ಆನೇಕಲ್ : ಪಟ್ಟಣದ ಶ್ರೀರಾಮ ಕುಟಿರದಲ್ಲಿ ಇಂದು ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ದ್ವಿಚಕ್ರವಾಹನಗಳ ಮೇಳ ಆಯೋಜನೆ ಅಯೋಜನ ಮಾಡಲಾಗಿತ್ತು. ಡ್ರೈ ಎಕ್ಸ್ ಮತ್ತು ವೆಂಕ್ಟೇಶ್ವರ ಮೋಟರ್ಸ್ ಮಾಲೀಕರಾದ ನಂಜುಂಡಪ್ಪ ನೇತೃತ್ವದಲ್ಲಿ ಡ್ರೈವ್ ಎಕ್ಸ್ , ವೆಂಕಟೇಶ್ವರ ಮೋಟಾರ್ಸ್, ಲಯನ್ಸ್ ಕ್ಲಬ್ ರಾಗಿನಾಡು ಹಾಗೂ ನಿಸರ್ಗ ಸೇವಾ ಸಂಸ್ಥೆ ಸಹಭಾಗಿತ್ವದಲ್ಲಿ ಆರೋಗ್ಯ ತಪಾಸಣಾ ಶಿಬಿರವನ್ನು ನಡೆಸಲಾಯಿತು.
ಆನೇಕಲ್ ಪಟ್ಟಣದ ನೂರಾರು ಸಾರ್ವಜನಿಕರು ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು ಜೊತೆಗೆ ಡ್ರೈವ್ ಎಕ್ಸ್ ಹಾಗೂ ಶ್ರೀ ವೆಂಕಟೇಶ್ವರ ಮೋಟಾರ್ಸ್ ವತಿಯಿಂದ ನಡೆಸಿದ ದ್ವಿಚಕ್ರವಾಹನಗಳ ಮೇಳದಲ್ಲಿ ನೂರಾರು ಮಂದಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು ಈ ಕುರಿತು ಮಾತನಾಡಿದ ವೆಂಕಟೇಶ್ವರ ಮೋಟರ್ಸ್ ನಂಜುಂಡಪ್ಪ ಗ್ರಾಮೀಣ ಭಾಗದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಆರೋಗ್ಯ ತಪಾಸಣಾ ಶಿಬಿರ ನಡೆಸಲಾಗುತ್ತಿದೆ. ಜೊತೆಗೆ ವಾಹನ ಮೆಳಕ್ಕೂ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇಲ್ಲಿ ಮೇಳದಲ್ಲಿ ದ್ವಿಚಕ್ರ ವಾಹನಗಳ ಎಕ್ಸ್‌ಚೇಂಜ್ ಗೂ ಅವಕಾಶವಿದೆ ಎಂದು ತಿಳಿಸಿದರು.
ಡ್ರೈವ್ ಎಕ್ಸ್ ಆನೇಕಲ್ ನಲ್ಲಿ ನೂತನ ಶಾಖೆ ಆರಂಭಿಸಿದ್ದು ಒಳ್ಳೆಯ ಗುಣಮಟ್ಟದ ಸೆಕೆಂಡ್ಸ್ ವಾಹನಗಳನ್ನ ಮಾರಾಟ ಆರಂಭಿಸಿದೆ. 100 ಕ್ಕೂ ಹೆಚ್ಚು ವಿವಿಧ ಪರೀಕ್ಷೆಗಳನ್ನು ನಡೆಸಿ ಬಳಸಿದ ವಾಹನಗಳನ್ನ ಖರೀದಿಸಿ ವಾರೆಂಟಿ ಜೊತೆಗೆ ಗ್ರಾಹಕರಿಗೆ ವಿತರಣೆ ಮಾಡುವ ಕೆಲಸವನ್ನು ಮಾಡುತ್ತಿದೆ. ಆನೇಕಲ್ ಪಟ್ಟಣದ ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಮನವಿ ಮಾಡಲಾಗಿದೆ..