ಸಹನಟಿ ಮೇಲೆ ಅತ್ಯಾಚಾರ ಮಾಡಿರುವ ಆರೋಪಿ ಮಡೆನೂರು ಮನುಗೀಗ ಮತ್ತೊಂದು ಸಂಕಷ್ಟ ಎದುರುರಾಗಿದೆ. ಹೀರೋ ಆಗಿ ಬೆಳೆಯಬೇಕು ಎಂಬ ಕನಸ್ಸು ಕಂಡಿದ್ದ ಮನುವನ್ನು ಕನ್ನಡ ಚಿತ್ರರಂಗದಿಂದ ದೂರು ಇಡುವ ಪ್ರಯತ್ನ ನಡೆಯುತ್ತಿದೆ. ಅದಕ್ಕೆ ಕಾರಣ ಶಿವಣ್ಣ, ದರ್ಶನ್, ಧ್ರುವ ಸರ್ಜಾ ಅವ್ರ ಬಗ್ಗೆ ಮಡೆನೂರು ಅವಹೇಳನ ಆಡಿಯೋ.
ಮಡೆನೂರು ಮನು ಮಾತನಾಡಿರುವ ಆಡಿಯೋ ಇತ್ತೀಚೆಗೆ ವೈರಲ್ ಆಗಿತ್ತು. ಈ ಆಡಿಯೋದಲ್ಲಿ ದರ್ಶನ್, ಶಿವಣ್ಣ ಹಾಗೂ ಧ್ರುವಅವರನ್ನು ನಿಂದಿಸಲಾಗಿತ್ತು. ಇದರಿಂದ ಇಡೀ ಚಿತ್ರರಂಗ ಮನು ವಿರುದ್ಧ ತಿರುಗಿ ಬಿದ್ದಿದೆ. ಮಡೆನೂರು ಮನುವನ್ನು ಚಿತ್ರರಂಗದಿಂದ ದೂರ ಇಡಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಜ್ಜಾಗಿದೆ. ಮೇಲ್ನೋಟಕ್ಕೆ ಆಡಿಯೋದಲ್ಲಿರುವ ಧ್ವನಿ ಮನುದು ಎಂಬು ಸ್ಪಷ್ಟವಾಗ್ತಿದ್ದು, ಮನುಗೆ ಅಸಹಕಾರ ತೋರುವ ಮೂಲಕ ದೂರ ಇಡಲು ಚಿತ್ರರಂಗ ಚಿಂತಿಸಿದೆ.
ಇದೇ ವಿಚಾರವಾಗಿ ನಾಳೆ ವಾಣಿಜ್ಯ ಮಂಡಳಿಯಲ್ಲಿ ಸಭೆ ನಡೆಯಲಿದೆ. ಬುಧವಾರ ರಾಜ್ ಕುಮಾರ್ ಅಭಿಮಾನಿ ಎನ್ ಅರ್ ರಮೇಶ್ ಫಿಲ್ಮ್ ಚೇಂಬರ್ ಗೆ ದೂರು ನೀಡಲಿದ್ದಾರೆ. ನೂರಕ್ಕೂ ಹೆಚ್ಚು ಪೊಲೀಸ್ ಸ್ಟೇಷನ್ ನಲ್ಲಿ ದೂರು ನೀಡಲಿ ಎನ್ ಅರ್ ರಮೇಶ್ ನಿರ್ಧಾರ ಮಾಡಿದ್ದಾರೆ
ಏನಿದೆ ಆಡಿಯೋದಲ್ಲಿ?
ಮಡೆನೂರು ಮನು ಮಾತನಾಡಿದ್ದಾರೆ ಎನ್ನಲಾದ ವೈರಲ್ ಆಡಿಯೋನಲ್ಲಿ, ಶಿವಣ್ಣ ಇನ್ನೊಂದು ಆರು ವರ್ಷ ಬದುಕುತ್ತಾನೆ, ದರ್ಶನ್ ಈಗಾಗಲೇ ಸತ್ತೇ ಹೋಗಿದ್ದಾನೆ. ಧ್ರುವ ಸರ್ಜಾ ಇನ್ನು ಎಂಟು ವರ್ಷ ಕ್ರೇಜ್ ಇದ್ದರೆ ಹೆಚ್ಚು, ಈ ಮೂವರ ನಡುವೆ ಕಾಂಪಿಟೇಶನ್ ಕೊಡೋಕೆ ನಿಂತಿರುವ ಗಂಡು ಗಲಿ ಕಣ್ರಿ ನಾನು’ ಎಂದು ಅಹಂಕಾರದ ಮಾತುಗಳನ್ನು ಮಡೆನೂರು ಮನು ಆಡಿದ್ದಾನೆ. ಇದು ಶಿವಣ್ಣ, ಧ್ರುವ ಹಾಗೂ ದರ್ಶನ್ ಅಭಿಮಾನಿಗಳನ್ನು ಕೆರಳಿಸಿದೆ.