ಹುಬ್ಬಳ್ಳಿ: ಭಾರತ ಮಾತೆಯ ಸಿಂಧೂರ ಎಷ್ಟು ಮಹತ್ವದ್ದು ಎಂದು ಪಾಕಿಸ್ತಾನಿ ಉಗ್ರರಿಗೆ ಭಾರತ ಸರ್ಕಾರ ಮನವರಿಕೆ ಮಾಡಿಕೊಟ್ಟಿದೆ ಎಂದು ಬಿಜೆಪಿ ಶಾಸಕ ಮಹೇಶ ಟೆಂಗಿನಕಾಯಿ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಪಹಲ್ಗಾಮ್ನಲ್ಲಿ ಪಾಕಿಸ್ತಾನ ಉಗ್ರಗಾಮಿ ಸಂಘಟನೆಗಳು ಅಮಾಯಕ ಪ್ರವಾಸಿಗರನ್ನು ಧರ್ಮ ಕೇಳಿ ಕೊಂದು ಹಾಕಿ ಪೈಶಾಚಿಕ ಕೃತ್ಯ ನಡೆಸಿದ್ದರು. ಇದನ್ನು ದೇಶ ಅಲ್ಲದೆ ಅಂತಾರಾಷ್ಟ್ರೀಯ ಸಮುದಾಯಗಳೂ ತೀವ್ರವಾಗಿ ಖಂಡಿಸಿದ್ದವು. ಪಾಕಿಸ್ತಾನದಲ್ಲಿರುವ ಸುಮಾರು 11 ಉಗ್ರರ ಅಡಗು ತಾಣಗಳನ್ನು ಗುರಿಯಾಗಿಸಿಕೊಂಡು ಭಾರತ ಏರ್ಸ್ಟೆಕ್ ಮುಖಾಂತರ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದೆ ಎಂದು.
ದೇಶದ ಭದ್ರತೆ ವಿಷಯದಲ್ಲಿ ಇನ್ನಾದರೂ ರಾಜಕೀಯ ಮಾಡುವುದನ್ನು ಪ್ರತಿಯೊಬ್ಬರೂ ನಿಲ್ಲಿಸಬೇಕು. ದೇಶದ ವಿಚಾರದಲ್ಲಿ 140 ಕೋಟಿ ಜನರ ಹಿತದೃಷ್ಟಿಯಿಂದ ಎಲ್ಲರೂ ಒಗ್ಗಟ್ಟಾಗಿ ಹೋರಾಡಬೇಕಿದೆ. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪಹಲ್ಗಾಮ್ ನಲ್ಲಿ ದಾಳಿ ನಡೆಯುವ ಎರಡು ದಿನಗಳ ಮುನ್ನ ಪ್ರಧಾನಿ ಮೋದಿ ಅವರಿಗೆ ಮಾಹಿತಿ ಇತ್ತು. ಹೀಗಾಗಿ ಅವರು ಕಾಶ್ಮೀರ ಪ್ರವಾಸ ರದ್ದುಗೊಳಿಸಿದ್ದರು ಎಂದಿರುವುದು ಸರಿಯಲ್ಲ ಎಂದು ಮಹೇಶ್ ತೆಂಗಿನಕಾಯಿ ಸ್ಪಷ್ಟಪಡಿಸಿದ್ದಾರೆ.
ಉಗ್ರರ ಅಡಗು ತಾಣಗಳ ಮೇಲೆ ಸಮಯೋಚಿತ ದಾಳಿ ಮಾಡಿದ ನಮ್ಮ ಸೈನಿಕರು ಹಾಗೂ ಅವರಿಗೆ ಪ್ರೇರಣೆ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆಗಳು ಎಂದು ಹೇಳಿದ್ದಾರೆ. ಇನ್ನು ಕಾಂಗ್ರೆಸ್ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಇಂದು ಶಾಂತಿ ಮಂತ್ರ ಮಹತ್ವದ್ದಾಗಿದೆ ಎಂಬ ಪೋಸ್ಟ್ ಮಾಡಿ ಡಿಲಿಟ್ ಮಾಡಿದ್ದನ್ನ ಖಂಡಿಸಿದರು.