ಬೆಂಗಳೂರು:- 1ನೇ ತರಗತಿ ದಾಖಲಾತಿಗೆ ವಯೋಮಿತಿ ಸಡಿಲಿಕೆ ಮಾಡಲಾಗಿದ್ದು, ರಾಜ್ಯ ಸರ್ಕಾರ ವಿರುದ್ಧ ಕೋರ್ಟ್ ಖಾಸಗಿ ಶಾಲೆ ಒಕ್ಕೂಟ ಕೋರ್ಟ್ ಮೊರೆ ಹೋಗಿದೆ.
ಹಳೆ ಪ್ರೇಮಿಯಿಂದ ಬ್ಲ್ಯಾಕ್‌ಮೇಲ್: ಮರ್ಯಾದೆಗೆ ಅಂಜಿ ನೇಣಿಗೆ ಶರಣಾದ ಯುವತಿ – ಡೆತ್ ನೋಟ್ ನಲ್ಲಿ ಏನಿತ್ತು?
ಒಂದನೇ ತರಗತಿ ದಾಖಲಾತಿಗೆ ಕಡ್ಡಾಯ 6 ವರ್ಷ ತುಂಬಿರಬೇಕು ಎಂಬ ಆದೇಶ ಸಂಘರ್ಷಕ್ಕೆ ಕಾರಣವಾಗಿತ್ತು. ಪೋಷಕರ ಒತ್ತಾಯಕ್ಕೆ ಶಿಕ್ಷಣ ಇಲಾಖೆ ಈ ವರ್ಷಕ್ಕೆ ವಿನಾಯಿತಿಯನ್ನ ನೀಡಿದೆ. ಆದರೆ ಈ ವಿನಾಯತಿ ಈಗ ಮತ್ತೊಂದು ಹೊಸ ಸಂಘರ್ಷಕ್ಕೆ ಕಾರಣವಾಗಿದೆ.
ಶಾಲಾ ಶಿಕ್ಷಣ ಇಲಾಖೆ ಹಾಗೂ ಸಚಿವರು ಸುದ್ದಿಗೋಷ್ಠಿ ಮಾಡಿ 2025-26 ನೇ ಸಾಲಿಗೆ ಸಿಮಿತಗೊಳಸಿ ಒಂದು ವರ್ಷ ವಯೋಮಿತಿ ಸಡಲಿಕೆ ಮಾಡಿದೆ. ಈ ವರ್ಷ 1ನೇ ತರಗತಿ ದಾಖಲಾತಿಗೆ 5.5 ವರ್ಷ ತುಂಬಿರಬೇಕು ಜೊತೆಗೆ ಯುಕೆಜಿ ಅಥವಾ ಅಂಗನವಾಡಿ ಗ್ರೇಡ್ – 2 ಕಂಪ್ಲಿಟ್ ಆಗಿರಬೇಕು ಅಂತಾ ಕಂಡಿಷನ್ ಮೇಲೆ ಅವಕಾಶ ನೀಡಿದೆ.
ಮುಂದಿನ ವರ್ಷ ಕಡ್ಡಾಯ 6 ವರ್ಷ ಒಂದನೇ ತರಗತಿ ದಾಖಲಾತಿಗೆ ತುಂಬಿರಬೇಕು ಅಂತಾ ಹೇಳಿದೆ. ಆದರೆ ಇದು ಸಿಬಿಎಸ್ಇ ಹಾಗೂ ಐಸಿಎಸ್ಇ ಶಾಲೆಗಳು ಗೊಂದಲಕ್ಕೆ ಕಾರಣವಾಗಿದೆ. ಕಳೆದ ವರ್ಷ ಸಿಬಿಎಸ್ಇ ಬೋರ್ಡ್ ಒಂದನೇ ತರಗತಿ ದಾಖಲಾತಿಗೆ ಕಡ್ಡಾಯ 6 ವರ್ಷ ತುಂಬಿರಬೇಕು ಅಂತಾ ಆದೇಶ ನೀಡಿತ್ತು. ಆದರೆ ಶಿಕ್ಷಣ ಇಲಾಖೆ ರಾಜ್ಯದಲ್ಲಿ ಈ ವರ್ಷಕ್ಕೆ ಸಿಮೀತಗೊಳಸಿ 5.5 ಕ್ಕೆ ವಯೋಮಿತಿ ಇಳಿಕೆ ಮಾಡಿದೆ. ಸಿಬಿಎಸ್ಇ ಬೋರ್ಡ್ ಈ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ ಹೀಗಾಗಿ ಸಿಬಿಎಸ್ಇ ಶಾಲೆಗಳಿಗೆ ಒಂದನೇ ತರಗತಿಯ ದಾಖಲಾತಿಯ ಗೊಂದಲ ಕೇಳಿ ಬಂದಿದೆ. ಮತ್ತೊಂದಡೆ 1 ನೇ ತರಗತಿ ದಾಖಲಾತಿಗೆ ವಯೋಮಿತಿ ಸಡಲಿಕೆ ವಿರೋಧಿಸಿ ಕೋರ್ಟ್ ಮೆಟ್ಟಿಲೇರಲು ಖಾಸಗಿ ಶಾಲೆಗಳ ಒಕ್ಕೂಟ ಮುಂದಾಗಿದೆ.
ಕೆಲವು ಖಾಸಗಿ ಶಾಲೆಗಳು ಸರ್ಕಾರದ ಈ ಹಿಂದೆ ವಯೋಮಿತಿ ವಿಚಾರಕ್ಕೆ ನೀಡಿರುವ ಆದೇಶವನ್ನ ಫಾಲೋ ಮಾಡಿದ್ದೀವಿ. ಇದರ ಪ್ರಕಾರವೇ ದಾಖಲಾತಿ ಕೂಡಾ ಮಾಡಿಸಿಕೊಳ್ಳಲಾಗಿದೆ. ಆದರೆ ಸರ್ಕಾರ ಈಗ ಏಕಾಏಕಿ ಈ ನಿರ್ಧಾರಕ್ಕೆ ಬಂದಿರೋದಕ್ಕೆ ಅತಿದೊಡ್ಡ ಸಮಸ್ಯೆಯಾಗಿದೆ. ಮುಂದಿನ ವರ್ಷಕ್ಕೂ ವಯೋಮಿತಿ ಸಡಲಿಕೆ ನೀಡಬೇಕಾದ ಅವಶ್ಯಕತೆ ಎದುರಾಗಿದೆ ಅಂತಾ ಕೋರ್ಟ್ ಮೊರೆ ಹೋಗಲು ಖಾಸಗಿ ಶಾಲೆಗಳ ಒಕ್ಕೂಟ ಮುಂದಾಗಿದೆ.