ಮೋಹಕ ತಾರೆ ರಮ್ಯಾ ಸಿನಿಮಾರಂಗಕ್ಕೆ ಕಂಬ್ಯಾಕ್ ಮಾಡುವ ಸ್ವೀಟ್ ನ್ಯೂಸ್ ಕೊಟ್ಮೇಲೆ ಅಭಿಮಾನಿಗಳು ಅವರನ್ನು ತೆರೆಮೇಲೆ ನೋಡಲು ಕಾತರರಾಗಿದ್ದಾರೆ. ಯೋಗರಾಜ್ ಭಟ್ ಜೊತೆ ಕೈ ಜೋಡಿಸಿರುವ ಪದ್ಮಾವತಿ ಪವರ್ ಫುಲ್ ಕಂಬ್ಯಾಕ್ ಗೆ ಚಿತ್ರರಂಗ ಕಾಯ್ತಿದೆ. ಒಂದ್ಕಡೆ ಹೊಸ ಚಿತ್ರಕ್ಕೆ ಸಜ್ಜಾಗುತ್ತಿರುವ ಮೋಹಕ ತಾರೆ ಸೋಷಿಯಲ್ ಮೀಡಿಯಾದಲ್ಲಿ ಫುಲ್ ಆಕ್ಟೀವ್ ಆಗಿದ್ದಾರೆ. ಸದಾ ಒಂದಲ್ಲ ಒಂದು ಫೋಟೋ ಹಂಚಿಕೊಂಡು ಅಭಿಮಾನಿಗಳ ಜೊತೆ ಕನೆಕ್ಟ್ ಆಗುತ್ತಾರೆ.
ರಮ್ಯಾ ಸ್ಯಾಂಡಲ್ ವುಡ್ ಫ್ಯಾಷನ್ ಐಕಾನ್ ಅಂದ್ರೆ ತಪ್ಪಾಗಲಿಕ್ಕಿಲ್ಲ. ಮಾರ್ಡನ್, ಟ್ರೆಡಿಷನ್ ಎರಡು ಉಡುಗೆಯಲ್ಲಿಯೂ ಗೌರಮ್ಮನ ಗಮ್ಮತ್ತು ಜೋರಾಗಿಯೇ ಇರುತ್ತದೆ. ಮೋಹಕ ತಾರೆ ಸದ್ಯ ಸ್ಟೈಲೀಶ್ ಹಾಕಿ ಪೋಸ್ ಕೊಟ್ಟಿರುವ ಒಂದಷ್ಟು ಫೋಟೋಗಳನ್ನು ಸಾಮಾಜಿಕ ಜಗತ್ತಿನಲ್ಲಿ ಹಂಚಿಕೊಂಡಿದ್ದಾರೆ.
ಬಿಳಿ ಬಣ್ಣದ ಬ್ಲೇಸರ್, ಡೆನಿಮ್ ಬ್ಯಾಗಿ ಜೀನ್ಸ್ ತೊಟ್ಟು ಕ್ಯೂಟ್ ಆಗಿ ರಮ್ಯಾ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ರಮ್ಯಾ ಸ್ಟೈಲೀಶ್ ಫೋಟೋಗೆ ಸಾಕಷ್ಟು ಮೆಚ್ಚುಗೆ ಸಿಕ್ಕಿದೆ. ವಿಶೇಷ ಅಂದರೆ ಸಮಂತಾ ಹಾರ್ಟ್ ಸಿಂಬಲ್ ಹಾಕಿ ಪದ್ಮಾಪತಿ ಫೋಟೋಗೆ ಕಂಪ್ಲಿಮೆಂಟ್ ಕೊಟ್ಟಿದ್ದಾರೆ.
ರಮ್ಯಾ ಬಹುಭಾಷಾ ನಟಿ. 2016ರಲ್ಲಿ ತೆರೆಕಂಡ ನಾಗರಹಾವು ಸಿನಿಮಾದಲ್ಲಿ ಅವರು ಕೊನೆಯದಾಗಿ ಕಾಣಿಸಿಕೊಂಡಿದ್ದು. ಅದಕ್ಕೂ ಮುನ್ನವೇ ಅವರು ನಟನೆಯಿಂದ ದೂರ ಉಳಿದಿದ್ದರು. ರಮ್ಯಾ ಚಿತ್ರರಂಗಕ್ಕೆ ಕಾಲಿಟ್ಟು 22 ವರ್ಷಗಳಾಗಿವೆ. ಈಗಲೂ ಕೂಡ ಅದೇ ಚಾರ್ಮ್ ಹೊಂದಿರುವ ಅವರಿಗೆ ಫ್ಯಾನ್ಸ್ ಸಂಖ್ಯೆ ಕೂಡ ಹಾಗೇ ಇದೆ. ಇತ್ತೀಚೆಗೆ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರದಲ್ಲಿ ಪ್ರೇಕ್ಷಕರ ಎದುರು ಬಂದಿದ್ದರು.