ಅರಳು ಹುರಿದಂಗೆ ಪಟ ಪಟ ಅಂತಾ ಮಾತನಾಡುವ ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ. ಕಿರುತೆರೆ, ಹಿರಿತೆರೆ ಎರಡರಲ್ಲಿಯೂ ಮಿಂಚಿರುವ ಮಿಂಚುತ್ತಿರು ಮಂಗಳೂರಿನ ಈ ಸುಂದರಿ ಮದುವೆ ಬಗ್ಗೆ ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದಾರೆ. ಅನುಶ್ರೀಗೆ ಹೋದಲ್ಲಿ ಬಂದಿಲ್ಲ ಸದಾ ಎದುರಾಗುತ್ತಿದ್ದ ಪ್ರಶ್ನೆ ನಿಮ್ಮ ಮದುವೆ ಯಾವಾಗ ಎಂದು? ಅದಕ್ಕೀಗ ಅನುಶ್ರೀ ಉತ್ತರ ಕೊಟ್ಟಿದ್ದಾರೆ.
ವಿದ್ಯಾಪತಿ ಸಿನಿಮಾ ಪ್ರಚಾರದ ಬಗ್ಗೆ ತಮ್ಮ ಅಭಿಮಾನಿಗಳಿಗೆ ಆಂಕರ್ ಅನುಶ್ರೀ ಗುಡ್ ನ್ಯೂಸ್ ಕೊಟ್ಟಿದ್ದಾರೆ. ತಮ್ಮ ಇನ್ ಸ್ಟಾಗ್ರಾಂನಲ್ಲಿ ವಿದ್ಯಾಪತಿ ಚಿತ್ರದ ಬಗ್ಗೆ ನಟ ನಾಗಭೂಷಣ್ ಹಾಗೂ ನಟಿ ಮಲೈಕಾ ಜೊತೆ ಅನುಶ್ರೀ ಸಾಕಷ್ಟು ಚರ್ಚೆ ನಡೆಸಿದ್ದಾರೆ. ಇದೇ ವೇಳೆ ಮಲೈಕಾ ಅಕ್ಕ ನಿಮ್ಮ ಮದುವೆ ಯಾವಾಗ ? ಹೇಗೆ ಇರಬೇಕು ನಿಮ್ಮ ಹುಡುಗ ಎಂದು ಅನುಶ್ರೀಗೆ ಕೇಳಿದ್ದಾರೆ. ಅದಕ್ಕೆ ಉತ್ತರಿಸಿರುವ ಅನುಶ್ರೀ “ಹುಡುಗ ಬಹಳ ರೆಸ್ಪಾನ್ಸಿಬಲ್ ಆಗಿರಬೇಕು. ನನ್ನ ಪರವಾಗಿ ಅಲ್ಲ, ಅವನ ಲೈಫ್ ಬಗ್ಗೆ ರೆಸ್ಪಾನ್ಸಿಬಲ್ ಆಗಿದ್ರೆ ಸಾಕು. ಅವನು ಬದುಕಬೇಕು, ನನ್ನನ್ನು ಬದುಕೋಕೆ ಬಿಡಬೇಕು ಎಂದಿದ್ದಾರೆ. “ಈ ವರ್ಷ ನನ್ನ ಮದುವೆ ಗ್ಯಾರೆಂಟಿ” ಎಂದು ಅನುಶ್ರೀ ಹೇಳಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿದೆ.
ಕಷ್ಟಪಟ್ಟು ಮೇಲೆ ಬಂದು ಅನುಶ್ರೀ ಇಂದು ಕರುನಾಡು ಮೆಚ್ಚಿದ ಮನೆ ಮಗಳಾಗಿದ್ದಾಳೆ. ನಿರೂಪಣೆಯಲ್ಲಿ ಅನುಶ್ರೀ ಅವರನ್ನ ಬೀಟ್ ಮಾಡೋಕೆ ಸಾಧ್ಯನೇ ಇಲ್ಲ ಅನ್ನೋವಷ್ಟರ ಮಟ್ಟಿಗೆ ಅವರು ಬೆಳೆದಿದ್ದಾರೆ. ನಟನೆ, ನಿರೂಪಣೆ ಎರಡಲ್ಲಿಯೂ ಸೈ ಎನಿಸಿಕೊಂಡಿರುವ ಅನುಶ್ರೀ ಮದುವೆ ಮಾತು ಈಗ ಫುಲ್ ವೈರಲ್ ಆಗುತ್ತಿದೆ.