Close Menu
Ain Live News
    Facebook X (Twitter) Instagram YouTube
    Wednesday, June 4
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಅರಣ್ಯ ಸಂರಕ್ಷಣೆ ಮತ್ತು ಸಂವರ್ಧನೆಗೆ ಈಗ ಅನಿಲ್ ಕುಂಬ್ಳೆ ಬಲ ದೊರೆತಿದೆ: ಈಶ್ವರ ಖಂಡ್ರೆ

    By Author AINJune 3, 2025
    Share
    Facebook Twitter LinkedIn Pinterest Email
    Demo

    ಬೆಂಗಳೂರು, ಜೂ.3: ವನ್ಯಜೀವಿ, ಅರಣ್ಯ ಸಂರಕ್ಷಣೆ ಮತ್ತು ಸಂವರ್ಧನೆಗೆ ಈಗ ಅನಿಲ್ ಕುಂಬ್ಳೆ ಬಲ ದೊರೆತಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಹೇಳಿದ್ದಾರೆ. ಬೆಂಗಳೂರಿನಲ್ಲಿ ಇಂದು ತಮ್ಮನ್ನು ಭೇಟಿ ಮಾಡಿದ್ದ ಖ್ಯಾತ ಮಾಜಿ ಕ್ರಿಕೆಟಿಗ ಹಾಗೂ ಪರಿಸರ ಪ್ರೇಮಿ ಅನಿಲ್ ಕುಂಬ್ಳೆ ಅವರೊಂದಿಗೆ ಸಮಾಲೋಚಿಸಿದ ಅವರು,

    ವನ್ಯಜೀವಿ, ಅರಣ್ಯ, ಪರಿಸರದ ಬಗ್ಗೆ ಅಪಾರ ಕಾಳಜಿ ಮತ್ತು ಪ್ರೀತಿ ಹೊಂದಿರುವ ಅನಿಲ್ ಕುಂಬ್ಳೆ ಅವರು ಯಾವುದೇ ಸಂಭಾವನೆ ಇಲ್ಲದೆ ಅರಣ್ಯ, ವನ್ಯಜೀವಿ ರಾಯಭಾರಿ ಆಗಲು ಸಮ್ಮತಿಸಿದ್ದಾರೆ ಇದು ಅವರ ಪರಿಸರ ಕಾಳಜಿ, ಬದ್ಧತೆಗೆ ಸಾಕ್ಷಿಯಾಗಿದೆ ಎಂದರು.

    ತಮ್ಮ ಲೆಗ್ ಸ್ಪಿನ್ ಮೋಡಿಯಿಂದ ಭಾರತ ತಂಡದ ಹಲವು ಗಲುವಿನಲ್ಲಿ ಪ್ರಮುಖ ಪಾತ್ರ ವಹಿಸಿರುವ ಕುಂಬ್ಳೆ ಅವರು ಕರ್ನಾಟಕದ ಅಷ್ಟೇ ಅಲ್ಲ ಭಾರತದ ಹೆಮ್ಮೆಯ ಪುತ್ರರಾಗಿದ್ದಾರೆ. ಜಿಂ ಲೇಕರ್ ಬಳಿಕ ಒಂದು ಟೆಸ್ಟ್ ಪಂದ್ಯದ ಒಂದು ಇನ್ನಿಂಗ್ಸ್ ನಲ್ಲಿ ಎಲ್ಲ 10 ವಿಕೆಟ್ ಪಡೆದ ಸಾಧನೆ ಮಾಡೆದ ಮಾಂತ್ರಿಕ ಬೌಲರ್ ಎಂದರು.

    ದೇಹಕ್ಕೆ ಒಳ್ಳೆಯದು ಅಂತ ಹೆಚ್ಚು ಖರ್ಜೂರ ತಿನ್ನೋ ಮುನ್ನ ಹುಷಾರ್! ಈ ಭಾಗಕ್ಕೆ ಹಾನಿಕಾರಕ!

    110 ಟೆಸ್ಟ್ ಪಂದ್ಯಗಳನ್ನು ಆಡಿ 619 ವಿಕೆಟ್ ಪಡೆದಿರುವ ಅನಿಲ್ ಕುಂಬ್ಳೆ ಅವರು ಜಂಬೂ ಎಂದೂ ಖ್ಯಾತರಾಗಿದ್ದಾರೆ. ಅದೇ ರೀತಿ 264ಕ್ಕೂ ಅಧಿಕ ಏಕ ದಿನ ಪಂದ್ಯ ಆಡಿರುವ ಅವರು 337 ವಿಕೆಟ್ ಕಬಳಿಸಿದ್ದಾರೆ. ಕ್ರಿಕೆಟ್ ಪ್ರಿಯರ ಹೃದಯದಲ್ಲಿ ನೆಲೆಸಿದ್ದಾರೆ. ಇವರು ಅರಣ್ಯ, ವನ್ಯಜೀವಿ ಸಂರಕ್ಷಣೆಯ ಬಗ್ಗೆ ಪ್ರಚಾರ, ಪ್ರಸಾರ ಮಾಡಲಿದ್ದು, ಜನರಲ್ಲಿ ಜಾಗೃತಿ ಮೂಡಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

    ಈ ಹಿಂದೆ ಕರ್ನಾಟಕ ವನ್ಯಜೀವಿ ಮಂಡಳಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅನುಭವವೂ ಕುಂಬ್ಳೆ ಅವರಿಗಿದೆ. ಅನಿಲ್ ಕುಂಭ್ಳೆ ಅವರು ರಾಯಭಾರಿ ಆಗುತ್ತಿರುವುದು ಅರಣ್ಯ ಸಂರಕ್ಷಣೆ ಮತ್ತು ಅರಣ್ಯ ಸಂವರ್ಧನೆಗೆ ಬಲ ನೀಡಲಿದೆ ಎಂದು ಈಶ್ವರ ಖಂಡ್ರೆ ಅಭಿಪ್ರಾಯಪಟ್ಟರು. ಅನಿಲ್ ಕುಂಬ್ಳೆ ಮಾತನಾಡಿ, ತಮ್ಮನ್ನು ಅರಣ್ಯ, ವನ್ಯಜೀವಿ ರಾಯಭಾರಿಯಾಗಿ ನೇಮಕ ಮಾಡಲು ಸರ್ಕಾರ ನಿರ್ಧರಿಸಿರುವುದಕ್ಕೆ ಧನ್ಯವಾದ ಅರ್ಪಿಸಿದರು. ಇಲಾಖೆಯ ಜೊತೆಗೂಡಿ ಅರಣ್ಯ, ವನ್ಯಜೀವಿ ಸಂರಕ್ಷಣೆ ಮತ್ತು ಸಂವರ್ಧನೆಗೆ ಶ್ರಮಿಸುವುದಾಗಿ ತಿಳಿಸಿದರು.

    Demo
    Share. Facebook Twitter LinkedIn Email WhatsApp

    Related Posts

    RCB ಸಂಭ್ರಮಾಚರಣೆ ವೇಳೆ ಕಾಲ್ತುಳಿತ: 10ಕ್ಕೂ ಹೆಚ್ಚು ಮಂದಿ ಸಾವು – DCM ಡಿಕೆಶಿ ಹೇಳಿದ್ದೇನು?

    June 4, 2025

    ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ: 10ಕ್ಕೂ ಹೆಚ್ಚು ಮಂದಿ ಸಾವು..ಸರ್ಕಾರಕ್ಕೆ ಛೀಮಾರಿ ಹಾಕಿದ ಪರಿಷತ್ ಶಾಸಕ ಟಿಎ ಶರವಣ!

    June 4, 2025

    RCB ಸಂಭ್ರಮಾಚರಣೆ ಆಘಾತ: 11 ಮಂದಿ ಸಾವು.. ಛೇ, ಛೇ ಇಂಥಾ ಸೆಲಬ್ರೇಷನ್ ಬೇಕಿತ್ತಾ!?

    June 4, 2025

    ಆರ್ ಸಿಬಿಯ ಸಂಭ್ರಮಾಚರಣೆಯ ಆಘಾತ: ವಿಧಾನಸೌಧ- ಕಬ್ಬನ್ ಪಾರ್ಕ್ ಮೆಟ್ರೋ ಸ್ಟೇಷನ್​ಗಳು ಬಂದ್!

    June 4, 2025

    RCB ಸಂಭ್ರಮಾಚರಣೆಯಲ್ಲಿ ಸೂತಕ: ಸಾವಿನ ಸಂಖ್ಯೆ 10ಕ್ಕೆ ಏರಿಕೆ – 50ಕ್ಕೂ ಹೆಚ್ಚು ಜನರು ಅಸ್ವಸ್ಥ

    June 4, 2025

    IPL Celebration: ಸಂಭ್ರಮದಲ್ಲೂ ಸೂತಕ: RCB ಅಭಿಮಾನಿಗಳ ನೂಕುನುಗ್ಗಲು – ನಾಲ್ವರು RCB ಅಭಿಮಾನಿಗಳು ಸಾವು..!

    June 4, 2025

    IPL Celebration: ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತ: ಕಾಲು ಮುರಿದುಕೊಂಡ ಯುವಕ – ಹಲವರಿಗೆ ಗಾಯ!

    June 4, 2025

    IPL Winners: ಕಿಂಗ್ ಕೊಹ್ಲಿಗೆ ಕನ್ನಡ ಧ್ವಜ ನೀಡಿ ಬೆಂಗಳೂರಿಗೆ ಸ್ವಾಗತ ಮಾಡಿದ ಡಿಕೆಶಿ..!

    June 4, 2025

    RCB ಅಭಿಮಾನಿಗಳ ಪ್ರೀತಿಗೆ ಕೊಹ್ಲಿ ಭಾವುಕ..ಬಸ್‌’ನಲ್ಲಿ ಕಿಂಗ್‌ ಕ್ಯೂಟ್‌ ಮೂಮೆಂಟ್‌ video ವೈರಲ್!

    June 4, 2025

    RCB ವಿಕ್ಟರಿ ಎಫೆಕ್ಟ್.. ರಾಜ್ಯದಲ್ಲಿ ಒಂದೇ ದಿನ ಎಷ್ಟು ಕೋಟಿ ಮದ್ಯ ಮಾರಾಟವಾಯ್ತು ಗೊತ್ತಾ..?

    June 4, 2025

    ಹೈಕೋರ್ಟ್‌ ಚಾಟಿಗೆ ಬಗ್ಗದ ದುರಂಕಾರಿ ಕಮಲ್‌ ಹಾಸನ್..ಮತ್ತೆ ಧಿಮಾಕಿನ ಮಾತನಾಡಿದ ತಮಿಳು ನಟ!

    June 4, 2025

    ಗೋಲ್ಡ್ ಬೆಲೆಯಲ್ಲಿ ಏರಿಕೆ! ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ನೋಡಿ

    June 4, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.