ಫ್ರಾನ್ಸ್ ನಲ್ಲಿ ಕಾನ್ಸ್ ಸಿನಿಮೋತ್ಸವ ಅದ್ಧೂರಿಯಾಗಿ ನಡೆಯುತ್ತಿದೆ. ಹಾಲಿವುಡ್ ಟು ಸ್ಯಾಂಡಲ್‌ವುಡ್ ತಾರೆಯರು ಕೆಂಪು ಹಾಸಿಗೆ ಮೇಲೆ ಬಿಕ್ಕಿನ ಹೆಜ್ಜೆ ಹಾಕುತ್ತಿದ್ದಾರೆ. ಈ ಬಾರಿ ಕಾನ್ಸ್ ನಲ್ಲಿ ಐಶ್ವರ್ಯ ರೈ ಲುಕ್ ಎಲ್ಲರ ಗಮನಸೆಳೆದಿದೆ. ಶುಭ್ರ ಬಿಳಿ ಬಣ್ಣದ ಉಡುಪು, ಹಣೆಯಲ್ಲಿ ಸಿಂಧೂರ ಹಾಕಿ ವಿಶ್ವ ಸುಂದರಿ ಗಮನಸೆಳೆದಿದ್ದಾರೆ.
ಐಶ್ವರ್ಯ ರೈ ಕಳೆದ 22 ವರ್ಷಗಳಿಂದ ಕಾನ್ಸ್ ಚಿತ್ರೋತ್ಸವದಲ್ಲಿ ಭಾಗಿಯಾಗುತ್ತಿದ್ದಾರೆ. ಪ್ರತಿ ಬಾರಿ ವಿಭಿನ್ನ ಉಡುಗೆ ತೊಟ್ಟು ಟ್ರೋಲ್ ಆಗ್ತಿದ್ದ ವಿಶ್ವ ಸುಂದರಿ ಈ ಬಾರಿ ಹಣೆಗೆ ಸಿಂಧುರ ಇಟ್ಟು, ಸೀರೆಯಲ್ಲಿ ಸುಂದರವಾಗಿ ಕಂಗೊಳಿಸಿದ್ದಾರೆ.
ಪಹಲ್ಗಾಮ್ ದಾಳಿಗೆ ಭಾರತ ನಡೆಸಿದ ಆಪರೇಷನ್ ಸಿಂಧೂರ ಕಾರ್ಯಾಚರಣೆ ಬೆಂಬಲವಾಗಿ ಐಶ್ವರ್ಯ ರೈ ತಮ್ಮ ಹಣೆಗೆ ಸಿಂಧೂರ ಹಾಕಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಮತ್ತೊಂದು ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ದೂರವಾಗ್ತಿದ್ದಾರೆ. ಈ ಜೋಡಿ ಡಿವೋರ್ಸ್ ಗೆ ಮುಂದಾಗಿದ್ದಾರೆ ಎಂಬ ಸುದ್ದಿ ಇದೆ. ಈ ಸುದ್ದಿಗೆ ಹಣೆಯಲ್ಲಿ ಸಿಂಧೂರ ಇಡುವ ಮೂಲಕ ಐಶ್ವರ್ಯ ರೈ ಗುನ್ನ ಹೊಡೆದಿದ್ದಾರೆ ಎನ್ನಲಾಗುತ್ತಿದೆ.
ಬಾಲಿವುಡ್ ಖ್ಯಾತ ಡಿಸೈನರ್ ಮನೀಶ್ ಮಲ್ಹೋತ್ರಾ ಡಿಸೈನ್ ಮಾಡಿದ ಉಡುಪು ಇದಾಗಿದ್ದು, ಸೀರೆಯಲ್ಲಿ ಐಶ್ವರ್ಯ ರೈ ಕಂಡು ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.
Aishwarya Rai Bachchan stunned everyone with her breathtaking look in white saree with red sindoor at the red carpet of the 78th Cannes Film Festival 2025.
#AishwaryaRaiBachchan |#CannesFilmFestival2025 |
#Cannes2025 | #FilmFestival | #CannesFilmFestival | pic.twitter.com/OuU5qFNOJz— TIger NS (@TIgerNS3) May 21, 2025