Close Menu
Ain Live News
    Facebook X (Twitter) Instagram YouTube
    Monday, June 30
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    Sim Card:‌ ನೀವು ಹೊಸ ಸಿಮ್‌ ಕಾರ್ಡ್‌ ಖರೀದಿ ಮಾಡುತ್ತೀರಾ?: ಈ ಹೊಸ ರೂಲ್ಸ್ ಫಾಲೋ ಮಾಡಲೇಬೇಕು?

    By AIN AuthorDecember 13, 2023
    Share
    Facebook Twitter LinkedIn Pinterest Email
    Demo

    ನೀವು ಹೊಸ ಸಿಮ್‌ ಕಾರ್ಡ್‌ (Sim Card) ಖರೀದಿ ಮಾಡುತ್ತೀರಾ? ಹಾಗಾದ್ರೆ ಕೆಲ ಕಠಿಣ ನಿಯಮಗಳನ್ನು ಪಾಲಿಸಬೇಕು. ಗ್ರಾಹಕರು ಮಾತ್ರವಲ್ಲ ಸಿಮ್‌ ವಿತರಿಸುವ ಡೀಲರ್‌ಗಳು ಸಹ ಕಠಿಣ ನಿಯಮಗಳನ್ನು ಪಾಲಿಸಲೇಬೇಕು. ನಿಯಮ ಪಾಲಿಸದೇ ಉಲ್ಲಂಘನೆ ಮಾಡಿದರೆ 10 ಲಕ್ಷ ರೂ. ದಂಡ ವಿಧಿಸಲಾಗುತ್ತದೆ. ಗಂಭೀರ ಪ್ರಕರಣವಾದಲ್ಲಿ ಜೈಲು (Jail) ಶಿಕ್ಷೆಯನ್ನು ವಿಧಿಸಲಾಗುತ್ತದೆ.

    ಬಹುತೇಕ ಸೈಬರ್ ಅಪರಾಧಗಳು ಮತ್ತು ದೇಶವಿರೋಧಿ ಕೃತ್ಯಗಳನ್ನು ಸುಳ್ಳು ದಾಖಲೆಗಳೊಂದಿಗೆ ಜೋಡಿಸಲಾದ ಮೊಬೈಲ್ ಸಂಖ್ಯೆಗಳನ್ನು (Mobile Sim) ಬಳಸುತ್ತಿರುವ ಹಿನ್ನೆಲೆಯಲ್ಲಿ ಇವುಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಈಗ ಕಠಿಣ ಕ್ರಮ ಕೈಗೊಂಡಿದೆ.

    ಹೊಸ ನಿಯಮಗಳು ಏನು?
    ವ್ಯಾಪಾರಸ್ಥರು/ ಕಂಪನಿಗಳಿಗೆ ಮಾತ್ರ ಸಿಮ್ ಕಾರ್ಡ್‌ಗಳನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸಲು ಅನುಮತಿ ನೀಡಲಾಗಿದೆ. ಸಾಮಾನ್ಯ ಬಳಕೆದಾರರು ಒಂದು ಗುರುತಿನಿಂದ ಗರಿಷ್ಠ 9 ಸಿಮ್‌ಗಳನ್ನು ಮಾತ್ರ ಪಡೆಯಬಹುದು

    ಸಿಮ್‌ ಕಾರ್ಡ್‌ ರದ್ದು/ ನಿಷ್ಕ್ರಿಯಗೊಳಿಸಿದ 90 ದಿನಗಳ ನಂತರ ಆ ಸಂಖ್ಯೆಯನ್ನು ಬೇರೆ ಗ್ರಾಹಕರಿಗೆ ನೀಡಲಾಗುತ್ತದೆ.

    ಸಿಮ್ ಕಾರ್ಡ್‌ಗಳನ್ನು ಖರೀದಿಸುವ ಗ್ರಾಹಕರು ತಮ್ಮ ಆಧಾರ್ (Aadhar Card) ಮತ್ತು ಜನಸಂಖ್ಯಾ ಡೇಟಾವನ್ನು (Demographic Data Collection) ಸಲ್ಲಿಸಬೇಕಾಗುತ್ತದೆ.

    ನೋಂದಾಯಿಸದ ಡೀಲರ್‌ಗಳ ಮೂಲಕ ಸಿಮ್ ಕಾರ್ಡ್‌ಗಳನ್ನು ಮಾರಾಟ ಮಾಡಿದರೆ ಹೊಸ ನಿಯಮಗಳ ಪ್ರಕಾರ ಟೆಲಿಕಾಂ ಆಪರೇಟರ್‌ಗಳಿಗೆ 10 ಲಕ್ಷ ರೂ. ದಂಡ ವಿಧಿಸಲಾಗುತ್ತದೆ.

    ಎಲ್ಲಾ ಸಿಮ್‌ ಕಾರ್ಡ್‌ ಡೀಲರ್‌ಗಳು ಕಡ್ಡಾಯವಾಗಿ ನವೆಂಬರ್ ಅಂತ್ಯದೊಳಗೆ ದಾಖಲೆಗಳನ್ನು ಸಲ್ಲಿಸಬೇಕು ಮತ್ತು ನೋಂದಾಯಿಸಿಕೊಳ್ಳಬೇಕು. ಸಿಮ್‌ ಕಾರ್ಡ್‌ ಡೀಲರ್‌ಗಳು ಅಥವಾ ಚಿಲ್ಲರೆ ವ್ಯಾಪಾರಿಯು ನೋಂದಣಿಗಾಗಿ ಕಾರ್ಪೊರೇಟ್ ಗುರುತಿನ ಸಂಖ್ಯೆ (CIN), ಸೀಮಿತ ಹೊಣೆಗಾರಿಕೆ ಪಾಲುದಾರಿಕೆ ಗುರುತಿನ ಸಂಖ್ಯೆ (LLPIN) ಅಥವಾ ವ್ಯಾಪಾರ ಪರವಾನಗಿ, ಆಧಾರ್ ಅಥವಾ ಪಾಸ್‌ಪೋರ್ಟ್, ಪಾನ್‌, ಸರಕು ಮತ್ತು ಸೇವಾ ತೆರಿಗೆ ನೋಂದಣಿ ಪ್ರಮಾಣಪತ್ರ ಇತ್ಯಾದಿಗಳನ್ನು ಒದಗಿಸಬೇಕಾಗುತ್ತದೆ.

    ಸಿಮ್‌ ಡೀಲರ್‌ಗಳು ನಕಲಿ ದಾಖಲೆಗಳನ್ನು ಸಲ್ಲಿಸಿದರೆ, ಟೆಲಿಕಾಂ ಆಪರೇಟರ್‌ಗಳು ಅವರ ಐಡಿಯನ್ನು ನಿರ್ಬಂಧಿಸಬೇಕು. ಅಷ್ಟೇ ಅಲ್ಲದೇ ಸಿಮ್‌ ಡೀಲರ್‌ನಿಂದ ಯಾರಿಗೆಲ್ಲ ಸಿಮ್‌ ಕಾರ್ಡ್‌ ವಿತರಣೆಯಾಗಿದೆಯೋ ಆ ಎಲ್ಲಾ ಗ್ರಾಹಕರು ಸಿಮ್‌ ಪಡೆಯಲು ನೀಡಿದ ದಾಖಲೆಗಳನ್ನು ಮರು ಪರಿಶೀಲಿಸಬೇಕಾಗುತ್ತದೆ

    Demo
    Share. Facebook Twitter LinkedIn Email WhatsApp

    Related Posts

    DK Shivakumar: ಇ-ಖಾತೆ ಮಾಡಿಸಿಕೊಳ್ಳಿ, ವಂಚನೆಯಿಂದ ತಪ್ಪಿಸಿಕೊಳ್ಳಿ; ಡಿಸಿಎಂ- ಡಿ.ಕೆ. ಶಿವಕುಮಾರ್!

    June 29, 2025

    ಆಸ್ತಿದಾರರಿಗೆ ಗುಡ್ ನ್ಯೂಸ್: ಬೃಹತ್ ಇ-ಖಾತಾ ಮೇಳಕ್ಕೆ DCM ಡಿಕೆ ಶಿವಕುಮಾರ್ ಚಾಲನೆ!

    June 29, 2025

    ನಿರುದ್ಯೋಗಿಗಳಿಗೆ ಗುಡ್ ನ್ಯೂಸ್: ಇಲ್ಲಿದೆ ಇನ್ಸೆಕ್ಟ್ ಕಲೆಕ್ಟರ್ ಹುದ್ದೆ.. ಆಸಕ್ತರು ಅಪ್ಲೈ ಮಾಡಿ!

    June 29, 2025

    ಪಿಯುಸಿ, ಡಿಗ್ರಿ ಪಾಸಾಗಿದ್ಯಾ!? ನಿರುದ್ಯೋಗಿಗಳಿಗೆ ಇಲ್ಲಿದೆ ಭರ್ಜರಿ ಉದ್ಯೋಗ; ಕೂಡಲೇ ಸಂದರ್ಶನಕ್ಕೆ ಹಾಜರಾಗಿ

    June 29, 2025

    ಆಸ್ತಿ ಮಾಲೀಕರ ಗಮನಕ್ಕೆ: ಪಂಚಾಯ್ತಿ ವ್ಯಾಪ್ತಿಯಲ್ಲೂ ಸಿಗಲಿದೆ ಇ-ಖಾತಾ!

    June 29, 2025

    ಬ್ರ್ಯಾಂಡ್ ಎಂದು ಜೀನ್ಸ್ ಖರೀದಿಸೋ ಜನರೇ ಈ ಸುದ್ದಿ ನಿಮಗಾಗಿ: ಎಲ್ಲವೂ Fake!

    June 29, 2025

    ದಿನಕ್ಕೆ ಎಷ್ಟು ಬಾರಿ ಮೊಬೈಲ್ ಚಾರ್ಜ್ ಮಾಡಬೇಕು ಗೊತ್ತಾ!? ಮೊಬೈಲ್ ಪ್ರಿಯರು ತಿಳಿಯಬೇಕು!

    June 29, 2025

    ಅತಿಯಾದ ಮೊಬೈಲ್ ಬಳಕೆ ಅನೇಕ ರೋಗಗಳಿಗೆ ಕಾರಣವಾಗುತ್ತಂತೆ!

    June 28, 2025

    Power Cut: ನಾಳೆ ಬೆಂಗಳೂರಿನ ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯ; ನಿಮ್ಮ ಏರಿಯಾದಲ್ಲಿ ಕರೆಂಟ್ ಇರುತ್ತಾ ನೋಡಿ?

    June 28, 2025

    ಬಂಗಾರ ಖರೀದಿಗೆ ಇದೇ ಬೆಸ್ಟ್ ಟೈಂ: ಇದ್ದಕ್ಕಿದ್ದಂತೆ ಭರ್ಜರಿ ಇಳಿಕೆ ಕಂಡ ಚಿನ್ನದ ಬೆಲೆ! ಹೀಗಿದೆ ದರ ವಿವರ

    June 28, 2025

    ಟಾಟಾ ಗ್ರೂಪ್ ಪ್ರಮುಖ ನಿರ್ಧಾರ: ವಿಮಾನ ದುರಂತ ಸಂತ್ರಸ್ತರಿಗೆ 500 ಕೋಟಿ ರೂ. ಟ್ರಸ್ಟ್..!

    June 28, 2025

    ಬೇರೆಯವರಿಗೆ ತಿಳಿಯದಂತೆ ಕಾಲ್ ರೆಕಾರ್ಡ್ ಮಾಡ್ಬಹುದು: ಈ ಟ್ರಿಕ್ ಫಾಲೋ ಮಾಡಿ!

    June 28, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.