ಆಚಾರ್ಯ ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ, ವ್ಯಕ್ತಿಯ ಜೀವನ ವಿಧಾನ, ಒಳ್ಳೆಯ ಮತ್ತು ಕೆಟ್ಟ ನಡವಳಿಕೆಯ ಬಗ್ಗೆ ಮಾತ್ರವಲ್ಲದೆ, ದೇಶವನ್ನು ಆಳುವ ವಿಧಾನದ ಬಗ್ಗೆಯೂ ಮಾತನಾಡುತ್ತಾರೆ. ಅವರು ತಮ್ಮ ನೀತಿಶಾಸ್ತ್ರದಲ್ಲಿ ಆಡಳಿತಗಾರರ ಗುಣಲಕ್ಷಣಗಳು ಮತ್ತು ಜನರ ಕರ್ತವ್ಯಗಳನ್ನು ಬಹಿರಂಗಪಡಿಸಿದರು.
ಯಾವುದೇ ವ್ಯಕ್ತಿ ತನ್ನ ಜೀವನದಲ್ಲಿ ಆಚಾರ್ಯ ಚಾಣಕ್ಯ ನೀತಿಗಳನ್ನು ತನ್ನ ಜೀವನದಲ್ಲಿ ಅಳವಡಿಸಿಕೊಂಡ್ರೆ ಅವನಷ್ಟು ಯಶಸ್ವಿ ಯಾರೂ ಆಗಲ್ಲ. ಯಶಸ್ಸು, ಸಮಾಜದಲ್ಲಿ ಗೌರವ ಆತನನ್ನು ಅರಸಿಕೊಂಡು ಬರುತ್ತದೆ. ಆತನ ಪ್ರತಿಯೊಂದು ಹೆಜ್ಜೆಯಲ್ಲೂ ಸಂತೋಷವಿರುತ್ತದೆ.
ಆರ್ಥಿಕ, ರಾಜಕೀಯ, ಮಹಾ ಜ್ಞಾನಿಯಾಗಿರುವ ಚಾಣಕ್ಯ, ಜೀವನದಲ್ಲಿ ಯಶಸ್ಸು ಮತ್ತು ಸಂತೋಷ ನಿಮಗೆ ಸಿಗಬೇಕಾದ್ರೆ ಕೆಲವು ಕೆಲಸಗಳನ್ನು ನಾಚಿಕೆ, ಸಂಕೋಚವನ್ನು ಬಿಟ್ಟಾಕಿ ಮಾಡಬೇಕು ಎಂದು ಹೇಳುತ್ತಾರೆ. ಚಾಣಕ್ಯ ಹೇಳಿದ ಆ ಕೆಲಸಗಳು ಏನು ಅಂತ ನೋಡೋಣ ಬನ್ನಿ.
ಶಿಕ್ಷಣ
1.ಶಿಕ್ಷಣ ಪಡೆಯೋದರಲ್ಲಿ ಯಾವಾಗಲೂ ಹಿಂದೇಟು ಹಾಕಬಾರದು. ಗೊತ್ತಿಲ್ಲದ ವಿಷಯಗಳನ್ನು ತಿಳಿದುಕೊಳ್ಳಲು ಉತ್ಸುಕರಾಗಿರಬೇಕಾಗುತ್ತದೆ. ಭಯ ಮತ್ತು ನಾಚಿಕೆಯಿಂದ ಹಿಂದೆ ಸರಿದ್ರೆ ನೀವು ಕೊನೆ ಸ್ಥಾನದಲ್ಲಿ ಉಳಿದುಕೊಳ್ಳಬೇಕಾಗುತ್ತದೆ.
ಹಣ
2.ಸಾಲವಾಗಿ ನೀಡಿರುವ ಹಣವನ್ನು ಮರಳಿ ಕೇಳಲು ಮುಜುಗರಕ್ಕೆ ಒಳಗಾಗಬಾರದು. ಅದು ನಿಮ್ಮ ಹಣವಾಗಿದ್ದು, ಕೇಳಲು ನಿಮಗೆ ಹಕ್ಕು ಇರುತ್ತದೆ. ಯಾವುದೇ ಕಾರಣಕ್ಕೂ ಮಹಾಲಕ್ಷ್ಮಿಯನ್ನು ದೂರ ಮಾಡಿಕೊಳ್ಳಬಾರದು. ಇಲ್ಲವಾದ್ರೆ ನಿಮ್ಮ ಆರ್ಥಿಕ ಸ್ಥಿತಿ ಏರುಪೇರಾಗುತ್ತದೆ.
ಕೆಲಸ
3.ಹಣ ಸಂಪಾದಿಸುವ ಯಾವುದೇ ಕೆಲಸದ ಬಗ್ಗೆ ತಾತ್ಸಾರ ಮಾಡಬಾರದು. ಯಾವುದೇ ಕೆಲಸವೂ ಚಿಕ್ಕದು ಎಂದು ಭಾವಿಸಬಾರದು. ಅದು ನಿಮ್ಮ ಎಲ್ಲಾ ಅವಶ್ಯಕತೆಗಳನ್ನು ಪೂರೈಸುತ್ತಿದ್ರೆ ಆ ಕೆಲಸವನ್ನು ಮಾಡಬೇಕು. ಇದೇ ವೇಳೆ ಕೆಟ್ಟ ಕೆಲಸದಿಂದ ಮಾಡಿದ ಸಂಪಾದನೆ ದೀರ್ಘಕಾಲ ಉಳಿಯಲ್ಲ ಎಂಬ ಎಚ್ಚರಿಕೆಯನ್ನು ಆಚಾರ್ಯ ಚಾಣಕ್ಯ ಹೇಳಿದ್ದಾರೆ.
ಆಹಾರ
4.ಊಟ ಮಾಡುವ ಸಂದರ್ಭದಲ್ಲಿ ನಿಮಗೆ ತೃಪ್ತಿಯಾಗೋವರೆಗೂ ತಿನ್ನಬೇಕು. ಸಂಕೋಚದಿಂದ ಊಟ ಮಾಡಿದ್ರೆ ಹಸಿವಿನಿಂದ ಕುಳಿತಕೊಳ್ಳಬೇಕಾಗುತ್ತದೆ. ಹಾಗೆ ತಟ್ಟೆಯಲ್ಲಿ ಆಹಾರ ಉಳಿಸಬಾರದು ಎಂಬ ಮಾತನ್ನು ಸಹ ಆಚಾರ್ಯ ಚಾಣಕ್ಯರು ಹೇಳಿದ್ದಾರೆ.