ದಿವಂಗತ ಲೀಲಾವತಿ ಪುತ್ರ ನಟ ವಿನೋದ್ ರಾಜ್ ಆರೋಗ್ಯದಲ್ಲಿ ಏರುಪೇರಾಗಿದೆ. ಬಹಳ ದಿನಗಳಿಂದ ಅವರು ಎಲ್ಲಿಯೂ ಕಾಣಿಸಿಕೊಂಡಿಲ್ಲ. ಅದಕ್ಕೆ ಕಾರಣ ಅವರ ಆರೋಗ್ಯ ಸಮಸ್ಯೆ. ತಮ್ಮ ಆರೋಗ್ಯದ ಬಗ್ಗೆ ವಿನೋದ್ ರಾಜ್ ಮುಕ್ತವಾಗಿ ಮಾತನಾಡಿದ್ದಾರೆ.
ನಿನ್ನೆ ಅಣ್ಣಾವ್ರ ಹುಟ್ಟುಹಬ್ಬದ ವಿಶೇಷವಾಗಿ ಫಿಲಂ ಚೇಂಬರ್ ಅಲ್ಲಿ ನಡೆದ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಿತ್ತು. ಈ ಶಿಬಿರದಲ್ಲಿ ಹಲವಾರು ಸಿನಿಮಾ ಸೆಲೆಬ್ರಿಟಿಗಳು ಭಾಗವಹಿಸಿದ್ದರು. ಆರೋಗ್ಯ ಶಿಬಿರದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಸಹ ಈ ಸಂದರ್ಭದಲ್ಲಿ ಹಂಚಿಕೊಂಡರು. ಈ ವೇಳೆ ಮಾತನಾಡಿದ ನಟ ವಿನೋದ್ ರಾಜ್ ಕೂಡ ಭಾಗಿಯಾಗಿ, ಫಿಲಂ ಚೇಂಬರ್ ಪ್ರಯತ್ನಕ್ಕೆ ಮೆಚ್ಚುಗೆ ಸೂಚಿಸುವುದರ ಜೊತೆಗೆ ತಮ್ಮ ಆರೋಗ್ಯ ಪರಿಸ್ಥಿತಿಯ ಬಗ್ಗೆಯೂ ಮಾತನಾಡಿದ್ದಾರೆ.
ನಾನು ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದು. ಇದೇ ಕಾರಣಕ್ಕೆ ಕಳೆದ ಕೆಲವು ದಿನಗಳಿಂದ ನಾನು ಹೊರಗೆ ಬಂದು ಮಾತನಾಡಲು ಸಾಧ್ಯವಾಗಲಿಲ್ಲ . ಆಪರೇಷನ್ ಆಗಿದೆ. ಹೀಗಾಗಿ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಕ್ಷಮಿಸಿ ನನ್ನ ಜೀವನವೇ ಬೇರೆ ಕಡೆ ಹೋಗಿದೆ . . ನಾನು ಈಗ ಹಳ್ಳಿ ಜೀವನ ಹಾಗೂ ಕೃಷಿಯಲ್ಲಿ ನನ್ನನ್ನು ತೊಡಗಿಸಿಕೊಂಡಿದ್ದೀನಿ. ದೇಹದ ಒಳಗಡೆ ಏನೆಲ್ಲಾ ಆಗಿರುತ್ತೋ ತಿಳಿಯಲ್ಲ. ನಾವು ಗಾಡಿಗಳಿಗೆ ಸರ್ವೀಸ್ ಮಾಡಿ ಬಿಡುತ್ತೇವೆ ದೇಹಕ್ಕೆ ಸರ್ವೀಸ್ ಮಾಡಲ್ಲ. ಇಲ್ಲ ಮಾಡಿಕೊಳ್ಳಲು ಮರೆತು ಹೋಗ್ತೀವಿ ಅಂತಾ ವಿನೋದ್ ರಾಜ್ ಹೇಳಿದ್ದಾರೆ.
ಮಾತು ಮುಂದುವರೆಸಿದ ವಿನೋದ್ ರಾಜ್, ಬ್ಯಾಂಕ್ಗೆ ಹೋಗಿ ದುಡ್ಡಿದೆಯಾ ಅಂತ ಚೆಕ್ ಮಾಡಿಕೊಳ್ಳುತ್ತೇವೆ. ಆದರೆ ಆರೋಗ್ಯ ಸರಿ ಇದೆಯಾ ಅಂತ ನೋಡಿಕೊಳ್ಳಲ್ಲ. ಶಾಶ್ವತವಲ್ಲದ ಈ ಬದುಕು ಅಮೂಲ್ಯವಾದದ್ದು. ಇದನ್ನು ನಾವು ಉಳಿಸಿಕೊಳ್ಳಬೇಕು. ಈಗ ಆರೋಗ್ಯ ತುಸು ಚೇತರಿಸಿಕೊಂಡಿದೆ ಪರವಾಗಿಲ್ಲ ಅಂತ ಅವರು ಹೇಳಿದ್ದಾರೆ. ದೇವರು ಕೆಲವೊಮ್ಮೆ ಜೀವನದಲ್ಲಿ ಎಲ್ಲಾ ಕೊಟ್ಟಿರುತ್ತಾರೆ. ಆರೋಗ್ಯ ಕ್ಷೀಣಿಸಬಾರದು ಎಂದಿದ್ದಾರೆ.