ಬೆಂಗಳೂರು:- ಟಿಪ್ಪರ್ ಲಾರಿ ಡಿಕ್ಕಿ ಹೊಡೆದು ಪೌರ ಕಾರ್ಮಿಕ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ವಿಜಯನಗರ ಸಂಚಾರಿ ಠಾಣಾ ವ್ಯಾಪ್ತಿಯ ಶಿವನಹಳ್ಳಿ ಸಿಗ್ನಲ್ ಬಳಿ ಜರುಗಿದೆ.
ಬಸವ ಜಯಂತಿ ಆಚರಣೆಯಲ್ಲಿ ಭಕ್ತರ ಪಾಲ್ಗೊಳ್ಳುವಿಕೆ ಅಗತ್ಯವಿದೆ- ಬಸವರಾಜ ಹೊರಟ್ಟಿ!
ಶ್ರೀರಾಂಪುರ ನಿವಾಸಿಯಾಗಿರುವ ಸರೋಜಮ್ಮ (51) ಮೃತ ಮಹಿಳೆ. ಇಂದು ಮುಂಜಾನೆ 6.30 ರಲ್ಲಿ ಕೆಲಸಕ್ಕೆ ಹಾಜರಾಗಲು ಹೋಗುವಾಗ ಟಿಪ್ಪರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ತೀವ್ರರಕ್ತಸ್ರಾವವಾಗಿ ಮಹಿಳೆ ಸಾವನ್ನಪ್ಪಿದ್ದಾರೆ.
ಘಟನಾ ಸ್ಥಳಕ್ಕೆ ವಿಜಯನಗರ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಅಲ್ಲದೇ ಸ್ಥಳದಲ್ಲಿ ಬಿಬಿಎಮ್ ಪಿ ಸಿಬ್ಬಂದಿ, ಪೌರ ಕಾರ್ಮಿಕರು ಕೂಡ ಇದ್ದರು.
ಸ್ಥಳೀಯ ವ್ಯಕ್ತಿ ರೋಷನ್ ಹೇಳಿದ್ದೇನು!?
ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ವ್ಯಕ್ತಿ ರೋಷನ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಇಂದು ಬೆಳಗ್ಗೆ 6.30ರ ಸುಮಾರಿಗೆ ಸರೋಜಮ್ಮ ಎಂಬ ಮಹಿಳೆ, ಶಿವನಹಳ್ಳಿ ಸಿಗ್ನಲ್ ದಾಟುವಾಗ ಲಾರಿ ಡಿಕ್ಕಿಯಾಗಿದೆ. ಚಾಲಕ ಗ್ರೀನ್ ಸಿಗ್ನಲ್ ಬಿತ್ತು ಅಂತಾ ಆತ ಗಾಡಿ ಮೂವ್ ಮಾಡಿದ್ದಾನೆ..
ಮೊಬೈಲ್ ನಲ್ಲಿ ಮಾತಾಡ್ಕೊಂಡು ಆಕೆ ಇರೋದು ನೋಡದೆ ಹೋಗಿದಾನೆ. ಲಾರಿಯ ಮುಂದಿನ ಚಕ್ರಕ್ಕೆ ಸಿಲುಕಿ ಆಕೆ ಘಟನಾ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.ಇನ್ನು ಎರಡು ಮೂರು ತಿಂಗಳಲ್ಲಿ ಆಕೆ ಕೆಲಸ ಪರ್ಮನೆಂಟ್ ಆಗ್ತಿತ್ತಂತೆ. ಅಷ್ಟರಲ್ಲಿ ಈ ರೀತಿ ಘಟನೆ ಆಗಿದೆ ಎಂದು ಸ್ಥಳೀಯ ವ್ಯಕ್ತಿ ರೋಷನ್ ಹೇಳಿಕೆ ಕೊಟ್ಟಿದ್ದಾರೆ.