ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ವಿಜಯಲಕ್ಷ್ಮಿ ಈಗ ಫುಲ್ ಹ್ಯಾಪಿಯಾಗಿದ್ದಾರೆ. ಗಂಡ ಮಗ, ಕುಟುಂಬದ ಅಂತಾ ಕಾಲ ಕಳೆಯುವ ಅವರು ಆಗಾಗ ಟ್ರಿಪ್ ಮಾಡ್ತಾನೆ ಇರ್ತಾರೆ. ಚೆಂದದ ಫೋಟೋ ಹಾಕುತ್ತಾ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುತ್ತಾರೆ. ಸದ್ಯ ದಚ್ಚು ಪತ್ನಿ ವಿಜಿ ಹೊಸ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ವಿಜಯಲಕ್ಷ್ಮಿ ದರ್ಶನ್ ಸ್ಟೈಲೀಶ್ ಆಗಿ ಫೋಟೋಶೂಟ್ ಮಾಡಿಸಿದ್ದಾರೆ. ಕಪ್ಪು ಜೀನ್ಸ್ ಪ್ಯಾಂಟ್ ಜೊತೆಗೆ ಕಪ್ಪು ಟಾಪ್ ತೊಟ್ಟು ಅದಕ್ಕೆ ಸ್ಕಾರ್ಪ್ ಹಾಕಿ ಸಖತ್ ಸ್ಟೈಲೀಶ್ ಆಗಿ ಕಾಣಿಸಿಕೊಂಡಿದ್ದಾರೆ. ಸ್ಟೈಲೀಶ್ ಆಗಿ ಗ್ಲಾಸ್ , ದುಬಾರಿ ವಾಚ್ ತೊಟ್ಟು ಕ್ಯೂಟ್ ಆಗಿ ವಿಜಿ ಕಾಣಿಸಿಕೊಂಡಿದ್ದಾರೆ.
ದರ್ಶನ್ ಪತ್ನಿ ವಿಜಯಲಕ್ಷ್ಮಿ ಉಡುಗೆ, ತೊಡುಗೆ ವಿಚಾರಗಳಿಗೆ ಸುದ್ದಿಯಾಗ್ತಾರೆ. ಸೂಪರ್ ಸ್ಟಾರ್ ಪತ್ನಿಯಾಗಿರುವುದರಿಂದ ದುಬಾರಿ ಬಟ್ಟೆಗಳನ್ನು ತೊಟ್ಟು ಕಾಣಿಸಿಕೊಳ್ಳುತ್ತಾರೆ. ಅವರು ಹಾಕುವ ಬಟ್ಟೆ, ವಾಚ್, ಗ್ಲಾಸ್, ಬ್ಯಾಗ್ ಎಲ್ಲವೂ ಕಾಸ್ಟ್ಲೀಯಾಗಿರುತ್ತದೆ.