ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ ಅವರು ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ.
IPL 2025: ಜಸ್ಟ್ 5 ಓವರ್ ಗೆ ಸೀಮಿತವಾಗುತ್ತಾ ಆರ್‌ಸಿಬಿ, ಕೆಕೆಆರ್ ಪಂದ್ಯ!
ಮೊದಲ ಬಾರಿಗೆ ಐಪಿಎಲ್ ಪ್ರಶಸ್ತಿ ಗೆಲ್ಲುವ ಇರಾದೆಯಲ್ಲಿರುವ ಆರ್ಸಿಬಿಗೆ ಎಬಿ ಡಿವಿಲಿಯರ್ಸ್ ಮತ್ತೊಂದು ಸಂತಸದ ಸುದ್ದಿ ನೀಡಿದ್ದಾರೆ.
ಕೆಕೆಆರ್ ವಿರುದ್ಧದ ಪಂದ್ಯಕ್ಕೂ ಮುನ್ನ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿರುವ ಆರ್‌ಸಿಬಿಯ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್, ‘ಆರ್ಸಿಬಿ ಫೈನಲ್‌ಗೆ ತಲುಪುವಲ್ಲಿ ಯಶಸ್ವಿಯಾದರೆ, ನಾನು ಫೈನಲ್ ಪಂದ್ಯವನ್ನು ನೋಡಲು ಖಂಡಿತವಾಗಿಯೂ ಭಾರತಕ್ಕೆ ಬರುವುದಾಗಿ ತಿಳಿಸಿದ್ದಾರೆ. ಹಾಗೆಯೇ ವಿರಾಟ್ ಕೊಹ್ಲಿ ಜೊತೆ ಟ್ರೋಫಿ ಎತ್ತುವ ಆಸೆ ಇದೆ ಅಂತಲೂ ಡಿವಿಲಿ ಹೇಳಿಕೊಂಡಿದ್ದಾರೆ
ನನ್ನ ಮಾತುಗಳನ್ನು ನೆನಪಿಟ್ಟುಕೊಳ್ಳಿ, ಆರ್‌ಸಿಬಿ ಫೈನಲ್ ತಲುಪಿದರೆ, ನಾನು ತಂಡದೊಂದಿಗೆ ಕ್ರೀಡಾಂಗಣದಲ್ಲಿ ಇರುತ್ತೇನೆ. ವಿರಾಟ್ ಕೊಹ್ಲಿ ಜೊತೆ ಟ್ರೋಫಿ ಎತ್ತಿ ಹಿಡಿಯುವುದಕ್ಕಿಂತ ಹೆಚ್ಚಿನ ಸಂತೋಷ ನನಗೆ ಬೇರೊಂದಿಲ್ಲ. ನಾನು ಹಲವು ವರ್ಷಗಳಿಂದ ಇದನ್ನು ಮಾಡಲು ಪ್ರಯತ್ನಿಸುತ್ತಿದ್ದೇನೆ ಎಂದು ಡಿವಿಲಿಯರ್ಸ್ ಹೇಳಿಕೊಂಡಿದ್ದಾರೆ.