ಸಾವು ಹೇಗೆ ಯಾವಾಗ ಬರುತ್ತೇ ಅಂತಾ ಹೇಳೋದಿಕ್ಕೆ ಆಗಲ್ಲ ಅನ್ನೋದಿಕ್ಕೆ ಇಂದು ಗುಜರಾತ್ನ ಅಹ್ಮದಾಬಾದ್ನಲ್ಲಿ ವಿಮಾನ ಪತನ ತಾಜಾ ಉದಾಹರಣೆ. ಏರ್ ಇಂಡಿಯಾ ವಿಮಾನ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ವಿಮಾನ ಪತನಗೊಂಡಿದ್ದು, ಒಟ್ಟು 110 ಸಾವು ಮಂದಿ ಸಾವನ್ನಪ್ಪಿದ್ದಾರೆ ಎಂಬ ವರದಿಯಾಗಿದೆ.
ವಿಮಾನದಲ್ಲಿ ಒಟ್ಟು 242 ಪ್ರಯಾಣಿಕರಿದ್ದರು. ಅವರಲ್ಲಿ 230 ಪ್ರಯಾಣಿಕರು, 12 ಮಂದಿ ಸಿಬ್ಬಂದಿಯಿದ್ದರು. ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದೆ. ಸರ್ದಾರ್ ವಲ್ಲಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಧ್ಯಾಹ್ನ 1.10ಕ್ಕೆ ಟೇಕ್ ಅಫ್ ಆಗಿತ್ತು. ವಿಮಾನವು ಲಂಡನ್ನ ಗೆಟ್ವಿಕ್ ವಿಮಾನ ನಿಲ್ದಾಣ ತಲುಪಬೇಕಿತ್ತು.ವ
ಅಹಮದಾಬಾದ್ ಹಾರ್ಸ್ ಕ್ಯಾಂಪ್ ಬಳಿ ಈ ಅಪಘಾತ ಸಂಭವಿಸಿದೆ. ಈ ಪ್ರದೇಶವು ಸಿವಿಲ್ ಆಸ್ಪತ್ರೆಯ ಬಳಿ ಇದೆ. ವಿಮಾನ ಅಪಘಾತದಲ್ಲಿ ಭಾರೀ ಹಾನಿಯಾಗಿರುವ ಅನುಮಾನವಿದೆ. ಗುಜರಾತ್ ಪೊಲೀಸ್ ನಿಯಂತ್ರಣ ಕೊಠಡಿ ಅಪಘಾತವನ್ನು ದೃಢಪಡಿಸಿದೆ. ಅಪಘಾತಕ್ಕೀಡಾದ ವಿಮಾನದ ಸಂಖ್ಯೆ AI171 ಎಂದು ತಿಳಿದುಬಂದಿದೆ. ವಿಮಾನವು ಮಧ್ಯಾಹ್ನ 1.30 ರ ಸುಮಾರಿಗೆ ಅಹಮದಾಬಾದ್ನ ಮೇಘಾನಿ ನಗರ ಪ್ರದೇಶದ ಮೇಲೆ ಪತನಗೊಂಡಿದೆ.