ಹುಬ್ಬಳ್ಳಿ: ಚಿಗರಿ ಬಸ್‌ಗಳನ್ನು ಅಪಘಾತ ಮಾಡಿದ ಚಾಲಕರಿಗೆ, ಡಿಪೋ ಮ್ಯಾನೇಜರ್ ಸನ್ಮಾನ ಮಾಡಿ ಅವಮಾನ ಮಾಡಿದ್ದರ ಜೊತೆಗೆ ಈ ರೀತಿ ಬಸ್ ಚಾಲನೆ ಮಾಡಬಾರದೆಂದು ವಾರ್ನ್ ಮಾಡಿರುವ ಘಟನೆ ಹುಬ್ಬಳ್ಳಿ ಬಿಆರ್ ಟಿಎಸ್ ಡಿಪೋದಲ್ಲಿ ನಡೆದಿದೆ.
ಹುಬ್ಬಳ್ಳಿಯ ಬಿಆರ್ ಟಿಎಸ್ ಡಿಪೋದ ಎರಡು ಸಾರಿಗೆ ಬಸ್ ಗಳು ಅಪಘಾತವಾಗಿದ್ದವು. ಮುಂದೆ ಹೋಗುತ್ತಿದ್ದ ಬಸ್ ಬ್ರೇಕ್ ಹಾಕಿದಾಗ ಹಿಂದೆ ಹೋಗುತ್ತಿದ್ದ ಬಸ್‌ನ್ನು ನಿಲ್ಲಿಸಲು ಚಾಲಕನ ಪ್ರಯತ್ನ ಪಟ್ಟು, ಬ್ರೇಕ್ ಹತ್ತಿಕ್ಕಿದ್ದಾಗ ಮುಂದಿನ ಬಸ್ ಗೆ ಡಿಕ್ಕಿ ಹೊಡೆದಿದೆ. ಇದರಿಂದ ಯಾವುದೇ ಪ್ರಾಣಹಾನಿ ಯಾಗದೇ ಬಸ್‌ನ ಮುಂಭಾಗ ಮತ್ತು ಇನ್ನೊಂದು ಬಸ್‌ನ ಹಿಂದಿನ ಗ್ಲಾಸ್ ಒಡೆದಿದೆ. ಎರಡು ಬಸ್ ಗಳ ಚಾಲಕರನ್ನು ಡಿಪೋ ಮ್ಯಾನೇಜರ್ ಮತ್ತು ಅಧಿಕಾರಿಗಳು ಡಿಪೋ ಬರಮಾಡಿಕೊಂಡು ಸನ್ಮಾನಿಸಿ ಅವಮಾನಿಸಿದ್ದಾರೆ. ಬಸ್‌ಗಳ ಮುಂದೆ ಚಾಲಕರನ್ನು ನಿಲ್ಲಿಸಿ ಮಾಲೆ ಹಾಕಿ ಸನ್ಮಾನ ಮಾಡಿ ಗ್ರೂಪ್ ಗೆ ಫೋಟೋ ಹಾಕಿ ಅವಮಾನಿಸಿದ್ದಾರೆ.