ಬೆಂಗಳೂರು:- ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಆರೋಪಿಯಾಗಿರುವ ನಟ ದರ್ಶನ್ಗೆ ಜಾಮೀನು ಸಿಕ್ಕರೂ ಸಂಕಷ್ಟ ತಪ್ಪಿಲ್ಲ. ಜಾಮೀನು ಪಡೆದು ಸಿನಿಮಾದಲ್ಲಿ ಬ್ಯುಸಿಯಾಗಿರೋ ನಟನಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.
ಐಪಿಎಲ್ ಬೆಟ್ಟಿಂಗ್ ಕುಳಗಳಿಗೆ ಖಾಕಿ ಶಾಕ್ ; ಬೆಟ್ಟಿಂಗ್ದಂಧೆಕೋರರ ಬಂಧನ
ಹೌದು, ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಗೆ ರಾಜಾತಿಥ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬರೋಬ್ಬರಿ ಆರು ತಿಂಗಳ ಬಳಿಕ ಜೈಲಾಧಿಕಾರಿಗಳ ವಿಚಾರಣೆ ತನಿಖೆಗೆ ಗೃಹ ಇಲಾಖೆ ಅನುಮತಿ ಕೊಟ್ಟಿದೆ. ಕಳೆದ ಒಂದುವಾರದಿಂದ ಜೈಲಿನ ಅಧಿಕಾರಿ ,ಸಿಬ್ಬಂದಿ ವರ್ಗ ವಿಚಾರಣೆ ನಡೆಸಿ, ಸ್ಪೆಷಲ್ ಟೀಂ, ಹೇಳಿಕೆ ದಾಖಲಿಸಿಕೊಂಡಿದೆ. ಅಧಿಕಾರಿಗಳ ವಿರುದ್ದ ಪಿಸಿ ಆಕ್ಟ್ ಅಡಿಯಲ್ಲಿ ಪೊಲೀಸರು ತನಿಖೆಗೆ ನಡೆಸುತ್ತಿದ್ದಾರೆ.
ದರ್ಶನ್ ರಾಜಾತಿಥ್ಯ ಸಂಬಂಧ ಮೂರು ಪ್ರಕರಣಗಳು ದಾಖಲಾಗಿತ್ತು, ಮೂರು ಪ್ರಕರಣಗಳನ್ನ ಪಿಸಿ ಆಕ್ಟ್ ಅಡಿಯಲ್ಲಿ ತನಿಖೆ ಕೈಗೊಳ್ಳಲಾಗಿದೆ. ಆರೋಪಿಗಳ ವಿರುದ್ದ ತನಿಖೆ ಅಲ್ಲದೇ ಅಧಿಕಾರಿಗಳ ವಿರುದ್ದವೂ ತನಿಖೆ ಶುರುವಾಗಿದೆ. ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪೊಲೀಸರು, ತನಿಖೆ ನಡೆಸ್ತಿದ್ದಾರೆ. ಅತೀ ಶೀಘ್ರವೇ ಪೊಲೀಸರು, ಮೂರು ಪ್ರಕರಣದಲ್ಲಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಿದ್ದಾರೆ. ಇನ್ನೂ ಮೂರು ಪ್ರಕರಣದಲ್ಲಿ ಅಧಿಕಾರಿಗಳ ಕೈವಾಡ ಬಗ್ಗೆ ಸಾಕ್ಷ್ಯ ಲಭ್ಯವಾಗಿದೆ.
ಮೊದಲ ಪ್ರಕರಣದಲ್ಲಿ ದರ್ಶನ್ ಕೈಗೆ ಸಿಗರೇಟ್ ಬಂದಿದ್ದು ಹೇಗೆ? ಅದೇ ರೀತಿ ಎರಡನೇ ಪ್ರಕರಣದಲ್ಲಿ ಜೈಲಿನಲ್ಲಿ ಮೊಬೈಲ್ ಬಳಕೆ?
ಮೂರನೇ ಪ್ರಕರಣದಲ್ಲಿ ಅಧಿಕಾರಿಗಳ ಪಾತ್ರ, ಕಳ್ಳಾಟ ಇಂಚಿಂಚೂ ಮಾಹಿತಿ ಕಲೆ ಹಾಕಲಾಗುತ್ತಿದೆ.