ಬೆಂಗಳೂರು:- ಇರಾನ್, ಇರಾಕ್, ಇಂಡೋನೇಷ್ಯಾ, ಪಾಕಿಸ್ತಾನ, ಬಾಂಗ್ಲಾದೇಶ ಇವೆಲ್ಲವೂ ಬಾರತಕ್ಕೆ ಸೇರಿದ್ದಾಗಿದೆ. ಆದರೆ ಇಂದು ಇವೆಲ್ಲವೂ ನಮ್ಮ ಪಾಲಿಗೆ ಇಲ್ಲದೇ ದೇಶ ಅತಂತ್ರ ಸ್ಥಿತಿಯಲ್ಲಿದೆ ಎಂದು ಹಿಂದೂ ಮುಖಂಡ ಪ್ರಮೋದ್ ಮುತಾಲಿಕ್ ಅವರು ಆತಂಕ ಹೊರ ಹಾಕಿದ್ದಾರೆ.
ಸಿದ್ದರಾಮಯ್ಯ ಆ ರೀತಿ ಹೇಳಿಯೇ ಇಲ್ಲ.. ಅಪಪ್ರಚಾರ ಆಗುತ್ತಿದೆ- ಹೆಚ್.ಎಂ.ರೇವಣ್ಣ ಸಮರ್ಥನೆ!
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಈ ಹಿಂದೆ ಇರಾನ್, ಇರಾಕ್, ಇಂಡೋನೇಷ್ಯಾ, ಪಾಕಿಸ್ತಾನ, ಬಾಂಗ್ಲಾದೇಶ ಇವೆಲ್ಲವೂ ಭಾರತಕ್ಕೆ ಸೇರಿದ್ದವು. ಆದರೆ ಇಂದು ಪ್ರಪಂಚದ ಬೇರೆ-ಬೇರೆ ದೇಶಗಳಾಗಿ ಗುರುತಿಸಿಕೊಂಡಿದೆ. ಇದನ್ನು ನಾವು ಅವಲೋಕನ ಮಾಡಿಕೊಳ್ಳಬೇಕು. ಮತ್ತೊಂದೆಡೆ ದೇಶಕ್ಕೆ ಸ್ವಾತಂತ್ರ‍್ಯ ಬಂದು 78 ವರ್ಷ ಆದ್ರೂ ಹಿಂದೂ ಎಂಬ ಕಾರಣಕ್ಕೆ ಈಗಲೂ ಅಪಮಾನ, ಅಪ್ರಚಾರ ಆಗುತ್ತಲೇ ಇದೆ. ಇದು ಧರ್ಮಕ್ಕೆ ಪೆಟ್ಟು ಕೊಡುತ್ತಿದೆ ಎಂದು ಬೇಸರ ಹೊರ ಹಾಕಿದರು.
ನಮ್ಮ ಭೂಮಿಯಲ್ಲೇ ನಮಗೆ ಅವಮಾನ ಆಗುತ್ತಿದೆ. ಅಂದ್ರೆ ಇದಕ್ಕೆ ಕಾರಣ ನಾವೇ. ನಾವೇ ದುರ್ಬಲರು, ಅಸಂಘಟಿತರಾಗಿದ್ದೇವೆ, ಹೇಡಿಗಳಾಗಿದ್ದೇವೆ. ಹೀಗಾಗಿ ಧೈರ್ಯ, ಸ್ಥೈರ್ಯ ಬರಬೇಕು ಎಂದರು.
ಸ್ವಾತಂತ್ರ‍್ಯ ಮುಂಚೆ ಬ್ರಿಟಿಷರೇ ಭಾರತ ಬಿಟ್ಟು ಹೋಗಿ ಅನ್ನೋ ಘೋಷಣೆ ಇತ್ತು. ಈಗ ಭಾರತ ಸೇರಿ ಹಿಂದೂ ಧರ್ಮವೂ ಅಪಾಯದಲ್ಲಿದೆ ಅಂತ ಘೋಷಣೆಯೊಂದಿಗೆ ಜೀವಿಸಬೇಕಿದೆ. ಹೀಗಾಗಿ ದೇಶ, ಧರ್ಮ ಉಳಿಸಿಕೊಳ್ಳಲೇಬೇಕಾದ ಪರಿಸ್ಥಿತಿ ಇದೆ. ಇದನ್ನು ಪ್ರತಿಯೊಬ್ಬ ಭಾರತೀಯರು ಅವಲೋಕನ ಮಾಡಿಕೊಳ್ಳಬೇಕಿದೆ ಎಂದು ಮುತಾಲಿಕ್ ಬೇಸರ ಹೊರ ಹಾಕಿದ್ದಾರೆ.