ಬಾಲಿವುಡ್ ಅಕ್ಷಯ್ ಕುಮಾರ್ ನಟಿಸುವ ಕೇಸರಿ 2 ಸಿನಿಮಾ ಇಂದು ತೆರೆಕಂಡಿದೆ. ಚಿತ್ರ ಬಿಡುಗಡೆಯಾಗಿ ಒಳ್ಳೆ ರೆಸ್ಪಾಸ್ಸ್ ಪಡೆದುಕೊಳ್ಳುತ್ತಿರುವ ಬೆನ್ನಲ್ಲೇ ಚಿತ್ರತಂಡ ಶಾಕ್ ಎದುರಿಸುವಂತಾಗಿದೆ. ಕೇಸರರಿ 2 ಚಿತ್ರ ರಿಲೀಸ್ ಕೆಲ ಗಂಟೆಗಳಲ್ಲಿಯೇ ಪೈರಸಿ ಕಾಟಕ್ಕೆ ಸಿಲುಕಿದೆ.
ಸಿನಿಮಾಗಳನ್ನು ಪೈರಾಸಿ ಮಾಡುವ ಒಂದು ದೊಡ್ಡ ಜಾಲವೇ ಇದೆ. ಅದಕ್ಕಾಗಿ ಅನೇಕ ವೆಬ್ ಸೈಟ್ ಗಳಿವೆ. ಈ ರೀತಿಯ ವೆಬ್ ಸೈಟ್ ಗಳೀಗ ಕೇಸರಿ 2 ಸಿನಿಮಾವನ್ನು ಪೈರಸಿ ಮಾಡಿವೆ ಎನ್ನಲಾಗುತ್ತಿದೆ.
ಇತ್ತೀಚೆಗೆ ರಿಲೀಸ್ ಆಗಿದ್ದ ಸಲ್ಮಾನ್ ಖಾನ್ ಸಿನಿಮಾ, ವಿಕ್ಕಿ ಕೌಶಲ್ ನಟನೆಯ ಛಾವಾ ಚಿತ್ರಗಳು ಕೂಡ ಪೈರಸಿ ಕಾಟಕ್ಕೆ ಸಿಲುಕಿದ್ದವು. ಸದ್ಯ ಕೇಸರಿ 2 ಚಿತ್ರ ಪೈರಸಿಯಾಗಿದ್ದು, ಕಿಲಾಡಿ ಅಕ್ಷಯ್ ಕುಮಾರ್ ಫ್ಯಾನ್ಸ್ ಬೇಸರಗೊಂಡಿದ್ದಾರೆ ಎನ್ನಲಾಗುತ್ತಿದೆ.
ದೇಶಭಕ್ತಿ ಕಥೆಯುಳ್ಳ ಕೇಸರಿ 2 ಸಿನಿಮಾಗೆ ಕರಣ್ ಸಿಂಗ್ ತ್ಯಾಗಿ ಆಕ್ಷನ್ ಕಟ್ ಹೇಳಿದ್ದಾರೆ. ಅಕ್ಷಯ್ ಕುಮಾರ್, ಅನನ್ಯಾ ಪಾಂಡೆ, ಆರ್. ಮಾಧವನ್ ಸೇರಿದಂತೆ ಹಲವು ಚಿತ್ರದಲ್ಲಿ ನಟಿಸಿದ್ದಾರೆ.