ರಾಯಚೂರು : ಭೂಗರ್ಭದಲ್ಲಿ ಕೆಲಸ ಮಾಡುವ ಕಾರ್ಮಿಕನಿಗೆ ಕಲ್ಲು ಬಿದ್ದು ತೀವ್ರ ಗಾಯಗಳಾಗಿವೆ. ರಾಯಚೂರು ಜಿಲ್ಲೆಯ ಲಿಂಗಸೂರು ತಾಲೂಕಿನ ಹಟ್ಟಿ ಚಿನ್ನದ ಗಣಿಯಲ್ಲಿ ಘಟನೆ ನಡೆದಿದೆ.
ಕಳೆದ ಬುಧವಾರ ರಾತ್ರಿ 8 ಗಂಟೆಗೆ 2,600 ಅಡಿಯ ಒಳಗಡೆ ಭೂಗರ್ಭದಲ್ಲಿ ಕೆಲಸ ಮಾಡುವಾಗ ನಡೆದಿರುವ ಅವಘಡ ಸಂಭವಿಸಿದೆ. ನರಸಪ್ಪ ಎನ್ನುವ ಕಾರ್ಮಿಕನಿಗೆ ಮೇಲಿಂದ ಕಲ್ಲು ಬಿದ್ದು ತೀವ್ರ ರಕ್ತಸ್ರಾವವಾಗಿದೆ. ಕಲ್ಲು ಬಿದಿದ್ದರಿಂದಾಗಿ ಪ್ರಜ್ಞೆತಪ್ಪಿ ಬಿದ್ದಿದ್ದ ಕಾರ್ಮಿಕನನ್ನು ಅಲ್ಲೇ ಪಕ್ಕದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ರಕ್ಷಿಸಿದ್ದು, ಬಾಗಲಕೋಟೆಯ ಆಸ್ಪತ್ರೆಗೆ ರವಾನಿಸಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಘಟನೆಯ ಬಗ್ಗೆ ಮಾಹಿತಿ ಪಡೆದಿದ್ದಾರೆ.