ಸಾಮಾನ್ಯವಾಗಿ ಸೆಲೆಬ್ರಿಟಿಗಳು ಅಂದರೆ ಹೈಫ್ ಜೀವನ ನಡೆಸುತ್ತಾರೆ. ಕಾರಿನಲ್ಲಿ ಓಡಾಡುತ್ತಾರೆ. ದೊಡ್ಡ ದೊಡ್ಡ ಹೋಟೆಲ್ ನಲ್ಲಿ ತಿಂಡಿ ಊಟ ಮಾಡ್ತಾರೆ ಅನ್ನೋದು ಜನಸಾಮಾನ್ಯರಿಗೆ ಇರುವ ಅಭಿಪ್ರಾಯ. ಆದರೆ ಕೆಲವರು ನಮ್ಮ ನಿಮ್ಮ ನಡುವೆ ಜನಸಾಮಾನ್ಯರ ರೀತಿ ಬದುಕುತ್ತಾರೆ. ಕೆಲವರು ಮೆಟ್ರೋದಲ್ಲಿ, ಮತ್ತೆ ಕೆಲವರು ಆಟೋದಲ್ಲಿ ಪಯಣಿಸುತ್ತಾರೆ. ಅಂತೇಯೇ ನಿನ್ನೆ ಕನ್ನಡದ ಖ್ಯಾತ ನಟಿಯೊಬ್ಬರು ಮಾಸ್ಕ್ ಹಾಕಿ ಆಟೋ ಏರಿದ್ದಾರೆ.
ನಟಿ ಅಮೃತಾ ಅಯ್ಯಂಗಾರ್ ಆಟೋ ಏರಿ ಸದಾಶಿವನಗರ ತಲುಪಿದ್ದಾರೆ. ಜೆಪಿ ನಗರದಿಂದ ಸದಾಶಿವ ನಗರಕ್ಕೆ ಬರೋದಿಕ್ಕೆ ಬರೋಬ್ಬರಿ ಎರಡು ಗಂಟೆ ಸಮಯ ಹಿಡಿದೆ. ನಟಿ ಅಮೃತಾ ಬೆಂಗಳೂರು ಟ್ರಾಫಿಕ್ ಗೆ ಹೈರಾಣಾಗಿದ್ದಾರೆ. ಈ ಕುರಿತು ತಮ್ಮ ಇನ್ ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.
ಜೆಪಿ ನಗರದಿಂದ ಸದಾಶಿವನಗರಕ್ಕೆ ತಲುಪಲು ಬರೋಬ್ಬರಿ 1 ಗಂಟೆ 45 ನಿಮಿಷ ಆಯ್ತು ಫ್ರೆಂಡ್ಸ್. ಎರಡು ಗಂಟೆ ಬಳಿಕ ನಾನು ಸದಾಶಿವನಗರ ತಲುಪಿದೆ ಎಂದು ವಿಡಿಯೋ ಫೋಸ್ಟ್ ಮಾಡಿದ್ದಾರೆ.
ಸ್ವತಃ ಮನೆ ಕಾರು ಇಲ್ಲ ಎಂದಿದ್ದ ನಟಿ
ಅಮೃತಾ ಅಯ್ಯಂಗಾರ್ ಪಾಪ್ ಕಾರ್ನ್ ಮಂಕಿ ಟೈಗರ್, ಶಿವಾರ್ಜುನ, ಬಡವ ರಾಸ್ಕಲ್, ಲವ್ ಮಾಕ್ಟೇಲ್ , ಫ್ಯಾಮಿಲಿ ಪ್ಯಾಕ್, ವಿಂಡೋ ಸೀಟ್, ಓ, ಅಬ್ಬಬ್ಬಾ, ಗುರುದೇವ್ ಹೊಯ್ಸಳ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಇತ್ತೀಚೆಗೆ ಸಂದರ್ಶನವೊಂದರಲ್ಲಿ ತಮಗೆ ಸ್ವತಃ ಕಾರು ,ಮನೆ ಇಲ್ಲದಿರುವುದಾಗಿ ತಿಳಿಸಿದ್ದರು.