ಗುಜರಾತ್: ವಿಮಾನದಲ್ಲಿ ಗುಜರಾತ್ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಸೇರಿ ಒಟ್ಟು 242 ಪ್ರಯಾಣಿಕರಿದ್ದರು. ಅವರಲ್ಲಿ 230 ಪ್ರಯಾಣಿಕರು, 12 ಮಂದಿ ಸಿಬ್ಬಂದಿ ಇದ್ದರು. ಇವರಲ್ಲಿ ಒಟ್ಟು 133 ಮಂದಿ ಸಾವನ್ನಪ್ಪಿದ್ದಾರೆ ಎಂದು ಧೃಡಪಡಿಸಲಾಗಿದೆ. ಇನ್ನೂ ಈ ದುರಂತದ ಬಗ್ಗೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಸಂತಾಪ ಸೂಚಿಸಿದ್ದಾರೆ.
ಅಹಮದಾಬಾದ್ ಏರ್ ಇಂಡಿಯಾ ಅಪಘಾತ ಹೃದಯವಿದ್ರಾವಕ. ಪ್ರಯಾಣಿಕರು ಮತ್ತು ಸಿಬ್ಬಂದಿಯ ಕುಟುಂಬಗಳು ಅನುಭವಿಸುತ್ತಿರುವ ನೋವು ಮತ್ತು ಆತಂಕವನ್ನು ಊಹಿಸಲೂ ಸಾಧ್ಯವಿಲ್ಲ. ಆಡಳಿತದ ತುರ್ತು ರಕ್ಷಣೆ ಮತ್ತು ಪರಿಹಾರ ಪ್ರಯತ್ನಗಳು ನಿರ್ಣಾಯಕ. ಪ್ರತಿಯೊಂದು ಜೀವವೂ ಮುಖ್ಯ, ಪ್ರತಿ ಸೆಕೆಂಡ್ ಕೂಡ ಮುಖ್ಯ. ಕಾಂಗ್ರೆಸ್ ಕಾರ್ಯಕರ್ತರು ನೆಲಮಟ್ಟದಲ್ಲಿ ಸಹಾಯ ಮಾಡಲು ತಮ್ಮ ಕೈಲಾದಷ್ಟು ಮಾಡಬೇಕು.” ಎಂದಿದ್ದಾರೆ.
ಕಂಕುಳಿನ ಕಪ್ಪು ಕಲೆ ಬೆಳ್ಳಗಾಗಬೇಕಾ!? ಹಾಗಿದ್ರೆ ಶಾಂಪೂಗೆ ಈ ಪದಾರ್ಥ ಮಿಕ್ಸ್ ಮಾಡಿ ಹಚ್ಚಿ!
ಅಹಮದಾಬಾದ್ ನಿಂದ ಟೇಕ್ ಆಫ್ ಆದ ಸ್ವಲ್ಪ ಹೊತ್ತಿನಲ್ಲೇ ಏರ್ ಇಂಡಿಯಾ ವಿಮಾನ ವೈದ್ಯರ ಹಾಸ್ಟೆಲ್ ಗೆ ಡಿಕ್ಕಿ ಹೊಡೆದಿದೆ. ಲಂಡನ್ ನ ಗ್ಯಾಟ್ವಿಕ್ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ಇಂದು ಮಧ್ಯಾಹ್ನ ಅಹಮದಾಬಾದ್ ನಿಂದ ಟೇಕ್ ಆಫ್ ಆದ ಸ್ವಲ್ಪ ಹೊತ್ತಿನಲ್ಲೇ ವಿಮಾನ ನಿಲ್ದಾಣದ ಪರಿಧಿಯ ಬಳಿ ವೈದ್ಯರ ಹಾಸ್ಟೆಲ್ ಗೆ ಡಿಕ್ಕಿ ಹೊಡೆದಿದೆ ಎಂದು ANI ವರದಿ ಮಾಡಿದೆ.