ದೇಶಾದ್ಯಂತ ಐಪಿಎಲ್ ಕಾವು ಜೋರಾಗಿದೆ. ಈ ಸಲಾ ಕಪ್ ನಮ್ಮದೇ ಅನ್ನೋ ಘೋಷ ವಾಕ್ಯವನ್ನು ನನಸು ಮಾಡಲು ಆರ್ ಸಿಬಿ ಪಣ ತೊಟ್ಟಿದೆ. ಮತ್ತೊಂದು ಐದು ಬಾರಿ ಚಾಂಪಿಯನ್ ಟ್ರೋಪಿ ಗೆದ್ದಿರುವ ಸಿಎಸ್ ಕೆ ಮಾತ್ರ ಪಟ್ಟಿಯಲ್ಲಿ ಕೊನೆ ಸ್ಥಾನದಲ್ಲಿದೆ. ಆದರೂ ಅಭಿಮಾನಿಗಳು ಸಿಎಸ್ ಕೆಗೆ ಜೈಕಾರ ಹಾಕುತ್ತಿದ್ದಾರೆ. ಅದಕ್ಕೆ ಕಾರಣ ಒನ್ ಅಂಡ್ ಒನ್ಲಿ ಥಲಾ ಥೋನಿ.
ಸಿಎಸ್ ಕೆ ಕ್ಯಾಪ್ಟನ್ ರುತುರಾಜ್ ಗಾಯಕ್ವಾಡ್ ಪಂದ್ಯದಿಂದ ಹೊರಗೆ ಉಳಿದಿರುವುದರಿಂದ, ಧೋನಿ ಅವರಿಗೆ ಕ್ಯಾಪ್ಟನ್ಸಿ ಜವಾಬ್ದಾರಿ ನೀಡಲಾಗಿದೆ. ಹೀಗಿದ್ದರೂ ಸಹ ಸಿಎಸ್ ಕೆ ನೀರಸ ಪ್ರದರ್ಶನ ತೋರುತ್ತಿದೆ. ನಿನ್ನೆ ಸಿಎಸ್ ಕೆ ಹಾಗೂ ಎಸ್ ಆರ್ ಹೆ ಪಂದ್ಯ ಚೆನ್ನೈನ ಚೆಪಕ್ ಸ್ಟೇಡಿಯಂನಲ್ಲಿ ನಡೆಯಿತು. ಈ ಪಂದ್ಯ ವೀಕ್ಷಿಸೋದಿಕ್ಕೆ ಕಾಲಿವುಡ್ ಥಲಾ ಅಜಿತ್ ಫ್ಯಾಮಿಲಿ ಸಮೇತ ಆಗಮಿಸಿದ್ದರು.
ಅಜಿತ್ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ಅಪರೂಪ. ರೇಸಿಂಗ್, ಟ್ರಿಪ್ ಅಂತಾ ಎಂಜಾಯ್ ಮಾಡುವ ಅವರು ನಿನ್ನೆ ಸಿಎಸ್ ಕೆ ಸಪೋರ್ಟ್ ಮಾಡಲು ಫ್ಯಾಮಿಲಿ ಸಮೇತ ಬಂದಿದ್ದರು. ಕ್ರಿಕೆಟ್ ಥಲಾ ಧೋನಿ, ಕಾಲಿವುಡ್ ಥಲಾ ಅಜಿತ್ ಅವರನ್ನು ನೋಡಿ ಫ್ಯಾನ್ಸ್ ಖುಷಿಯಾಗಿದ್ದಾರೆ.
ಅಜಿತ್ ದಂಪತಿ ನಿನ್ನೆ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದರು. ಹೀಗಾಗಿ ಆ ಖುಷಿಯಲ್ಲಿ ತಮ್ಮ ತವರಿನ ತಂಡಕ್ಕೆ ಸಪೋರ್ಟ್ ಮಾಡಲು ಮಕ್ಕಳು ಪತ್ನಿ ಜೊತೆ ಆಗಮಿಸಿದ್ದರು. ಅಜಿತ್ ಮಾತ್ರವಲ್ಲ ನಟ ಶಿವಕಾರ್ತಿಕೇಯನ್ ದಂಪತಿ, ನಟಿ ಶೃತಿ ಹಾಸನ್ ಕೂಡ ಸಿಎಸ್ ಕೆ ಹಾಗೂ ಎಸ್ ಆರ್ ಹೆಚ್ ಪಂದ್ಯ ವೀಕ್ಷಿಸಿದ್ದಾರೆ. ಎಸ್ ಆರ್ ಹೆಚ್ ವಿರುದ್ಧ ಸಿಎಸ್ ಕೆ ನಿನ್ನೆ ಸೋಲು ಕಂಡಿದೆ.