ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ತಮ್ಮ ಅದ್ಭುತ ನಿರೂಪಣೆ ಮೂಲಕ ಕನ್ನಡ ಕಿರುತೆರೆ ಲೋಕದಲ್ಲಿ ಹೆಸರು ಮಾಡಿರುವ ಅನುಶ್ರೀ ಈಗ ಹೊಸ ಕಾರಿನ ಒಡತಿಯಾಗಿದ್ದಾರೆ.
ಆಂಕರ್ ಅನುಶ್ರೀ ಟೋಯೋಟಾ ಇನ್ನೋವಾ ಹೈಕ್ರಾಸ್ ಹೈಬ್ರಿಡ್ ಕಾರಿನ ಮಾಲೀಕೆಯಾದ್ದಾರೆ. ಈ ಕಾರಿನ ಆರಂಭಿಕ ಬೆಲೆಯೇ 25 ಲಕ್ಷ ರೂಪಾಯಿಗಳು. ಕಾರಿನ ಟಾಪ್ ಎಂಡ್ ಮಾಡೆಲ್ಲಿನ ಬೆಲೆ 40 ಲಕ್ಷ ರೂಪಾಯಿಗಳು.
ಟೊಯೊಟಾ ಇನ್ನೋವಾ ಹೈಕ್ರಾಸ್ ಹೈಬ್ರಿಡ್ ಕಾರು ಪೆಟ್ರೋಲ್ ಹಾಗೂ ಬ್ಯಾಟರಿ ಎರಡೂ ತಂತ್ರಜ್ಞಾನವನ್ನು ಹೊಂದಿದೆ. ಕಾರು ಚಲಾಯಿಸುವಾಗ ಬ್ಯಾಟರಿ ಮುಗಿದು ಹೋದರೆ, ಪೆಟ್ರೋಲ್ಗೆ ಶಿಫ್ಟ್ ಆಗಬಹುದು. ಇದರಿಂದ ಚಾರ್ಜಿಂಗ್ ಪಾಯಿಂಟ್ ಅನ್ನು ಹುಡುಕುವ ಅಗತ್ಯವಿರುವುದಿಲ್ಲ.
ಅನುಶ್ರೀ ಮದುವೆ ಯಾವಾಗ?
ಅನುಶ್ರೀ ಮದುವೆ ಬಗ್ಗೆ ಆಗಾಗಾ ದೊಡ್ಡ ಸುದ್ದಿಯಾಗುತ್ತದೆ. ಈ ವರ್ಷವೇ ಅನುಶ್ರೀ ಹೊಸ ಬಾಳಿಗೆ ಕಾಲಿಡಲಿದ್ದಾರೆ ಎಂಬ ಸುದ್ದಿ ಇದೆ. ಇತ್ತೀಚೆಗೆ ತಮ್ಮ ಮದುವೆ ಬಗ್ಗೆ ಮಾತನಾಡಿದ್ದ ಅನುಶ್ರೀ, ತಮ್ಮ ಹುಡುಗ ತುಂಬ ರೆಸ್ಪಾನ್ಸಿಬಲ್ ಆಗಿರಬೇಕು. ನನ್ನ ಪರವಾಗಿ ಅಲ್ಲ ಅವನ ಲೈಫ್ ಪರವಾಗಿ ರೆಸ್ಪಾನ್ಸಿಬಲ್ ಆಗಿದ್ರೆ ಸಾಕು. ಅವನು ಬದುಕಬೇಕು, ನನ್ನನ್ನು ಬದುಕೋಕೆ ಬಿಡಬೇಕು ಎಂದಿದ್ದಾರೆ. ಈ ವರ್ಷವೇ ಮದುವೆ ಆಗುತ್ತೆ ಗ್ಯಾರಂಟಿ ಎಂದು ಖುಷಿಯಿಂದ ಹೇಳಿಕೊಂಡಿದ್ದರು.