ಇದನ್ನು ಸಾವಿನ ಪಯಣ ಅನ್ನೋದು, ವಿಧಿ ಘೋರ ದುರಂತ ಅನ್ನೋದು ಗೊತ್ತಿಲ್ಲ. ಅಹಮದಬಾದ್ ನಿಂದ ಲಂಡನ್ ಗೆ ಹೊರಟ್ಟಿದ್ದ ಏರ್ ಇಂಡಿಯಾ ಬೋಯಿಂಗ್ ವಿಮಾನ ಗುಜರಾತ್‌ನ ಅಹಮದಾಬಾದ್ ಪತನಗೊಂಡಿದೆ. ಈ ವಿಮಾನದಲ್ಲಿ 242 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು.
ಈ ಪೈಕಿ 110 ಮೃತಪಟ್ಟಿರುವ ಬಗ್ಗೆ ಮಾಹಿತಿ ಲಭ್ಯವಾಗುತ್ತಿದೆ. ಗುಜರಾತ್‌ನ ಅಹಮಾದಾಬಾದ್‌ನಿಂದ ಲಂಡನ್‌ಗೆ ತೆರಳುತ್ತಿದ್ದ ಏರ್ ಇಂಡಿಯಾದ B787 ವಿಮಾನ, ಅಹಮಾದಾಬಾದ್‌ನ ಸರ್ದಾರ್ ವಲ್ಲಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಉಡಾವಣೆಗೊಂಡ ಕೆಲವೇ ಕ್ಷಣಗಳಲ್ಲಿ ಪತನಗೊಂಡಿದೆ.
ತಾಂತ್ರಿಕ ದೋಷದಿಂದ ವಿಮಾನ ಪತನಗೊಂಡಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ವಿಮಾನವು ಮಧ್ಯಾಹ್ನ 1.30 ರ ಸುಮಾರಿಗೆ ಅಹಮದಾಬಾದ್‌ನ ಮೇಘಾನಿ ನಗರ ಪ್ರದೇಶದ ಮೇಲೆ ಪತನಗೊಂಡಿದೆ. ಬೃಹತ್ ಕಟ್ಟಡವೊಂದರ ಮೇಲೆ ವಿಮಾನ ಪತನಗೊಂಡಿದ್ದು,
ಈ ಕಟ್ಟಡ ಎಂಬಿಬಿಎಸ್ ವಿದ್ಯಾರ್ಥಿಗಳು ಹಾಸ್ಟೆಲ್ ಅನ್ನೋ ಮಾಹಿತಿ ಸಿಕ್ಕಿದೆ. ಅಹಮದಾಬಾದ್‌ನ ಮೇಘಾನಿ ನಗರದಲ್ಲಿರುವ ಬಿಜೆ ವೈದ್ಯಕೀಯ ಕಾಲೇಜು ಹಾಸ್ಟೆಲ್ ಮೆಸ್‌ಗೆ ಏರ್ ಇಂಡಿಯಾ ವಿಮಾನ ಪತನಗೊಂಡಿದ್ದು, ಅನೇಕ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಮತ್ತು ಗಾಯಗೊಂಡಿದ್ದಾರೆ ಎಂದು ಶಂಕಿಸಲಾಗಿದೆ.
ಗಾಯಗೊಂಡ ವಿದ್ಯಾರ್ಥಿಗಳನ್ನು ಅಹಮದಾಬಾದ್‌ನ ಸಿವಿಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹಾಸ್ಟೆಲ್ ಮೇಲೆ ವಿಮಾನ ಅಪ್ಪಳಿಸುವ ಸ್ವಲ್ಪ ಸಮಯಕ್ಕೂ ಮುನ್ನ ವಿದ್ಯಾರ್ಥಿಗಳು ಊಟಕ್ಕೆ ಕುಳಿತಿದ್ದರು ಎಂಬ ಬಗ್ಗೆ ವರದಿಯಾಗಿದೆ.
ಹಾಸ್ಟೆಲ್ ನಲ್ಲಿ 20ಕ್ಕೂ ವಿದ್ಯಾರ್ಥಿಗಳು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ವಿಮಾನದಲ್ಲಿ 169 ಭಾರತೀಯರು, 52 ಬ್ರಿಟಿನ್ ಪ್ರಜೆಗಳು, 7 ಪೋರ್ಚಿಗೀಸ್ ಹಾಗೂ ಓರ್ವ ಕೆನಡ ಪ್ರಜೆ ಲಂಡನ್ ಗೆ ಪಯಣ ಬೆಳೆಸುತ್ತಿದ್ದರು.