ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ವಿಜಯಲಕ್ಷ್ಮಿ ಜೊತೆ ನಿನ್ನೆ ಬಾಲಿಯಲ್ಲಿ 22ನೇ ಮದುವೆ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. ಆತ್ಮೀಯರಷ್ಟೇ ಭಾಗಿಯಾಗಿದ್ದ ಈ ಕಾರ್ಯಕ್ರಮದಲ್ಲಿ ದಚ್ಚು ಪತ್ನಿ ಜೊತೆ ರೋಮ್ಯಾಂಟಿಕ್ ಮುದ್ದು ರಾಕ್ಷಿಸಿ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಅಲ್ಲದೇ ಹಿಂದಿ ಹಾಡು ಹಾಡಿದ್ದಾರೆ. ಆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ದಚ್ಚು ಪತ್ನಿಗೆ ಹಾಡು ಹಾಡಿರುವ ವಿಡಿಯೋ ವೈರಲ್ ಆಗ್ತಿದ್ದಂತೆ, ಇತ್ತ ಪುನೀತ್ ಹಾಡು ಹಾಡಿರುವ ವಿಡಿಯೋ ಕೂಡ ವೈರಲ್ ಆಗಿದೆ. ಅಪ್ಪುಗೆ ಹಿಂದಿಯ ‘ಮೈ ಶಾಯರ್ ತೋ ನಹೀ’ ಹಾಡು ಅಂದ್ರೆ ಬಲುಇಷ್ಟ. ಬೇಜಾರಾದಾಗ, ಖುಷಿಯಾದಾಗ ಇದೇ ಸಾಂಗ್ ಹಾಡುತ್ತಿದ್ದರು. ಇದು ಬಾಲಿವುಡ್ನ “ಬಾಬಿ” ಚಿತ್ರದ್ದಾಗಿದ ಗೀತೆ.ಈ ಹಾಡನ್ನು ಶೈಲೇಂದ್ರ ಸಿಂಗ್ ಹಾಡಿದ್ದಾರೆ. ಡಿಂಪಲ್ ಕಪಾಡಿಯಾ, ರಿಷಿ ಕಪೂರ್ ನಟನೆಯ ಬಾಬಿ ಸಿನಿಮಾವನ್ನು ರಾಜ್ ಕಪೂರ್ ನಿರ್ದೇಶಿಸಿದ್ದಾರೆ.
ದರ್ಶನ್ ಕೂಡ ನಿನ್ನೆ ತಮ್ಮ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಇದೇ ಹಾಡು ಹಾಡಿದ್ದಾರೆ. ಇದನ್ನು ನೋಡಿ ಪವರ್ ಫ್ಯಾನ್ಸ್ ಎಲ್ಲೋದಲ್ಲೂ ಬರೀ ಕಾಫಿ ಒಡಿಯೋದೇ ಆಗೋಯ್ತು ಎಂದು ದಾಸನಿಗೆ ಕಾಲೆಳೆದಿದ್ದಾರೆ.
ಎಲ್ಲೋದ್ರು ಬರೀ ಕಾಫಿ ಒಡಿಯೋದೇ ಆಗೋಯ್ತು @dasadarshan 🫢 pic.twitter.com/h7DB2NeLJu
— ತರ್ಲೆ ನನ್ ಮಗ 😎 (@Tharlenanmaga7) May 20, 2025
ಯುವರತ್ನ ಸಿನಿಮಾದ ಶೂಟಿಂಗ್ ವೇಳೆ ಧಾರವಾಡಕ್ಕೆ ಬಂದಿದ್ದ ಪುನೀತ್, ಮಯೂರ ಆದಿತ್ಯ ಹೋಟೆಲ್‌ನಲ್ಲಿ ತಂಗಿದ್ದ ವೇಳೆಯಲ್ಲಿ ಸ್ನೇಹಿತರ ಮಧ್ಯೆ ಈ ಹಾಡು ಹಾಡಿ, ಖುಷಿಪಟ್ಟಿದ್ದರು. ಆ ವಿಡಿಯೋ ಮತ್ತೆ ದರ್ಶನ್ ಹಾಡಿರುವ ವಿಡಿಯೋ ನೋಡಿ ಪುನೀತ್ ಫ್ಯಾನ್ಸ್ ಕಾಪಿ ಕ್ಯಾಟ್ ಎನ್ನುತ್ತಿದ್ದಾರೆ.