ಬೆಂಗಳೂರು: ಕೆಂಪೇಗೌಡ ಏರ್ಪೋಟ್ ನಿಂದ ಪ್ರಯಾಣಿಕರಿಗಾಗಿ ಮತ್ತೊಂದು ಸೇವೆ ಒದಿಗಸಲಾಗಿದೆ. ಮಕ್ಕಳ ಜೊತೆ ಬರುವ ಪ್ರಯಾಣಿಕರು ಮತ್ತು ಮಹಿಳೆಯರ ಅನುಕೂಲಕ್ಕೆ ನೂತನ ಸೇವೆ ಆರಂಭಿಸಿದ್ದಾರೆ. ಏರ್ಪೋಟ್ ಗೆ ಬರುವ ಪ್ರಯಾಣಿಕರ ಮಕ್ಕಳಿಗಾಗಿ ಹೊಸ ಟ್ರಾಲಿ ವ್ಯವಸ್ಥೆ ಮಾಡಲಾಗಿದ್ದು,
ಏರ್ಪೋರ್ಟ್ನ ಟರ್ಮಿನಲ್ 01 ಮತ್ತು 02 ರಲ್ಲಿ ಕೆಐಎಬಿ ಬೇಬಿ ಕ್ಯಾರಿಯರ್ ಮತ್ತು ಹ್ಯಾಂಡ್ ಬ್ಯಾಗ್ ಟ್ರಾಲಿ ಸೇವೆಯನ್ನು ಆರಂಭಿಸಿದೆ. ನೂತನ ಟ್ರಾಲಿಯಲ್ಲಿ 2 ತಿಂಗಳಿನಿಂದ 4 ವರ್ಷದವರೆಗಿನ ಮಕ್ಕಳನ್ನ ಕೂರಿಸಿಕೊಂಡು ಹೋಗಬಹುದಾಗಿದೆ.
ಇದು ಪುಟ್ಟ ಮಕ್ಕಳೊಂದಿಗೆ ಪ್ರಯಾಣ ಮಾಡುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಸದ್ಯ ಕೆಂಪೇಗೌಡ ಏರ್ಪೋರ್ಟ್ ಆಡಳಿತ ಮಂಡಳಿ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.