುತ್ತಾರೆ, ನಾನು ಮಲಗುವ ಕೋಣೆಯ ವಿದ್ಯುತ್ ಸಂಪರ್ಕವನ್ನೇ ಕಡಿತಗೊಳಿಸುತ್ತಾರೆ.ನನ್ನ ಅತ್ತಿಗೆ ಖತೀಜಾ, ನನ್ನ ಮಾವ ಶಾಹಿದ್ ನನ್ನ ಸಾವಿಗೆ ಕಾರಣ.ನನ್ನ ಗಂಡ ಕೂಡ ಭಾಗಶಃ ಜವಾಬ್ದಾರ. ಅವನು ನನ್ನನ್ನು ಅರ್ಥಮಾಡಿಕೊಳ್ಳುವುದಿಲ್ಲ. ಎಲ್ಲವೂ ನನ್ನ ತಪ್ಪು ಎಂದು ಅವನು ಕೂಡ ಭಾವಿಸುತ್ತಾನೆ ಎಂದಿದ್ದಾರೆ
ಪೊಲೀಸರು ಅಮ್ರೀನ್ ಅವರ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಆಕೆಯ ತಂದೆ ಸಲೀಂ ಪೊಲೀಸ್ ದೂರು ದಾಖಲಿಸಿದ್ದಾರೆ.