ಪುಷ್ಪ ಸರಣಿ ಸಿನಿಮಾಗಳು ಸೂಪರ್ ಡೂಪರ್ ಸಕ್ಸಸ್ ಕಂಡಿವೆ. ಅಲ್ಲು ಅರ್ಜುನ್ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಧಮಾಲ್ ಮಾಡಿಯಾಗಿದೆ. ಈಗ ಸ್ಟೈಲೀಶ್ ಸ್ಟಾರ್ ಗುರಿ ಹಾಲಿವುಡ್..ರಾಕಿಭಾಯ್ ಯಶ್ ತಮ್ಮ ಟಾಕ್ಸಿಕ್ ಚಿತ್ರಕ್ಕೆ ಹಾಲಿವುಡ್ ಟಚ್ ಕೊಟ್ಟಿದ್ದಾರೆ. ಅಟ್ ದಿ ಸೇಮ್ ಟೈಮ್ ಯಶ್ ಸೂತ್ರವನ್ನೇ ಅಲ್ಲು ಅರ್ಜುನ್ ತಮ್ಮ ಸಿನಿಮಾಗೆ ಅಪ್ಲೈ ಮಾಡ್ತಿದ್ದಾರೆ ಅನ್ನೋದು ಪ್ರೋವ್ ಆಗಿದೆ, ಅದಕ್ಕೆ ಈಗ ರಿಲೀಸ್ ಆಗಿರುವ ಒಂದು ಸ್ಪೆಷಲ್ ವಿಡಿಯೋ.
ಇಂದು ಐಕಾನ್ ಸ್ಟಾರ್ ಅಲ್ಲು ಅರ್ಜುನ್ 43ನೇ ಹುಟ್ಟುಹಬ್ಬದ ಸಂಭ್ರಮ. ಬನ್ನಿ ಬರ್ತಡೇಗೆ ವಿಶೇಷವಾಗಿ ಮುಂದಿನ ಚಿತ್ರದ ಮೆಗಾ ಅಪ್ ಡೇಟ್ ಸಿಕ್ಕಿದೆ. ಶಾರುಖ್ ಖಾನ್ ಗೆ ಜವಾನ್ ಸಿನಿಮಾ ಮಾಡಿ ಗೆದ್ದಿರುವ, ದಳಪತಿ ನೆಚ್ಚಿನ ಡೈರೆಕ್ಟರ್ ಅಟ್ಲಿ ಅಲ್ಲು ಮುಂದಿನ ಸಿನಿಮಾದ ಸಾರಥಿ. ಈ ಡೆಡ್ಲಿ ಕಾಂಬೋದ ಹೊಸ ಚಿತ್ರದ ಫಸ್ಟ್ ಝಲಕ್ ರಿಲೀಸ್ ಆಗಿದ್ದು, ಹಾಲಿವುಡ್ ಮಂದಿಯೇ ದಂಗಾಗುವಂತೆ ಮಾಡಿದೆ.
ಅಲ್ಲು ಅರ್ಜುನ್-ಅಟ್ಲಿ ಸಿನಿಮಾಗೆ AA22xA6 ಅಂತ ಟೈಟಲ್ ಇಡಲಾಗಿದ್ದು, ಈ ಅನೌನ್ಸ್‌ಮೆಂಟ್ ಜೊತೆಗೆ ಸಿನಿಮಾಗೆ ಪೂರ್ವ ತಯಾರಿ ಕ್ಷಣಗಳನ್ನು ವಿಡಿಯೋ ಮೂಲಕ ಚಿತ್ರತಂಡ ಹಂಚಿಕೊಂಡಿದೆ. ಅಟ್ಲಿ ಮತ್ತು ಅರ್ಜುನ್ ಅವರುಗಳು ಅಮೆರಿಕಕ್ಕೆ ತೆರಳಿ ʼಅವತಾರ್’, ‘ಟರ್ನಿಮೇಟರ್’ ಇನ್ನೂ ಹಲವು ಹಾಲಿವುಡ್ನ ಐಕಾನಿಕ್ ಫ್ಯೂಚರಿಸ್ಟಿಕ್ ಸಿನಿಮಾಗಳಿಗೆ ಕೆಲಸ ಮಾಡಿರುವ ಸ್ಟುಡಿಯೋಗಳಿಗೆ ಭೇಟಿ ನೀಡಿದ್ದಾರೆ, ಅಲ್ಲಿನ ಟಾಪ್ ವಿಎಫ್ಎಕ್ಸ್, ಪ್ರಾಪ್, ಮೋಷನ್ ಕ್ಯಾಪ್ಚರ್ ಸ್ಟುಡಿಯೋಗಳೊಂದಿಗೆ ಈ ಜೋಡಿ ಒಪ್ಪಂದ ಮಾಡಿಕೊಂಡಿದೆ. ಅಷ್ಟಕ್ಕೂ ಇಂತಹ ಅದ್ಧೂರಿ ಪ್ರಾಜೆಕ್ಟ್ ಗೆ ಕೋಟಿ ಕೋಟಿ ಹಣ ಸುರಿಯುತ್ತಿರುವುದು ಸನ್ ಪಿಕ್ಚರ್ಸ್ ನ ಕಲಾನಿಧಿ ಮಾರನ್. ಇದೊಂದು ಆಕ್ಷನ್ ಅಡ್ವೆಂಚರ್ ಮೂವೀ ಅಂತಾ ಹೇಳಲಾಗ್ತಿದ್ದು, ಭಸರತೀಯ ಚಿತ್ರರಂಗದ ಅತಿ ದುಬಾರಿ ಚಿತ್ರವಂತೆ.
ಅಲ್ಲು ಸಂಭಾವನೆ ಎಷ್ಟು?
ಪುಷ್ಪ ಮೂಲಕ ದೊಡ್ಡ ಗೆಲುವು ಕಂಡಿರುವ ಅಲ್ಲು ಅರ್ಜುನ್ ಈ ಚಿತ್ರಕ್ಕಾಗಿ ಭಾರೀ ಮೊತ್ತವನ್ನೇ ಜೇಬಿಗಿಳಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಬನ್ನಿ ಬರೋಬ್ಬರಿ 170 ಕೋಟಿಗೂ ಅಧಿಕ ಹಣ ಪಡೆದಿದ್ದಾರಂತೆ. ಅಲ್ಲದೇ ಲಾಭದ ಶೇಖಡ 15ರಷ್ಟು ಪಾಲನ್ನು ಪಡೆಯುವ ಬಗ್ಗೆಯೂ ಅಗ್ರಿಮೆಂಟ್ ಆಗಿದೆಯಂತೆ. 800 ಕೋಟಿಗೂ ಅಧಿಕ ಬಜೆಟ್ ನಲ್ಲಿ AA22xA6 ಚಿತ್ರ ತಯಾರಾಗಲಿದೆಯಂತೆ. ಆಗಸ್ಟ್ ನಿಂದ ಈ ಸಿನಿಮಾ ಟೇಕಾಫ್ ಆಗಲಿದೆ ಎನ್ನಲಾಗುತ್ತಿದೆ.