ಬೆಂಗಳೂರು: ಬಿಜೆಪಿ ಸಂಸದೆ ಹಾಗೂ ಬಾಲಿವುಡ್ ನಟಿ ಕಂಗನಾ ರನೌತ್ ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದರು. ಅವರು 30 ವರ್ಷದ ಹಳೆ ದೇಗುಲಕ್ಕೆ ಭೇಟಿ ಕೊಟ್ಟಿದ್ದಾರೆ. ನಗರದ ಶಿವೋಹಂ ಶಿವ ಮತ್ತು ವೈಷ್ಣೋದೇವಿ ದೇವಸ್ಥಾನಕ್ಕೆ ಭೇಟಿ ನೀಡಿ, ಪಾರ್ಥನೆ ಸಲ್ಲಿಸಿದ್ದಾರೆ. ಆ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
65 ಅಡಿ ಎತ್ತರದ ಭವ್ಯವಾದ ಶಿವನ ಪ್ರತಿಮೆ ಮತ್ತು ಶಾಂತ ಧ್ಯಾನ ಮಂದಿರವನ್ನು ಹೊಂದಿರುವ ಶಿವೋಹಂ ಶಿವ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.
ಆವರಣದಲ್ಲಿರುವ ಮಾತಾ ವೈಷ್ಣೋದೇವಿ ದೇವಸ್ಥಾನದಲ್ಲಿಯೂ ಅವರು ಕೆಲ ಕಾಲ ಸಮಯ ಕಳೆದರು. ಇದೇ ವೇಳೆ ದೇವಸ್ಥಾನದ ಸಂಸ್ಥಾಪಕ, ಆಧ್ಯಾತ್ಮಿಕ ನಾಯಕ ಏರ್-ಆತ್ಮನ್ ಇನ್ ರವಿ ಅವರ ಜೊತೆ ಮಾತುಕತೆ ನಡೆಸಿದರು.