ಹಾಸನ: ಹೃದಯಘಾತದಿಂದ ಸಾವನ್ನಪ್ಪುತ್ತಿರೋರ ಸಂಖ್ಯೆ ಜಾಸ್ತಿಯಾಗಿದೆ. ಅದರಲ್ಲೂ ಹಾಸನದಲ್ಲೇ ಹಾರ್ಟ್ ಅಟ್ಯಾಕ್ನಿಂದ ಸಾವನ್ನಪ್ಪುತ್ತಿರೋ ಘಟನೆ ಮುಂದುವರೆದಿದೆ. ಹೃದಯಾಘಾತಕ್ಕೆ ಸೈನಿಕನೋರ್ವ ಮೃತಪಟ್ಟಿರುವ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಕೆಂಬಾಳು ಗ್ರಾಮದಲ್ಲಿ ನಡೆದಿದೆ.
ಲೋಹಿತ್ (38) ಮೃತಪಟ್ಟ ಸೈನಿಕನಾಗಿದ್ದು, ಕಳೆದ 18 ವರ್ಷಗಳಿಂದ ಸೈನಿಕರಾಗಿ ದೇಶಸೇವೆ ಮಾಡಿದ್ದರು. ಕಳೆದ 7 ವರ್ಷದ ಹಿಂದೆ ಮದುವೆಯಾಗಿದ್ದು, 3 ವರ್ಷದ ಹೆಣ್ಣು ಮಗಳಿದ್ದಾಳೆ.
ಬೊಜ್ಜಿಗೆ ಮತ್ತೊಂದು ಹೊಸ ಮೆಡಿಸನ್.. ಒಂದೇ ಇಂಜೆಕ್ಷನ್’ನಿಂದ 100 ಕೆಜಿ ತೂಕ ಇಳಿಸಬಹುದು..! ಇದರ ಬೆಲೆ ಎಷ್ಟು?
ಯೋಧ ಲೋಹಿತ್ ಅವರು ಜುಲೈ 03ರಂದು ವಾಪಸ್ ಕರ್ತವ್ಯಕ್ಕೆ ಹಾಜರಾಗಬೇಕಿತ್ತು. ಹಾಗಾಗಿ ಜು.3ರಂದು ರೈಲಿನಲ್ಲಿ ಹೊರಡಲು ಟಿಕೆಟ್ ಕೂಡಾ ಬುಕ್ ಮಾಡಿದ್ದರು. ಆದ್ರೆ ವಿಧಿಯಾಟ ಬೇರೆಯಾಗಿತ್ತು. ಕುಟುಂಬದಲ್ಲಿ ಸಾವಿನಿಂದ ದುಃಖ ಮಡುಗಟ್ಟಿದೆ.