ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಐಪಿಎಲ್ 2025 ರ 27ನೇ ಪಂದ್ಯ ಪಂಜಾಬ್ ಕಿಂಗ್ಸ್ ಮತ್ತು ಸನ್ರೈಸರ್ಸ್ ಹೈದರಾಬಾದ್ ತಂಡಗಳ ನಡುವೆ ನಡೆಯಿತು.
ಭಾರೀ ಅಗ್ನಿ ಅವಘಡ: ಬೆಂಗಳೂರಲ್ಲಿ 40ಕ್ಕೂ ಹೆಚ್ಚು ಶೆಡ್ಗಳು ಬೆಂಕಿಗೆ ಆಹುತಿ!
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ 20 ಓವರ್ಗಳಲ್ಲಿ ಬರೋಬ್ಬರಿ 245 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಸನ್ರೈಸರ್ಸ್ ಹೈದರಾಬಾದ್ ತಂಡ ಆರಂಭಿಕ ಅಭಿಷೇಕ್ ಶರ್ಮಾ ಅವರ ದಾಖಲೆಯ ಐಪಿಎಲ್ ಶತಕದ ಬಲದಿಂದ ಪಂಜಾಬ್ ಕಿಂಗ್ಸ್ ತಂಡವನ್ನು 8 ವಿಕೆಟ್ಗಳಿಂದ ಸೋಲಿಸಿ ಈ ಸೀಸನ್ನ ಎರಡನೇ ಗೆಲುವು ದಾಖಲಿಸಿತು.
ಪಂಜಾಬ್ ವಿರುದ್ಧದ ಪಂದ್ಯದದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಸಿಡಿಲಬ್ಬರದ ಶತಕ ಸಿಡಿಸಿ ಅಬ್ಬರಿಸಿದ್ದಾರೆ. 246 ರನ್ಗಳ ಬೃಹತ್ ಗುರಿ ಬೆನ್ನಟ್ಟುವ ವೇಳೆ ಸನ್ರೈಸರ್ಸ್ ಹೈದರಾಬಾದ್ ತಂಡದ ಪರ 2ನೇ ವೇಗದ ಶತಕ ಸಿಡಿಸಿದರು.
ಬೃಹತ್ ಗುರಿ ಮುಂದಿದ್ದರಿಂದ ಆರಂಭದಿಂದಲೇ ಸಿಡಿಲಬ್ಬರದ ಆಟಕ್ಕೆ ಮುಂದಾದರು. ತಮಗೆ ಸಿಕ್ಕ ಜೀವದಾನಗಳನ್ನ ಸದುಪಯೋಗ ಪಡಿಸಿಕೊಂಡ ಅಭಿಷೇಕ್ ಶರ್ಮಾ ಐಪಿಎಲ್ ವೃತ್ತಿ ಜೀವನದ ಚೊಚ್ಚಲ ಶತಕ ಸಿಡಿಸಿದರು. ಅವರ ಶತಕದ ಇನ್ನಿಂಗ್ಸ್ನಲ್ಲಿ ಆರು ಸಿಕ್ಸರ್ಗಳು ಮತ್ತು 11 ಬೌಂಡರಿಗಳಿದ್ದವು.
ಸತತ 4 ಪಂದ್ಯಗಳಲ್ಲಿ ಸೋಲು ಕಂಡಿದ್ದ ಹೈದರಾಬಾದ್ ಇಂದ ಬೌಲಿಂಗ್ನಲ್ಲಿ ನೀರಸ ಪ್ರದರ್ಶನ ತೋರಿತ್ತು. 245 ರನ್ಗಳನ್ನ ಬಿಟ್ಟುಕೊಟ್ಟಿದ್ದರಿಂದ ಈ ಪಂದ್ಯದಲ್ಲೂ ಸೋಲಹುದು ಎಂಬ ಭಾವನೆ ಹುಟ್ಟಿಸಿತ್ತು. ಆದರೆ ಟ್ರಾವಿಸ್ ಹೆಡ್ ಹಾಗೂ ಅಭಿಷೇಕ್ ಶರ್ಮಾ ಮೊದಲ ವಿಕೆಟ್ಗೆ 171 ರನ್ ಸೇರಿಸಿದರು.
ಈ ಶತಕದ ಮೂಲಕ ಅಭಿಷೇಕ್ ಹೈದರಾಬಾದ್ ಪರ ವೇಗದ ಶತಕ ಸಿಡಿಸಿದ 2ನೇ ಬ್ಯಾಟರ್ ಎನಿಸಿಕೊಂಡರು. ಅಭಿಷೇಕ್ 40 ಎಸೆತಗಳಲ್ಲಿ ಶತಕ ಸಿಡಿಸಿದರೆ, ಟ್ರಾವಿಸ್ ಹೆಡ್ ಕಳೆದ ವರ್ಷ 39 ಎಸೆತಗಳಲ್ಲಿ ಸೆಂಚುರಿ ಸಿಡಿಸಿದ್ದರು.
ಇನ್ನು ಭಾರತೀಯರ ಪರ ಇದು 3ನೇ ವೇಗದ ಶತಕವಾಗಿದೆ. ಯುಸುಫ್ ಪಠಾಣ್ 37 ಎಸೆತಗಳಲ್ಲಿ ಶತಕ ಸಿಡಿಸಿದರೆ, ಇದೇ ಸೀಸನ್ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ಪ್ರಿಯಾಂಶ್ ಆರ್ಯ 39 ಎಸೆತಗಳಲ್ಲಿ ಶತಕ ಸಿಡಿಸಿದ್ದರು
ಈ ಪಂದ್ಯದಲ್ಲಿ ಒಟ್ಟಾರೆ 141 ರನ್ಗಳಿಸಿದ ಅಭಿಷೇಕ್ ಶರ್ಮಾ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ವೈಯಕ್ತಿಕ ಸ್ಕೋರ್ ಗಳಿಸಿದ ಬ್ಯಾಟರ್ ಎನಿಸಿಕೊಂಡರು