ನೆಲಮಂಗಲ:- ಆಟೋಗೆ ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಇಬ್ಬರು ದುರ್ಮರಣ ಹೊಂದಿದ್ದು, ಹಲವರು ಗಾಯಗೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ಜರುಗಿದೆ.
ಡಾಲಿ ಧನಂಜಯ್ ನಿರ್ಮಾಣದ ʼವಿದ್ಯಾಪತಿʼ ಒಟಿಟಿಗೆ ಎಂಟ್ರಿ ..ಎಲ್ಲಿ ಸ್ಟ್ರೀಮಿಂಗ್?
ಕೆಎಸ್ಆರ್ ಟಿಸಿ ಬಸ್, ಬೆಂಗಳೂರಿನಿಂದ ಹೊರನಾಡಿಗೆ ಸಂಚರಿಸುತ್ತಿತ್ತು. ಈ ವೇಳೆ ನೆಲಮಂಗಲ ತಾಲೂಕಿನ ಶಾಂತಿನಗರದಿಂದ ನೆಲಮಂಗಲ ನಗರಕ್ಕೆ ಒಂದೇ ಕುಟುಂಬ ಆಟೋದಲ್ಲಿ ಬರುತ್ತಿತ್ತು. ಸಂಬಂಧಿಕರ ಮನೆಯಲ್ಲಿ ಕಾರ್ಯಕ್ರಮ ಮುಗಿಸಿ ಕುಟುಂಬಸ್ಥರು ವಾಪಸ್ಸಾಗುತ್ತಿದ್ದರು. ಇದೆ ವೇಳೆ ಆಟೋ ಚಾಲಕ ಯೂಟರ್ನ್ ತೆಗೆದುಕೊಳ್ಳುವ ವೇಳೆ ಅಪಘಾತ ಸಂಭವಿಸಿದೆ. ಪರಿಣಾಮ ಪುಟ್ಟಮ್ಮ 55, ಚಾಲಕ ಶ್ರೀನಿವಾಸ್ 40, ಸಾವನ್ನಪ್ಪಿದ್ದಾರೆ. ಇನ್ನೂ ಲೇಖನ11, ವರ್ಷಿಣಿ13, ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ. ನಾಗರತ್ಮಮ್ಮ 35, ವೆಂಕಟೇಶ್ 37 ಸಣ್ಣಪುಟ್ಟಗಾಯಗಳಾಗಿದ್ದು ಚಿಕಿತ್ಸೆ ಮುಂದುವರಿದಿದೆ.
ಘಟನೆ ಸಂಬಂಧ ನೆಲಮಂಗಲ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ.