ಯಾವುದೇ ಗಾಡ್ ಫಾದರ್ ಇಲ್ಲದೇ ತಮಿಳು ಇಂಡಸ್ಟ್ರೀಯಲ್ಲಿ ಸ್ಟಾರ್ ಪಟ್ಟ ಪಡೆದವರು ಥಲಾ ಅಜಿತ್ ಕುಮಾರ್. ಬಹುಮುಖ ಪ್ರತಿಭೆಗೆ ಹೆಸರುವಾಸಿಯಾದ ಅಜಿತ್ ಸಿನಿಮಾಗಳನ್ನು ಹಬ್ಬದಂತೆ ಸೆಲೆಬ್ರೆಟ್ ಮಾಡುವ ದೊಡ್ಡ ಅಭಿಮಾನಿ ಬಳಗವಿದೆ. ಝೀರೋದಿಂದ ಹೀರೋ ಆದ ಅಜಿತ್ ಸಿನಿಮಾ ಇಂಡಸ್ಟ್ರೀಗೆ ಬಂದಿದ್ದೇ ರೋಚಕ.
ಅಜಿತ್ ಕಲಾ ಸೇವೆಯನ್ನು ಗುರುತಿಸಿ ಕೇಂದ್ರ ಸರ್ಕಾರ ಅವರಿಗೆ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿ ನೀಡಿದೆ. ಇತ್ತೀಚೆಗೆ ಅವರು ಸಂದರ್ಶನವೊಂದರಲ್ಲಿ ತಾವು ಸಿನಿಮಾ ಇಂಡಸ್ಟ್ರೀಗೆ ಪದಾರ್ಪಣೆ ಮಾಡಿದ್ದೇಕೆ ಅನ್ನೋದನ್ನು ರಿವೀಲ್ ಮಾಡಿದ್ದಾರೆ.
ತಮಿಳು ಇಂಡಸ್ಟ್ರೀಯ ಐಕಾನ್ ಆಗಿರುವ ಅಜಿತ್, ತಮ್ಮನ್ನು ತಾವು ಆಕಸ್ಮಿಕ ನಟ ಎಂದು ಪರಿಗಣಿಸುವುದಾಗಿ ಹೇಳಿಕೊಂಡಿದ್ದು, ಅವರಿಗೆ ಸಿನಿಮಾ ಎಂದಿಗೂ ಮೊದಲ ಆಯ್ಕೆಯಾಗಿರಲಿಲ್ಲ. ಸಾಲ ತೀರಿಸಲು ಮಾಡೆಲಿಂಗ್ ಶುರು ಮಾಡಿದೆ. ಆ ನಂತರ ಇಂಡಸ್ಟ್ರೀಗೆ ಬಂದಿರುವುದಾಗಿ ಹೇಳಿದ್ದಾರೆ.
ಅಜಿತ್ 18 ವರ್ಷದವನಾಗಿದ್ದಾಗ ಆಟೋಮೊಬೈಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ರೇಸಿಂಗ್ ಗೀಳು ಅಂಟಿಸಿಕೊಂಡಿದ್ದ ಅವರು, ಅದಕ್ಕಾಗಿ ರೇಸಿಂಗ್ ಹೋಗಲು ಮಾಡೆಲಿಂಗ್ ಕೈಗೆತ್ತಿಕೊಂಡರು. ಆಗ ಅವರಿಗೆ ಹಣ ದೊರೆಯಿತು. ಇಂಡಸ್ಟ್ರೀಗೆ ಬಂದ ಹಣ ಗಳಿಸಿದೆ. ಅದನ್ನು ಈಗ ರೇಸಿಂಗ್‌ಗೆ ಖರ್ಚು ಮಾಡುತ್ತಿದ್ದೆ ಎಂದಿದ್ದಾರೆ.
ಅಜಿತ್ ನಟನೆಯ ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾ ರಿಲೀಸ್ ಆಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇಂದು ಅವರ ಹುಟ್ಟುಹಬ್ಬ. ಅಭಿಮಾನಿಗಳು, ಇಂಡಸ್ಟ್ರೀಯವರು ಅಜಿತ್ ಜನ್ಮದಿನಕ್ಕೆ ಶುಭಾಶಯ ಕೋರಿದ್ದಾರೆ.
ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿಯ ನಂತರ ಅಜಿತ್ ಕುಮಾರ್ ಎಲ್ಲರ ಗಮನ ಸೆಳೆದಿದ್ದಾರೆ. ಚಲನಚಿತ್ರಗಳಲ್ಲಿ ಮತ್ತು ರೇಸಿಂಗ್ ಕಾರು ಚಾಲಕರಾಗಿ ಯಶಸ್ಸನ್ನು ನೀಡುತ್ತಿರುವಾಗ,