ಬೆಂಗಳೂರು:- ಎಲೆಕ್ಟ್ರಿಕ್ ಬೈಕ್ ರಿಪೇರಿ ಮಾಡುವಾಗ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಅವಘಡದಿಂದ ಮೆಕ್ಯಾನಿಕ್ ಗೆ ಗಂಭೀರ ಗಾಯವಾಗಿರುವ ಘಟನೆ ಚಂದ್ರಾಲೇಔಟ್ ಠಾಣೆ ವ್ಯಾಪ್ತಿಯ ನಾಯಂಡಹಳ್ಳಿ ಬಳಿಯ ಗ್ಯಾರೆಜ್ ಒಂದರಲ್ಲಿ ಜರುಗಿದೆ.
ಬೈಕ್ ರಿಪೇರಿ ಮಾಡ್ತಿದ್ದ ಮೆಕಾನಿಕ್ ಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 39 ವರ್ಷದ ಸುನೀಲ್ ಎಂಬಾತನಿಗೆ ಗಾಯವಾಗಿದೆ. ಸಂಜೆ 5.30ರ ಸುಮಾರಿಗೆ ನಡೆದಿರುವ ಘಟನೆ ಜರುಗಿದೆ. ಗಾಯಾಳು ಸುನೀಲ್ನನ್ನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಘಟನಾ ಸ್ಥಳಕ್ಕೆ ಚಂದ್ರಾಲೇಔಟ್ ಪೊಲೀಸ್ರು ಭೇಟಿ ಪರಿಶೀಲನೆ ಮಾಡಿದ್ದಾರೆ.