ಬೆಂಗಳೂರು: ನಾಡಿನೆಲ್ಲೆಡೆ ಅಕ್ಷಯ ತೃತೀಯ ಸಂಭ್ರಮ ಮನೆಮಾಡಿದ್ದು, ನಗರದ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ನಲ್ಲಿ ಹಬ್ಬದ ವಾತಾವರಣ ಮನೆಮಾಡಿತ್ತು. ಶುಭ ಮುಹೂರ್ತದಲ್ಲಿ ಪೂಜೆ ಸಲ್ಲಿಸಿ ಅಕ್ಷಯ ತೃತೀಯವನ್ನ ಬರಮಾಡಿಕೊಳ್ಳಲಾಯಿತು.
ಅಕ್ಷಯ ತೃತೀಯ ಅಂಗವಾಗಿ ಇಂದು ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ನ ಮಾಲೀಕ ಹಾಗೂ ವಿಧಾನ ಪರಿಷತ್ ಶಾಸಕರಾದ ಟಿ ಎ ಶರವಣ ಅವರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನಟಿ ಅನುಷಾ ರೈ ಅವರು ಭಾಗಿಯಾಗಿದ್ದರು.
ಸದ್ಯ ಬಸವನಗುಡಿಯಲ್ಲಿರುವ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ನಲ್ಲಿ ಹಬ್ಬದ ವಾತಾವರಣವೇ ಕಳೆಗಟ್ಟಿದೆ. ಹಲವು ಆಫರ್ಗಳನ್ನು ಇಲ್ಲಿ ನೀಡಲಾಗುತ್ತಿದೆ. ಅದರಂತೆ ಸಾಕಷ್ಟು ಗ್ರಾಹಕರು ಅಕ್ಷಯ ತೃತೀಯ ಅಂಗವಾಗಿ ಚಿನ್ನವನ್ನು ಖರೀದಿಸಿದ್ದಾರೆ.