ಸಾಮಾನ್ಯವಾಗಿ ಎಲ್ಲ ಋತುಮಾನದಲ್ಲಿ ಎಲ್ಲರನ್ನೂ ಕಾಡುವ ಗಂಭೀರ ಸಮಸ್ಯೆ ಎಂದರೆ ಸೊಳ್ಳೆಯ ಕಾಟ. ಸಂಜೆಯಾದಕ್ಷಣ ಮನೆಗೆ ದಾಳಿ ಇಡುವ ಸೊಳ್ಳೆಗಳು ಯಾವುದೇ ಕಾಯಿಲ್, ಬತ್ತಿ, ಧೂಪಗಳನ್ನು ಹಾಕುವುದು ಸೇರಿದಂತೆ ಯಾವುದೇ ಮಾರ್ಗಕ್ಕೂ ಇವು ಜಗ್ಗುವುದಿಲ್ಲ. ಈ ಎಲ್ಲಾ ತಡೆಯ ನಡುವೆಯೂ ಸೊಳ್ಳೆಗಳ ಸಂಖ್ಯೆ ದ್ವಿಗುಣಗೊಳ್ಳುತ್ತಲೇ ಸಾಗುತ್ತದೆ. ಅಷ್ಟೇ ಅಲ್ಲ ಹೀಗೆ ದಾಂಗುಡಿ ಇಡುವ ಈ ಸೊಳ್ಳೆಗಳಿಂದ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳು ಆಗುವ ಸಾಧ್ಯತೆಗಳಿವೆ.
ಈ ರಾಶಿಯವರು ಕೊಟ್ಟಿದ್ದು ದುಡ್ಡು ಬೇಗ ಬರುವುದಿಲ್ಲ: ಭಾನುವಾರದ ರಾಶಿ ಭವಿಷ್ಯ 06 ಏಪ್ರಿಲ್ 2025!
ಬೇಸಿಗೆ ಮತ್ತು ಮಳೆಗಾಲ ಬಂದ್ರೆ ಸಾಕು ಸೊಳ್ಳೆಗಳ ಕಾಟ ಮಿತಿಮೀರುತ್ತೆ. ಸಂಜೆಯಾಗುತ್ತಿದ್ದಂತೆ, ದಾಳಿ ಮಾಡುವ ಸೊಳ್ಳೆಗಳು ಡೆಂಗ್ಯೂ, ಮಲೇರಿಯಾ ಮುಂತಾದ ಅನೇಕ ಅಪಾಯಕಾರಿ ರೋಗಗಳ ವಾಹಕ ಎಂದರೂ ತಪ್ಪಾಗಲ್ಲ.
ಸೊಳ್ಳೆಗಳನ್ನು ಓಡಿಸಲು ಅಥವಾ ಕೊಲ್ಲಲು ಮಾರುಕಟ್ಟೆಯಲ್ಲಿ ಹಲವು ಉತ್ಪನ್ನಗಳು ಲಭ್ಯವಿದೆ. ಇವುಗಳ ಸಹಾಯದಿಂದ ಸೊಳ್ಳೆಗಳನ್ನು ಸುಲಭವಾಗಿ ನಿರ್ಮೂಲನೆ ಮಾಡಬಹುದು. ಆದರೆ ಅವೆಲ್ಲವೂ ಅಷ್ಟೊಂದು ಪರಿಣಾಮಕಾರಿಯಾಗಿರುವುದಿಲ್ಲ. ಕೆಲವೊಮ್ಮೆ ಇವುಗಳಿಂದ ಹೊರಹೊಮ್ಮುವ ಹೊಗೆ ಆರೋಗ್ಯಕ್ಕೂ ಹಾನಿ ಮಾಡುತ್ತದೆ. ಆದ್ದರಿಂದ ಕೆಲವು ಸಸ್ಯಗಳ ಬಗ್ಗೆ ಹೇಳಲಿದ್ದೇವೆ. ಅವುಗಳ ಪರಿಮಳ ನಿಮಗೆ ಇಷ್ಟವಾಗಬಹುದು ಆದರೆ ಸೊಳ್ಳೆಗಳಿಗಲ್ಲ
ಕಿತ್ತಳೆ ಮತ್ತು ಹಳದಿ ಬಣ್ಣ ಹೊಂದಿರುವ ಚೆಂಡು ಹೂವು ಕೈದೋಟದ ಸೌಂದರ್ಯವನ್ನು ಹೆಚ್ಚಿಸುತ್ತದೆ. ಇದು ಸೊಳ್ಳೆಗಳು ಮತ್ತು ಇತರ ಹಾರುವ ಕೀಟಗಳನ್ನು ಓಡಿಸಲು ಬೆಸ್ಟ್ ಪರಿಹಾರ. ಮನೆಯ ಮುಂದೆ ಇದರ ಗಿಡ ನೆಟ್ಟರೆ ಸಾಕು ಸೊಳ್ಳೆಗಳನ್ನು ಸುಲಭವಾಗಿ ದೂರ ಓಡಿಸಬಹುದು.
ಸೊಳ್ಳೆಗಳನ್ನು ದೂರವಿಡಲು ಮಾರುಕಟ್ಟೆಯಲ್ಲಿ ಲಭ್ಯವಿರುವ ಉತ್ಪನ್ನವಾದ ಸೊಳ್ಳೆ ನಿವಾರಕದಲ್ಲಿ ಲ್ಯಾವೆಂಡರ್ ಎಣ್ಣೆಯನ್ನು ಬಳಸಬಹುದು. ಇಲ್ಲವೇ ಈ ಸಸ್ಯವನ್ನು ಮನೆಯಲ್ಲಿ ನೆಟ್ಟರೆ, ಅದರ ಸುವಾಸನೆಯು ಸೊಳ್ಳೆಗಳನ್ನು ಹಿಮ್ಮೆಟ್ಟಿಸಲು ಬಹಳಷ್ಟು ಸಹಾಯ ಮಾಡುತ್ತದೆ ಮತ್ತು ಅವು ಸುಲಭವಾಗಿ ಓಡಿಹೋಗುತ್ತವೆ. ಅಲ್ಲದೆ, ಲ್ಯಾವೆಂಡರ್ ಪರಿಮಳವು ಚೆನ್ನಾಗಿ ನಿದ್ರೆ ಮಾಡಲು ಸಹಾಯ ಮಾಡುತ್ತದೆ.
ಸೊಳ್ಳೆಗಳಿಗೆ ಹಸಿ ಬೆಳ್ಳುಳ್ಳಿಯ ವಾಸನೆ ಇಷ್ಟವಾಗುವುದಿಲ್ಲ. ಆದ್ದರಿಂದ, ಈ ಗಿಡವನ್ನು ಮನೆಯಲ್ಲಿ ನೆಡುವುದರಿಂದ, ಸೊಳ್ಳೆಗಳು ಅದರ ಸುತ್ತ ಅಲೆದಾಡುವುದಿಲ್ಲ
ರೋಸ್ಮರಿ ಸಸ್ಯವು ನೈಸರ್ಗಿಕ ಸೊಳ್ಳೆ ನಿವಾರಕ ಎಂದು ಹೇಳಲಾಗುತ್ತದೆ. ಇದು ಸೊಳ್ಳೆಗಳನ್ನು ದೂರವಿಡುತ್ತದೆ. ನೀಲಿ ಹೂವುಗಳನ್ನು ಹೊಂದಿರುವ ಈ ಸುಂದರವಾದ ಸಸ್ಯದ ವಿಶೇಷತೆಯೆಂದರೆ ಅವು ಬೇಸಿಗೆಯಲ್ಲಿ ಹುಲುಸಾಗಿ ಬೆಳೆಯುತ್ತವೆ. ಬೆಳೆಯಲು ತಂಪಾದ ಮತ್ತು ಶುಷ್ಕ ಸ್ಥಳದ ಅಗತ್ಯವಿರುತ್ತದೆ. ಆದ್ದರಿಂದ, ಈ ಸಸ್ಯಗಳು ಸೊಳ್ಳೆಗಳನ್ನು ದೂರವಿಡಲು ನಿಮಗೆ ಸಹಾಯ ಮಾಡಬಹುದು.
ಔಷಧೀಯ ಗುಣಗಳಿಂದ ತುಂಬಿರುವ ತುಳಸಿ ಗಿಡದ ವಾಸನೆಯನ್ನು ಸೊಳ್ಳೆಗಳು ಇಷ್ಟಪಡುವುದಿಲ್ಲ. ಇದಲ್ಲದೆ, ತುಳಸಿಯ ವಾಸನೆಯು ಇತರ ಸಣ್ಣ ಹಾರುವ ಕೀಟಗಳನ್ನು ಸಹ ಓಡಿಸುತ್ತದೆ. ಆದ್ದರಿಂದ, ಮನೆಯಲ್ಲಿ ತುಳಸಿ ಗಿಡವನ್ನು ನೆಡುವುದು ತುಂಬಾ ಪ್ರಯೋಜನಕಾರಿ. ಹಾಗೆಯೇ ತುಳಸಿಯ ಒಂದು ಎಸಳನ್ನು ಇಟ್ಟರೂ ಸಾಕು ನೆಮ್ಮದಿಯಾಗಿ ನಿದ್ದೆ ಮಾಡಬಹುದು. ಸೊಳ್ಳೆಯ ಕಾಟ ಇರುವುದಿಲ್ಲ.