ಅಂತೂ ಇಂತೂ ಆರ್ ಸಿಬಿ ಅಭಿಮಾನಿಗಳ 18 ವರ್ಷದ ಕನಸು ನನಸಾಗಿದೆ. ಕೋಟಿ ಕೋಟಿ ಹೃದಯಗಳ ಪೂಜೆ ಪುನಸ್ಕಾರಕ್ಕೆ ದೇವರು ಫಲ ಕೊಟ್ಟಾಗಿದೆ. ಪಟೀದಾರ್ ಪಡೆ ಐಪಿಎಲ್ ಕಪ್ಗೆ ಮುತ್ತಿಟ್ಟಿದ್ದು, ಇತ್ತ ಆರ್ ಸಿಬಿ ಗೆಲ್ಲುತ್ತಿದ್ದಂತೆ ವಿಜಯ್ ಮಲ್ಯ ಪುತ್ರ ಸಿದ್ದಾರ್ಥ್ ಮಲ್ಯ ಗಳಗಳ ಕಣ್ಣೀರಿಟ್ಟಿರುವ ವಿಡಿಯೋ ವೈಎಲ್ ಆಗಿದೆ. ಆರ್ ಸಿಬಿ ಕಟ್ಟಿದ್ದು ಇದೇ ವಿಜಯ್ ಮಲ್ಯ. ಹೀಗಾಗಿ ಆರ್ ಸಿಬಿ ಅಂದ್ರೆ ಮಲ್ಯ ಹಾಗೂ ಕುಟುಂಬಕ್ಕೆ ಎಮೋಷನ್ ಇದ್ದೇ ಇದೆ. ವಿಜಯ್ ಮಲ್ಯ ಆರ್ ಸಿಬಿ ಕಪ್ ಗೆದ್ದಿರುವ ಖುಷಿಯಲ್ಲಿ ಟ್ವೀಟ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ. ಮಲ್ಯ ಪುತ್ರ ಸಿದ್ದಾರ್ಥ್ ಮಲ್ಯ ಕೂಡ ಆರ್ ಸಿಬಿ ಗೆಲುವಿಗೆ ಕಣ್ಣೀರಿಟ್ಟಿದ್ದಾರೆ.
ʼRCBʼ ವಿಜಯಪತಾಕೆ: ಗಳಗಳ ಕಣ್ಣೀರಿಟ್ಟ ವಿಜಯ ಮಲ್ಯ ಪುತ್ರ ಸಿದ್ದಾರ್ಥ್ ಮಲ್ಯ! Video ವೈರಲ್!
By Author AIN