ಕಾಮಿಡಿ ಕಿಲಾಡಿಗಳು ಖ್ಯಾತಿಯ ರಾಕೇಶ್ ಪೂಜಾರಿ ಇತ್ತೀಚೆಗಷ್ಟೇ ಅಕಾಲಿಕ ನಿಧನ ಹೊಂದಿದ್ದರು. ಬಾಳಿ ಬದುಕುಬೇಕಿದ್ದ ರಾಕೇಶ್ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದರು. ರಾಕೇಶ್ ಹುಟ್ಟೂರಿನಲ್ಲಿ ಅಂತಿಮ ದರ್ಶನ ನಡೆದಿತ್ತು. ರಾಕೇಶ್ ಜೊತೆ ಕೆಲಸ ಮಾಡಿದ ಬಹುತೇಕರು ಅವರ ಅಂತಿಮ ದರ್ಶನ ಪಡೆದುಕೊಂಡರು. ನಟಿ ರಕ್ಷಿತಾ ಪ್ರೇಮ್ ಅವರಿಗೆ ರಾಕೇಶ್ ಸ್ವಂತ ತಮ್ಮನಂತಿದ್ದರು. ಆಂಕರ್ ಅನುಶ್ರೀಗೆ ರಾಕೇಶ್ ಅಕ್ಕ ಅಕ್ಕ ಎಂದು ಪ್ರೀತಿಯಿಂದ ಕರೆಯುತ್ತಿದ್ದರು. ಮಾಸ್ಟರ್ ಆನಂದ್, ಯೋಗರಾಜ್ ಭಟ್ ಸೇರಿದಂತೆ ಹಲವರು ಬೆಂಗಳೂರಿನಿಂದ ಬಂದು ಅಂತಿಮ ದರ್ಶನ ಪಡೆದುಕೊಂಡಿದ್ದರು.
ರಾಕೇಶ್ ಸಾಯುವ ದಿನ ಆಗಷ್ಟೇ ಕಾಂತಾರ 1 ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ರಾಕೇಶ್ ನಿಧನದ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಸಂತಪ ಸೂಚಿಸಿದ್ದ ರಿಷಬ್ ಶೆಟ್ಟಿ ಅಂತಿಮ ದರ್ಶನ ಪಡೆಯದೇ ಇರುವುದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. 30 ಕಿಲೋ ಮೀಟರ್ ದೂರದ ಬೈಂದೂರಿನಲ್ಲಿದ್ರೂ ರಿಷಬ್ ಶೆಟ್ಟಿ ರಾಕೇಶ್ ಪೂಜಾರಿ ಅಂತಿಮ ದರ್ಶನ ಪಡೆದಿಲ್ಲ. ಕೊನೆ ಪಕ್ಷ ಮನೆಗೆ ಭೇಟಿ ಕೊಟ್ಟು ಕುಟುಂಬಸ್ಥರಿಗೆ ಸಂತ್ವಾನ ಹೇಳಿಲ್ಲ. ಸಹನಟನ ಸಾವಿಗೆ ರಿಷಬ್ ಬಾರದೇ ಇರೋದಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ.
‘ಕಲಾವಿದನಿಗಿಂತ ಕಮರ್ಶಿಯಲ್ ಹೆಚ್ಚಾಯ್ತಾ’, ‘500 ಕಿಮಿ ದೂರದಿಂದ ಬಂದವರ ನಡುವೆ 30 ಕಿಮಿ ದೂರದಲ್ಲಿದ್ದು ಬರಲು ಪುರಸೊತ್ತು ಇಲ್ಲವೇ’, ‘ಸಹ ಕಲಾವಿದನ ಜೀವಕ್ಕೆ ಇಷ್ಟೇನಾ ಬೆಲೆ’ ಎಂಬಿತ್ಯಾದಿ ಪ್ರಶ್ನೆಗಳನ್ನು ನೆಟ್ಟಿಗರು ಕೇಳಿದ್ದಾರೆ. ರಿಷಬ್ ಶೆಟ್ಟಿಯ ವರ್ತನೆಯ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ಗಳು ಹರಿದಾಡುತ್ತಿವೆ. ಉಡುಪಿ ಬಳಿಯ ಬೈಂದೂರಿನಲ್ಲಿ ರಿಷಬ್ ಶೆಟ್ಟಿ ‘ಕಾಂತಾರ ಚಾಪ್ಟರ್ 1’ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿ ಆಗಿದ್ದಾರೆ. ಅಲ್ಲಿಂದ ರಾಕೇಶ್ ಪೂಜಾರಿಯ ಮನೆಗೆ ಕೇವಲ 30 ಕಿಮೀ, ಹಾಗಿದ್ದರೂ ಸಹ ರಿಷಬ್ ಶೆಟ್ಟಿ ಬಾರದೇ ಇರುವುದು ಸಹಜವಾಗಿಯೇ ಆಕ್ರೋಶ ಮೂಡಿಸಿದೆ.