ಬೆಂಗಳೂರು: ಕಾನೂನು ಸುವ್ಯವಸ್ಥೆ ಸರಿಯಾಗಿದೆ ಎಂದು ಎಲ್ಲಾ ಪ್ಯಾರಾ ಮೀಟರ್ಸ್ ಹೇಳುತ್ತಿವೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಿಲ್ಲ ಎಂಬ ವಿಪಕ್ಷಗಳ ಆರೋಪದ ವಿಚಾರವಾಗಿ ಮಾತನಾಡಿದ ಅವರು, ಕಾನೂನು ಸುವ್ಯವಸ್ಥೆ ಸರಿಯಾಗಿದೆ ಎಂದು ಎಲ್ಲಾ ಪ್ಯಾರಾ ಮೀಟರ್ಸ್ ಹೇಳುತ್ತಿವೆ.
ಕ್ರೈಂ ಪ್ರಕರಣಗಳು ಕಡಿಮೆಯಾಗಿವೆ. ಪೊಲೀಸ್ ಕಮಿಷನರ್ ಬ್ರೀಫ್ ಮಾಡಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕಡಿಮೆಯಾಗಿದೆ. ಸೈಬರ್ ಕೇಸ್ ಕಡಿಮೆಯಾಗಿದೆ. ಕಾನೂನು ಸುವ್ಯವಸ್ಥೆ ಎಲ್ಲಾ ಸರಿಯಾಗಿದೆ ಎಂದರು.
ಶುಗರ್ ಕಂಟ್ರೋಲ್ ಗೆ ತರಲು ಬೆಳಗಿನ ಜಾವ ತುಪ್ಪಕ್ಕೆ ಈ ಪುಡಿ ಬೆರೆಸಿ: ಆಮೇಲೆ ನೋಡಿ ಚಮತ್ಕಾರ!
ಒಳಮೀಸಲಾತಿಗೆ ಜಾತಿಗಣತಿ ವರದಿ ಬಳಸುವ ಚರ್ಚೆ ವಿಚಾರವಾಗಿ ಮಾತನಾಡಿ, ನ್ಯಾ. ನಾಗಮೋಹನ್ ದಾಸ್ ಅವರಿಗೆ ಈಗಾಗಲೇ ಕೊಟ್ಟಿದ್ದೇವೆ. ಈ ಜಾತಿಗಣತಿ ವರದಿಯನ್ನು ಅದರೊಂದಿಗೆ ಹೋಲಿಸುತ್ತಾರೆ. ಡಬಲ್ ಆದರೆ ಒಳ್ಳೆಯದಲ್ವಾ. ಕಮಿಷನ್ ಡಾಟಾ ಕಲೆಕ್ಟ್ ಮಾಡಲು ಶುರು ಮಾಡಿದೆ. ಈಗ ನಿಲ್ಲಿಸಿ ಅಂತ ಹೇಳೋದು ಸರಿಯಲ್ಲ ಎಂದು ಹೇಳಿದರು.