Close Menu
Ain Live News
    Facebook X (Twitter) Instagram YouTube
    Thursday, June 26
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    Milk Rate Hike: ರಾಜ್ಯದ ಜನತೆಗೆ ಮತ್ತೊಂದು ಬೆಲೆ ಏರಿಕೆ ಬಿಸಿ ಫಿಕ್ಸ್..! ಮತ್ತೆ ಹಾಲಿನ ದರ ಏರಿಕೆ..!?

    By AIN AuthorDecember 8, 2023
    Share
    Facebook Twitter LinkedIn Pinterest Email
    Demo

    ಬೆಂಗಳೂರು: ಈಗಾಗಲೇ  ಬೆಲೆ ಏರಿಕೆ ಬಿಸಿಯಿಂದ ಜನ ಬೆಂದು ಹೋಗಿದ್ದಾರೆ. ಇದ್ರ ನಡುವೆ ನಡುವೆ ರಾಜ್ಯದ ಜನತೆಗೆ  ಮತ್ತೊಂದು ದರ ಏರಿಕೆಯ ಬಿಸಿ ಕಾದಿದೆ. ಹೌದು ಮತ್ತೆ ಹಾಲಿನ ದರ ಪರಿಷ್ಕರಣೆ ಮಾಡಲು ಕೆಎಂಎಫ್ ಮುಂದಾಗಿದೆ. ಈ ಕುರಿತು ಜನವರಿಯಲ್ಲಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು KMF ರೆಡಿಯಾಗಿದೆ.ಹಾಗಾದ್ರೆ ಯಾವೆಲ್ಲಾ ಹಾಲು ಎಷ್ಟೆಷ್ಟು ಆಗುತ್ತೆ ಅನ್ನೋ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ

    ರಾಜ್ಯದ ಜನರಿಗೆ ಒಂದಲ್ಲ ಒಂದು ಬೆಲೆ ಏರಿಕೆ ಬಿಸಿ ಬೀಳ್ತಾನೆ ಇದೆ. ಈಗಾಗಲೇ ಹಲವು ಬೆಲೆ ಏರಿಕೆಯಿಂದ ತತ್ತರಿಸಿರೋ ಜನತೆಗೆ ಶೀಘ್ರದಲ್ಲೇ ನಂದಿನಿ ಹಾಲಿನ ದರವೂ ಹೆಚ್ಚದ ಮುನ್ಸೂಚನೆ ಸಿಕ್ಕಿದೆ. ಆರ್ಥಿಕ ನಿರ್ವಹಣೆ ನಷ್ಟದ ಹಿನ್ನಲೆ ನಂದಿನಿ ಹಾಲು ಪರಿಷ್ಕರಣೆಗೆ ಅನುಮತಿ ನೀಡುವಂತೆ ಸರ್ಕಾರದ ಕದ ತಟ್ಟಲು ಕೆಎಂಎಫ್ ನಿರ್ಧಾರ ಮಾಡಿದೆ. ಹೌದು.. ಕಳೆದ ನಾಲ್ಕು ತಿಂಗಳ ಹಿಂದೆಯಷ್ಟೆ ನಂದಿನಿ ಹಾಲಿನ ದರ ಹೆಚ್ಚಳ ಮಾಡಿತ್ತು.

    ಇದೀಗ ಹಾಲಿನ ದರ ಮತ್ತೆ ಹೆಚ್ಚಳ ಮಾಡಲು ಕೆಎಂಎಫ್ ಸಿದ್ದತೆ ನಡೆಸಿಕೊಳ್ಳುತ್ತಿದೆ. ಈಗಾಗಲೇ ಕೆಎಂಎಫ್ ಅಧಿಕಾರಿಗಳ ಮಟ್ಟದಲ್ಲಿ ದರ ಏರಿಕೆ ಕುರಿತು ಚಿಂತನೆ ನಡೆದಿದೆ. ಹಾಲಿನ ದರ ಪರಿಷ್ಕರಣೆಗೆ 14 ಹಾಲು  ಒಕ್ಕೂಟದಿಂದ ಕೆಎಂಎಫ್ ಗೆ ಮನವಿ ಬಂದಿದೆ. ಹೀಗಾಗಿ ಹೊಸ ವರ್ಷದ ಆರಂಭದಲ್ಲೆ ನಂದಿನಿ ಹಾಲಿನ ದರ ಏರಿಕೆ ಪ್ರಸ್ತಾವನೆ ಸಲ್ಲಿಸಲು ಕೆಎಂಎಫ್ ಆಡಳಿತ ಮಂಡಳಿ ಸಿದ್ಧತೆ ಮಾಡಿಕೊಂಡಿದೆ. ಈ ಕುರಿತು ಸಿಎಂ ಸಿದ್ರಾಮಯ್ಯ ಅವರನ್ನು ಜನವರಿ ಆರಂಭದಲ್ಲಿ ಭೇಟಿಯಾಗಲು ಕೆಎಂಎಫ್ ಅಧ್ಯಕ್ಷ, ಎಂಡಿ ನಿರ್ಧರಿಸಿದ್ದಾರೆ.

    ಕೆಎಂಎಫ್ ಆರ್ಥಿಕ ನಷ್ಟದ ಹಿನ್ನಲೆ 5 ರೂ ಪ್ರತಿ ಲೀಟರ್ ಗೆ ದರ ಹೆಚ್ಚಿಸುವಂತೆ ಮನವಿ ಮಾಡಲು ನಿರ್ಧರಿಸಿದೆ. ಕಳೆದ ಆಗಸ್ಟ್ 1 ರಿಂದ ನಂದಿನಿ ಪ್ರತೀ ಲೀಟರ್ ಗೆ 3 ರೂಪಾಯಿ ಹೆಚ್ಚಳ ಮಾಡಿತ್ತು. 5 ರೂ ಹೆಚ್ಚಳ ಮಾಡಲು ಮನವಿ ಮಾಡಿದ್ದಕ್ಕೆ ಕೇವಲ ಮೂರು ರೂಪಾಯಿ ಹೆಚ್ಚಳ ಮಾಡಿತ್ತು. ಹೀಗಾಗಿ ಲೀಟರ್ ಗೆ 3 ರೂ ಹೆಚ್ಚುವರಿ ಹಣ ರೈತರಿಗೆ ಕೆಎಂಎಫ್ ನೀಡಿತ್ತು. ಆದರೆ ಒಕ್ಕೂಟಗಳಿಂದ ದರ ಏರಿಕೆ ಆದ್ರೂ ಅವರಿಗೆ ಹೆಚ್ಚುವರಿ ಹಣ ನೀಡಿದ್ದಿಲ್ಲ. ಹೀಗಾಗಿ ನಷ್ಟದ ಸರಿದೂಗಿಸಲು ದರ ಪರಿಷ್ಕರಣೆ ಮಾಡಿ ಎಂದು ಒಕ್ಕೂಟಗಳು ಪಟ್ಟು ಹಿಡಿದಿವೆ.

    ಯಾವ್ಯಾವ ಹಾಲು ಎಷ್ಟಿದೆ- ಎಷ್ಟಾಗುತ್ತೆ? (2 ರೂ ಹೆಚ್ಚಳದಂತೆ)

    ಟೋನ್ಡ್ ಹಾಲು (ಬ್ಲೂ ಪ್ಯಾಕೆಟ್)       42 ರೂ- 44ರೂ

    ಹೋಮೋಜಿನೈಸ್ಡ್‌ ಹಾಲು   43 ರೂ-45ರೂ

    ಹೋಮೋಜಿನೈಸ್ಡ್‌ ಹಸುವಿನ ಹಾಲು   47 ರೂ-49ರೂ

    ಸ್ಪೆಷಲ್‌ ಹಾಲು     48 ರೂ – 50ರೂ

    ಶುಭಂ ಹಾಲು      48 ರೂ- 50ರೂ

    ಹೋಮೋಜಿನೈಸ್ಡ್‌ ಸ್ಟ್ಯಾಂಡಡೈಸ್ಡ್ ಹಾಲು       49 ರೂ-51ರೂ

    ಸಮೃದ್ಧಿ ಹಾಲು    53 ರೂ-_55ರೂ

    ಸಂತೃಪ್ತಿ ಹಾಲು    55 ರೂ-57ರೂ

    ಡಬಲ್ಡ್‌ ಟೋನ್ಡ್‌ ಹಾಲು      41 ರೂ-43ರೂ

    ಮೊಸರು ಪ್ರತಿ ಲೀಟರ್‌ಗೆ    50 ರೂ-52ರೂ

    ದರ ಏರಿಕೆ ಬಿಸಿಯಿಂದ ತತ್ತರಿಸುತ್ತಿರುವ ಶ್ರೀಸಾಮಾನ್ಯನಿಗೆ ಮತ್ತೆ ಹಾಲಿನ ದರ ಏರಿಕೆ ಬಿಸಿ ಶುರುವಾಗಿದೆ. ಇದಕ್ಕೆ ಸರ್ಕಾರ ಕೆಎಂಎಫ್ ದರ ಏರಿಕೆ ಪ್ರಸ್ತಾವನೆಗೆ ಯಾವ ನಿರ್ಧಾರ ಕೈಗೊಳ್ಳುತ್ತೋ? ಕಾದು ನೋಡಬೇಕು.

    Demo
    Share. Facebook Twitter LinkedIn Email WhatsApp

    Related Posts

    ಮಳೆ ಅಬ್ಬರ: ಕರ್ನಾಟಕದ ಈ ಜಿಲ್ಲೆಗಳ ಶಾಲಾ ಕಾಲೇಜುಗಳಿಗೆ ನಾಳೆ ರಜೆ ಘೋಷಣೆ!

    June 25, 2025

    ವಸತಿ ಯೋಜನೆಯಲ್ಲಿ ಭ್ರಷ್ಟಾಚಾರ: DCM ಡಿಕೆಶಿ ಭೇಟಿ ಮಾಡಿ ಚರ್ಚಿಸಿದ ಬಿ ಆರ್ ಪಾಟೀಲ್!

    June 25, 2025

    ರಾಜ್ಯ ಸರ್ಕಾರದ ಮಹತ್ವದ ಆದೇಶ: ಎಲ್ಲಾ ಇಲಾಖೆಗಳ ಆಡಳಿತದಲ್ಲಿ ಕನ್ನಡ ಕಡ್ಡಾಯ!

    June 25, 2025

    ವೃದ್ಧಾಶ್ರಮದಲ್ಲಿ ಆತ್ಮಹತ್ಯೆಗೆ ಶರಣಾದ ದಂಪತಿ: ಹೆತ್ತ ಮಗನಿಂದ ಮನನೊಂದು ಸೂಸೈಡ್?

    June 25, 2025

    ಇನ್ಮುಂದೆ ಎಲ್ಲಾ ಇಲಾಖೆಗಳಲ್ಲೂ ‘ಕನ್ನಡ ಬಳಕೆ’ ಕಡ್ಡಾಯ: ರಾಜ್ಯ ಸರ್ಕಾರ ಆದೇಶ

    June 25, 2025

    ರಾಜ್ಯದ ಜನರಿಗೆ ಪ್ಲ್ಯಾನ್ ಅನುಮತಿ ಇಲ್ಲದೆ ಮನೆ ಕಟ್ಟಲು ಹೋಗಬಾರದು: ಡಿಸಿಎಂ ಡಿಕೆ ಶಿವಕುಮಾರ್

    June 25, 2025

    ಬಡವರಿಂದ ಹಣ ಪಡೆಯುವ ದರಿದ್ರ ಜಮೀರ್’ಗಿಲ್ಲ: ಸಚಿವರ ಪರ ಶಾಸಕ ರವಿ ಗಣಿಗ ಬ್ಯಾಟಿಂಗ್

    June 25, 2025

    ಅಂತಾರಾಷ್ಟ್ರೀಯ ಯೋಗ ದಿನ: “ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ” ವಿಶ್ವವಿದ್ಯಾಲಯದಿಂದ ಯೋಗಾಭ್ಯಾಸ

    June 25, 2025

    ಭ್ರಷ್ಟಾಚಾರದಿಂದ ರಾಜ್ಯ ಸರ್ಕಾರ ದಿಕ್ಕು ದೆಸೆ ಇಲ್ಲದೆ ನಡೆದಿದೆ: ಬಸವರಾಜ ಬೊಮ್ಮಾಯಿ

    June 25, 2025

    ಯುನೈಟೆಡ್ ಎಲಿಸಿಯಂ ಅಪಾರ್ಟ್ಮೆಂಟ್’ನಲ್ಲಿ ಯಶಸ್ವಿಯಾಗಿ ನಡೆದ ಬೃಹತ್ “ಉಚಿತ ಆರೋಗ್ಯ ಶಿಬಿರ”

    June 25, 2025

    ಪೊಲ್ಯೂಷನ್ ಕಂಟ್ರೋಲ್ ಬೋರ್ಡ್ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ..!

    June 25, 2025

    ಜೂನ್ 27ರಿಂದ 29ರವರೆಗೆ ಫೋಟೋ ಟುಡೇ ವಸ್ತು ಪ್ರದರ್ಶನ

    June 25, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.