ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಬಾಳೆಹಣ್ಣು ತಿಂದರೆ ನಿದ್ರೆ ಚೆನ್ನಾಗಿ ಬರುತ್ತದೆ ಎಂಬ ಸುದ್ದಿ ಹರಡಿತ್ತು. ಈ ಅಭ್ಯಾಸ ಅನುಸರಿಸುವವರು ಕೂಡ ಇದು ನಿಜ ಎಂದಿದ್ದರು. ಅದರಲ್ಲಿಯೂ ಈ ಹಣ್ಣಿನಲ್ಲಿ ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಟ್ರಿಪ್ಟೋಫಾನ್ ನಂತಹ ಪೋಷಕಾಂಶಗಳಿರುವುದರಿಂದ ಇದನ್ನು ಸೇವನೆ ಮಾಡಿದರೆ ಉತ್ತಮ ನಿದ್ರೆ ಮಾಡುವುದಕ್ಕೆ ಸಹಾಯವಾಗುತ್ತದೆ ಎಂದು ಹೇಳಲಾಗುತ್ತಿತ್ತು. ಏಕೆಂದರೆ ಈ ಪೋಷಕಾಂಶಗಳು ದೇಹವನ್ನು ವಿಶ್ರಾಂತಿಗೊಳಿಸುತ್ತವೆ ಮತ್ತು ನಿದ್ರೆಯ ಮಟ್ಟವನ್ನು ಹೆಚ್ಚಿಸುತ್ತದೆ.
ನಿದ್ರಾಹೀನತೆ ಬೊಜ್ಜು, ಕೊಲೆಸ್ಟ್ರಾಲ್ ಮತ್ತು ಹೃದಯ ಸಂಬಂಧಿ ಸಮಸ್ಯೆಗೆ ಕಾರಣ ಆಗುತ್ತದೆ. ನಿದ್ದೆ ಮಾಡದೇ ಹೋದರೆ ನೀವು ದಿನವಿಡೀ ಆಲಸ್ಯ ಮತ್ತು ಆಯಾಸ ಪಡಬೇಕಾಗುತ್ತದೆ. ಇದು ನೇರವಾಗಿ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀಡುತ್ತದೆ. ನಿದ್ರೆಯ ಕೊರತೆ ನಿಮ್ಮ ಚಯಾಪಚಯವನ್ನು ಕೆಡಿಸುತ್ತದೆ. ಇದು ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಸಾಕಷ್ಟು ನಿದ್ರೆ ಮಾಡದ ಕಾರಣ ನಿಮ್ಮ ರಕ್ತದೊತ್ತಡ ಅನಿಯಂತ್ರಿತ ಆಗಿರುತ್ತದೆ.
ಉತ್ತಮ ನಿದ್ದೆಗಾಗಿ ಬಾಳೆ ಹಣ್ಣು ಸೇವನೆ ಮಾಡಿ
ನೀವು ಮಾನಸಿಕ ಸಮಸ್ಯೆ ಹೊಂದಿದ್ದರೆ ನಿದ್ರಾಹೀನತೆ ಉಂಟಾಗುತ್ತದೆ. ಅಂತಹ ಸ್ಥಿತಿಯಲ್ಲಿ ಉತ್ತಮ ನಿದ್ರೆಗಾಗಿ ನೀವು ಬಾಳೆಹಣ್ಣು ಸೇವನೆ ಮಾಡಬಹುದು. ಪ್ರಪಂಚದಾದ್ಯಂತ ನಡೆದ ಅನೇಕ ಸಂಶೋಧನೆಗಳು ಬಾಳೆಹಣ್ಣಿನಲ್ಲಿ ಇರುವ ವಿಶೇಷ ಪೋಷಕಾಂಶಗಳ ಬಗ್ಗೆ ಹೇಳುತ್ತವೆ. ಬಾಳೆ ಹಣ್ಣು ನಿಮಗೆ ಉತ್ತಮ ನಿದ್ರೆ ಹೊಂದಲು ಸಹಾಯ ಮಾಡುತ್ತದೆ.
ರಾತ್ರಿ ಬಾಳೆಹಣ್ಣು ತಿನ್ನಬಹುದೇ?
ರಾತ್ರಿ ಬಾಳೆಹಣ್ಣು ತಿಂದರೆ ಅದು ಜೀರ್ಣವಾಗಲು ಸಮಯ ತೆಗೆದುಕೊಳ್ಳುತ್ತದೆ. ಇದು ಬೊಜ್ಜಿಗೆ ಕಾರಣವಾಗುತ್ತದೆ. ಇದರೊಂದಿಗೆ, ಬಾಳೆಹಣ್ಣಿನ ಪರಿಣಾಮವು ಶೀತ. ಇದು ನಿಮಗೆ ಶೀತ ಮತ್ತು ಜ್ವರದ ಸಮಸ್ಯೆ ಉಂಟು ಮಾಡುತ್ತದೆ. ಆದ್ದರಿಂದ, ಸಂಜೆಗೂ ಮೊದಲು ಬಾಳೆ ಹಣ್ಣು ಸೇವಿಸುವುದು ಉತ್ತಮ.
ಬಾಳೆ ಹಣ್ಣಿನಲ್ಲಿ ಮೆಗ್ನೀಸಿಯಮ್ ಸಮೃದ್ಧವಾಗಿದೆ
ಬಾಳೆಹಣ್ಣು ಸೇವನೆ ನಿದ್ರೆಗೆ ಪ್ರಯೋಜನಕಾರಿ ಆಗಿದೆ. ಇದು ನಿಮ್ಮ ನಿದ್ರೆಯನ್ನು ಉತ್ತೇಜಿಸುವ ಮೆಗ್ನೀಸಿಯಮ್ ಅನ್ನು ಹೊಂದಿದೆ.. 126 ಗ್ರಾಂ ಬಾಳೆಹಣ್ಣಿನಲ್ಲಿ 34 ಮಿಗ್ರಾಂ ಮೆಗ್ನೀಸಿಯಮ್ ಇರುತ್ತದೆ. ಇದನ್ನು ಸೇವನೆ ಮಾಡಿದರೆ ದೇಹದಲ್ಲಿ ಮೆಲಟೋನಿನ್ ಉತ್ಪಾದನೆ ಹೆಚ್ಚುತ್ತದೆ. ಇದು ನಿಮ್ಮ ಒತ್ತಡವನ್ನು ಕಡಿಮೆ ಮಾಡುವ ಮೂಲಕ ಉತ್ತಮ ನಿದ್ರೆಗೆ ಸಹಾಯ ಮಾಡುತ್ತದೆ.
ಬಾಳೆ ಹಣ್ಣಿನಲ್ಲಿ ಟ್ರಿಪ್ಟೊಫಾನ್ ಇದೆ
ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಪ್ರಕಾರ, ಬಾಳೆಹಣ್ಣುಗಳಲ್ಲಿ ಟ್ರಿಪ್ಟೊಫಾನ್ ಕಂಡು ಬರುತ್ತದೆ. ಇದು ಅತ್ಯಗತ್ಯ ಅಮೈನೋ ಆಮ್ಲವಾಗಿದೆ. ಇದು ನಿಮ್ಮ ನಿದ್ರೆಯನ್ನು ಸುಧಾರಿಸುವಲ್ಲಿ ಬಹಳ ಪರಿಣಾಮಕಾರಿ ಆಗಿದೆ. ಈ ಆಮ್ಲವು ನಿಮ್ಮ ಮೆದುಳಿಗೆ ನೇರವಾಗಿ ಪ್ರವೇಶಿಸಿ, ಹಾರ್ಮೋನ್ ಸಿರೊಟೋನಿನ್ ಆಗಿ ಪರಿವರ್ತನೆ ಆಗುತ್ತದೆ. ಈ ಹಾರ್ಮೋನ್ ಮೆಲಟೋನಿನ್ ಮಟ್ಟ ಹೆಚ್ಚಳ ಮಾಡುತ್ತದೆ. ಚೆನ್ನಾಗಿ ನಿದ್ರೆ ಮಾಡಲು ಸಹಕಾರಿ ಆಗಿದೆ.
ನಿಮ್ಮ ಉತ್ತಮ ನಿದ್ರೆಗೆ ಬಾಳೆಹಣ್ಣು ತುಂಬಾ ಪ್ರಯೋಜನಕಾರಿ. ಬಾಳೆ ಹಣ್ಣುಗಳು ಕಾರ್ಬೋಹೈಡ್ರೇಟ್‌ಗಳಿಂದ ಕೂಡಿದೆ. ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಪ್ರಕಾರ ಹೆಚ್ಚಿನ ಕಾರ್ಬ್ ಆಹಾರ ಸೇವನೆಯಿಂದ ನಿಮ್ಮ ಮೆದುಳು ಸಿರೊಟೋನಿನ್ ಮತ್ತು ಮೆಲಟೋನಿನ್ ಅನ್ನು ವೇಗವಾಗಿ ಉತ್ಪಾದಿಸುತ್ತದೆ. ಇದು ನಿಮಗೆ ನಿದ್ರಿಸಲು ಸಹಕಾರಿ. ಬಾಳೆಹಣ್ಣು ನಿಮ್ಮ ಜೀರ್ಣಕ್ರಿಯೆಗೆ ತುಂಬಾ ಪ್ರಯೋಜನಕಾರಿ.