ನಟ ದರ್ಶನ್ ಗೆ ಪ್ರಾಣಿ ಪಕ್ಷಿಗಳು ಅಂದ್ರೆ ಬಲು ಇಷ್ಟ. ಹೀಗಾಗಿ ಅವರ ಮೈಸೂರಿನ ವಿನೀಶ್ ಫಾರ್ಮ್ ಹೌಸ್ ನಲ್ಲಿ ಪ್ರಾಣಿಗಳು ಹಾಗೂ ಪಕ್ಷಿಗಳನ್ನು ಸಾಕಿದ್ದಾರೆ. ಅವುಗಳ ಲಾಲನೆ ಪಾಲನೆಯನ್ನೂ ಮಾಡುತ್ತಾ ಬಂದಿದ್ದಾರೆ. ಅಲ್ಲದೇ ದಾಸನ ಬಳಿ ಐಶಾರಾಮಿ ಕಾರುಗಳ ಸಂಗ್ರಹವೇ ಇದೆ. ಆದರೆ ಅವರು ಆಗಾಗ್ಗೆ ಟ್ರಾಕ್ಟರ್ , ಎತ್ತಿನ ಬಂಡಿ ಏರುವುದುಂಟು. ಈಗ ತಮ್ಮ ಫಾರ್ಮ್ ಹೌಸ್ ನಲ್ಲಿ ಬಂಡಿ ಏರಿ ಸವಾರಿ ಮಾಡಿದ್ದಾರೆ.
ದರ್ಶನ್ ಮೈಸೂರಿನ ಫಾರ್ಮ್ ಹೌಸ್ ನಲ್ಲಿ ಬಂಡಿ ಏರಿರುವ ವಿಡಿಯೋ ವೈರಲ್ ಆಗುತ್ತಿದೆ. ಬಿಸಿಲಿ ತಾಪ ತಪ್ಪಿಸಿಕೊಳ್ಳಲು ಕ್ಯಾಪ್ ತೊಟ್ಟು ಸ್ವತಃ ತಾವೇ ಬಂಡಿ ಓಡಿಸಿ ದಾಸ ಖುಷಿ ಪಟ್ಟಿದ್ದಾರೆ. ಡೆವಿಲ್ ಶೂಟಿಂಗ್ ಬ್ಯುಸಿ ನಡುವೆ ದರ್ಶನ್ ತಮ್ಮ ಫಾರ್ಮ್ ಹೌಸ್ ನಲ್ಲಿ ಕಾಲ ಕಳೆಯುತ್ತಿದ್ದಾರೆ.
ದರ್ಶನ್ ಸದ್ಯ ಡೆವಿಲ್ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಬೆಂಗಳೂರಿನಲ್ಲಿ ನಾಲ್ಕನೇ ಹಂತದ ಶೂಟಿಂಗ್ ನಡೆಯುತ್ತಿದೆ. ಮಿಲನಾ ಪ್ರಕಾಶ್ ನಿರ್ದೇಶನದಲ್ಲಿ ಚಿತ್ರ ಮೂಡಿ ಬರುತ್ತಿದ್ದು, ಈ ವರ್ಷವೇ ಡೆವಿಲ್ ಅಬ್ಬರ ಶುರುವಾಗಲಿದೆ ಎನ್ನಲಾಗುತ್ತಿದೆ.