ವಾಷಿಂಗ್ಟನ್ :- ಅಮೆರಿಕದ 16 ವಯಸ್ಸಿನ ಟಿಕ್ಟಾಕ್ ಸ್ಟಾರ್ ಸಾವನ್ನಪ್ಪಿದ್ದಾರೆ. ಕಾರುಗಳಲ್ಲಿ ಓಡಾಡಿಕೊಂಡು ಟಿಕ್ ಟಾಕ್ ಮಾಡುತ್ತಾ ಹೆಸರುವಾಸಿಯಾಗಿದ್ದ ಹುಡುಗ ಉತ್ತರ ಕೆರೊಲಿನಾದ ಜೋಶುವಾ ಬ್ಲಾಕ್ಲೆಡ್ಜ್ ತನ್ನ ಮನೆಯಲ್ಲಿ ಸಾವಿಗೀಡಾಗಿದ್ದಾರೆ.
ಬಿಜೆಪಿಯಿಂದ ಯತ್ನಾಳ್ ಉಚ್ಛಾಟನೆ: ಪಟಾಕಿ ಸಿಡಿಸಿ ಕಾರ್ಯಕರ್ತರ ಸಂಭ್ರಮ!
ಅವನ ಸಾವಿಗೆ ಕಾರಣ ತಿಳಿದು ಬಂದಿಲ್ಲ. 16 ವರ್ಷದ ಬಾಲಕ ವೆಸ್ಟ್ ಕಾರ್ಟೆರೆಟ್ ಹೈಸ್ಕೂಲ್ನಲ್ಲಿ ಜೂನಿಯರ್ ಆಗಿದ್ದ.
ಶಾಲೆಯಲ್ಲಿ ಕುಸ್ತಿ ಮತ್ತು ಟ್ರ್ಯಾಕ್ನಲ್ಲಿ ತೊಡಗಿಸಿಕೊಂಡಿದ್ದ. ಟಿಕ್ಟಾಕ್ನಲ್ಲಿ ಒಂದು ಮಿಲಿಯನ್ಗಿಂತಲೂ ಹೆಚ್ಚು ಫಾಲೊವರ್ಸ್ ಹೊಂದಿದ್ದ. ಆತನ ಹೆಚ್ಚಿನ ವೀಡಿಯೊಗಳು ಅವನ ಯುವ ಜೀವನ ಮತ್ತು ಅವನ ಸ್ನೇಹಿತರು, ಗೆಳತಿಯೊಂದಿಗೆ ಕಳೆದ ಸಮಯದ ಬಗ್ಗೆ ಇದ್ದವು.
ಬ್ಲ್ಯಾಕ್ಲೆಡ್ಜ್ ತನ್ನ ಪೋಷಕರು, ಜೊನಾಥನ್ ಮತ್ತು ಜಾಕಿ ಬ್ಲ್ಯಾಕ್ಲೆಡ್ಜ್ ಮತ್ತು ಸಹೋದರ ಜೋಸಿಯಾ ಬ್ಲ್ಯಾಕ್ಲೆಡ್ಜ್ ಅವರನ್ನು ಅಗಲಿದ್ದಾರೆ.
ಆತನ ಗರ್ಲ್ಫ್ರೆಂಡ್ ಎಮ್ಮಿ ತನ್ನ ಪ್ರಿಯಕರ ಕುರಿತು ಪೋಸ್ಟ್ ಹಾಕಿದ್ದಾರೆ. ಮುದ್ದಾದ ಹುಡುಗನನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನೀನಿಲ್ಲದೆ ನಾನು ಇಲ್ಲಿ ಇರುತ್ತಿದ್ದೆ ಎಂದು ನಾನು ಎಂದಿಗೂ ಭಾವಿಸಿರಲಿಲ್ಲ ಎಂದು ಬೇಸರ ಹೊರ ಹಾಕಿದ್ದಾರೆ.