ಅಹಮದಾಬಾದ್: ಗುಜರಾತ್ ಅಹಮದಾಬಾದ್ನಲ್ಲಿಂದು ಘೋರ ದುರಂತ ನಡೆದು ಹೋಗಿದೆ. ಅಹಮದಾಬಾದ್ ನಿಂದ ಲಂಡನ್ ತಲುಪಬೇಕಿದ್ದ ಅನೇಕ ಪ್ರಯಾಣಿಕರು ಸಾವಿನ ಕದ ತಟ್ಟಿದ್ದಾರೆ. ಗುಜರಾತ್ನ ಅಹಮದಾಬಾದ್ನಿಂದ ಲಂಡನ್ಗೆ ತೆರಳುತ್ತಿದ್ದ ಏರ್ ಇಂಡಿಯಾ ಬೋಯಿಂದ 787 ವಿಮಾನ ಪತನಗೊಂಡಿದೆ. ಈ ವಿಮಾನದಲ್ಲಿ
242 ಪ್ರಯಾಣಿಸುತ್ತಿದ್ದರು. ಅಷ್ಟು ಮಂದಿ ಈಗ ಮೃತಪಟ್ಟಿರುವ ಮಾಹಿತಿ ಲಭ್ಯವಾಗಿದೆ. ಎಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಅಹಮದಾಬಾದ್ನಲ್ಲಿ ಲಂಡನ್ಗೆ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡಾಗಿದ್ದು, ವಿಮಾನದಲ್ಲಿ ಯಾರೂ ಬದುಕುಳಿದಿಲ್ಲ ಎಂದು ಅಹಮದಾಬಾದ್ ನಗರದ ಪೊಲೀಸ್ ಮುಖ್ಯಸ್ಥರು ಎಪಿಗೆ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
BREAKING: There appear to be no survivors from Air India flight to London that crashed in Ahmedabad, city's police chief tells AP. Follow for live updates. https://t.co/KYkwKeKhRN
— The Associated Press (@AP) June 12, 2025
ವಿಮಾನ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಏರ್ ಇಂಡಿಯಾ ವಿಮಾನ ಪತನ (Air India Plane Crash) ಆಗಿದೆ. ಈ ವಿಮಾನದಲ್ಲಿ 242 ಜನರು ಪ್ರಯಾಣ ಮಾಡುತ್ತಿದ್ದರು. ವಿಮಾನ ಪತನ ಆದ ಕೂಡಲೇ ಬೆಂಕಿ ಹೊತ್ತಿಕೊಂಡಿದೆ. ಘಟನೆಯ ವಿಡಿಯೋ ವೈರಲ್ ಆಗಿದೆ. ಈ ದುರಂತಕ್ಕೆ ದೇಶವೇ ಬೆಚ್ಚಿ ಬಿದ್ದಿದೆ.