ಕನ್ನಡದ ಆಪಲ್ ಬ್ಯೂಟಿ ಆಶಿಕಾ ರಂಗನಾಥ್ ಗ್ಲಾಮರ್ ಲುಕ್ ಗೂ ಸೈ, ಡಿ ಗ್ಲಾಮರ್ ಲುಕ್ ಗೂ ಜೈ ಎನ್ನುವ ನಟಿ..ಮಾರ್ಡನ್ ಡ್ರೆಸ್ ಮಾತ್ರವಲ್ಲ ಟ್ರೆಡಿಷನಲ್ ಅವತಾರದಲ್ಲಿಯೂ ಆಶಿಕಾ ಮುದ್ದಾಗಿ ಕಾಣಿಸುತ್ತಾರೆ. ಸೀರೆಯುಟ್ಟು ಬೋಲ್ಡ್ ಲುಕ್ ನಲ್ಲಿ ಕ್ಯಾಮೆರಾ ಕಣ್ಣು ಹೊಡೆದಿದ್ದಾರೆ. ಸೀರೆಯುಟ್ಟು ಮಲ್ಲಿಗೆ ಮುಡಿದು ಮುದ್ದು ಮುದ್ದಾಗಿ ಕಾಣಿಸಿಕೊಂಡಿದ್ದಾರೆ.
ಕನ್ನಡ ಮಾತ್ರವಲ್ಲ ಆಶಿಕಾ ಇತರ ಭಾಷೆಗಳಲ್ಲಿಯೂ ಬ್ಯುಸಿಯಾಗಿದ್ದಾರೆ. ತೆಲುಗು, ತಮಿಳು ಸಿನಿಮಾಗಳಲ್ಲೂ ನಟಿಸುವ ಮೂಲಕ ಬಹುಭಾಷಾ ನಟಿಯಾಗಿ ಮಿಂಚುತ್ತಿದ್ದಾರೆ. ಆಶಿಕಾ ರಂಗನಾಥ್ ಬ್ಯೂಟಿಫುಲ್ ಫೋಟೋಸ್ ನೋಡಿ ಪಡ್ಡೆಗಳು ಕ್ಯೂಟ್ ಎಂದು ಕಮೆಂಟ್ ಮಾಡುತ್ತಿದ್ದಾರೆ.
ಆಶಿಕಾ ಸದ್ಯ ಗತವೈಭವ ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ, ಇದರ ಜೊತೆಗೆ ಫರ್ ದಿ ಫಸ್ಟ್ ಟೈಮ್ ಚಿರಂಜೀವಿ ಜೊತೆ ನಟಿಸುತ್ತಿದ್ದಾರೆ. ವಿಶ್ವಂಭರಂ ಚಿತ್ರಕ್ಕೆ ನಾಯಕಿಯಾಗಿ ಚುಟು ಚುಟು ಸುಂದರಿ ಅಭಿನಯಿಸುತ್ತಿದ್ದು, ಫ್ಯಾನ್ಸ್ ಈ ಕಾಂಬಿನೇಷನ್ ನೋಡಲು ಕಾತರದಿಂದ ಕಾಯುತ್ತಿದ್ದಾರೆ.