ಬೆಂಗಳೂರು:- ಬೆಂಗಳೂರಿನಂತ ಮಹಾನಗರಗಳಲ್ಲಿ ಮನೆ ಕಟ್ಟುವುದೆಂದರೆ ಸುಲಭದ ಮಾತಲ್ಲ. ಆದಾಗ್ಯೂ, ಲಕ್ಷಾಂತರ ಜನರು ಬೆಂಗಳೂರಿನಲ್ಲಿ ಮನೆ ಕಟ್ಟುವ ಅಥವಾ ಇತರ ಮಾದರಿಯ ಕಟ್ಟಡದ ಮಾಲೀಕರಾಗುವ ಕನಸು ಕಾಣುತ್ತಾರೆ. ಈ ಕನಸನ್ನು ನನಸು ಮಾಡಿಕೊಳ್ಳಬೇಕಾದರೆ ಅವರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಟ್ಟಡ ನಿರ್ಮಾಣ ಅನುಮತಿ ನಿಯಮಾವಳಿಗಳನ್ನು ಪಾಲಿಸಬೇಕಾಗುತ್ತದೆ. ಹಾಗಾದರೆ ಬೆಂಗಳೂರಿನಲ್ಲಿ ಕಟ್ಟಡ ನಿರ್ಮಾಣಕ್ಕೆ ಬಿಬಿಎಂಪಿ ಅನುಮೋದನೆ ಪಡೆಯಲು ನೀವು ಏನೆಲ್ಲಾ ಪ್ರಕ್ರಿಯೆಗಳನ್ನು ಅನುಸರಿಸಬೇಕು ಎಂಬುದರ ಬಗ್ಗೆ ಈ ಲೇಖನದಲ್ಲಿ ವಿಸ್ತೃತವಾಗಿ ಮಾಹಿತಿ ಕೊಡಲಾಗಿದೆ.
ಮಾವಿನ ಹಣ್ಣು ತಿಂದು ಸಿಪ್ಪೆ ಎಸೆಯುತ್ತೀರಾ!? ಹಾಗಿದ್ರೆ ಈ ಸ್ಟೋರಿ ನೋಡಿ!
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇನ್ಮುಂದೆ ಮನೆ ಕಟ್ಟುವ ಮುಂಚೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದಿಂದ ಓಸಿ ಸರ್ಟಿಫಿಕೆಟ್ ಪಡೆಯುವುದು ಕಡ್ಡಾಯವಾಗಿದೆ. ಆ ಬಳಿಕ ಮಾತ್ರ ವಿದ್ಯುತ್ ಮತ್ತು ನೀರಿನ ಸಂಪರ್ಕ ಸಿಗುತ್ತದೆ. ಸುಪ್ರಿಂಕೋರ್ಟ್ ಆದೇಶದಂತೆ OC ಸರ್ಟಿಫಿಕೆಟ್ ಕಡ್ಡಾಯಗೊಳಿಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ ರಾವ್ರಿಂದ ಆದೇಶ ಹೊರಡಿಸಲಾಗಿದೆ.
ಸುಪ್ರಿಂಕೋರ್ಟ್ ಆದೇಶದಂತೆ ಓಸಿ ಸರ್ಟಿಫಿಕೆಟ್ ಕಡ್ಡಾಯವಾಗಿದೆ. ಬೆಂಗಳೂರಿನ ‘ಎ’ ಖಾತಾ ಹಾಗೂ ‘ಬಿ’ ಖಾತಾ ನಿವೇಶನವಾಗಿರಲಿ ಕಡ್ಡಾಯವಾಗಿ ಪ್ರಮಾಣ ಪತ್ರ ಪಡೆಯಬೇಕು. ಈಗಾಗಲೇ ವಿದ್ಯುತ್ ಸಂಪರ್ಕಕ್ಕಾಗಿ ಸುಮಾರು 66 ಸಾವಿರದ 400 ಅರ್ಜಿಗಳು ಸಲ್ಲಿಸಲಾಗಿದೆ. ಅವರಿಗೆಲ್ಲ ಬಿಬಿಎಂಪಿ ಸಿಬ್ಬಂದಿಯೇ ಕರೆ ಮಾಡಿ ಬೇಕಾದ ದಾಖಲೆ ಪಡೆಯಲಿದ್ದಾರೆ. ಇನ್ಮುಂದೆ ಮನೆ ಕಟ್ಟುವ ಮುಂಚೆ ಓಸಿ ಸರ್ಟಿಫಿಕೇಟ್ ಕಡ್ಡಾಯ ಮಾಡಲಾಗಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಬೆಸ್ಕಾಂಗೆ ವಿದ್ಯುತ್ ಸಂಪರ್ಕ ಕೋರಿ ಸುಮಾರು 66,400 ಸಂಪರ್ಕಗಳಿಗಾಗಿ ಅರ್ಜಿಗಳು ಸಲ್ಲಿಕೆಯಾಗಿದೆ. ಸುಪ್ರಿಂಕೋರ್ಟ್ ಆದೇಶದಂತೆ ಸ್ಥಳೀಯ ಸಂಸ್ಥೆಗಳಿಂದ ಸ್ವಾಧೀನಾನುಭವ ಪ್ರಮಾಣ ಪತ್ರ, ಪೂರ್ಣತಾ ಪ್ರಮಾಣ ಪತ್ರ ಪಡೆದಿರುವ ಕಟ್ಟಡಗಳಿಗೆ ಮಾತ್ರ ವಿದ್ಯುತ್ ಮತ್ತು ನೀರು ಸರಬರಾಜು, ಒಳಚರಂಡಿ ಸಂಪರ್ಕ ನೀಡುವಂತೆ ಆದೇಶಿಸಲಾಗಿದೆ.
ಸುಪ್ರಿಂಕೋರ್ಟ್ ಆದೇಶ ಹಿನ್ನಲೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಬೆಸ್ಕಾಂ ವಿದ್ಯುತ್ ಸಂಪರ್ಕ ಕೋರಿರುವ ಕಟ್ಟಡಗಳಿಗೆ ಬಿಬಿಎಂಪಿಯಿಂದ ‘ಎ’ ಖಾತಾ ಅಥವಾ ‘ಬಿ’ ಖಾತಾ ಪಡೆಯಲಾಗಿರುವ ಬಗ್ಗೆ, ಕಟ್ಟಡ ನಿರ್ಮಾಣಕ್ಕೆ ನಕ್ಷೆ ಮಂಜೂರಾತಿ ಪಡೆಯಲಾಗಿರುವ ಬಗ್ಗೆ ಮತ್ತು ಸ್ವಾಧೀನಾನುಭವ ಪ್ರಮಾಣ ಪತ್ರ, ಪೂರ್ಣತಾ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿರುವ, ಸಲ್ಲಿಸುವ ವಿವರಗಳನ್ನು ಪಡೆಯಲು ಬಿಬಿಎಂಪಿಯಿಂದ ಎಸ್ಎಂಎಸ್ ಮತ್ತು ದೂರವಾಣಿ ಕರೆ ಮುಖಾಂತರ ವಿದ್ಯುತ್ ಸಂಪರ್ಕಕ್ಕಾಗಿ ಬಾಕಿ ಇರುವ ಅರ್ಜಿದಾರರನ್ನು ಸಂಪರ್ಕಿಸಲಾಗುತ್ತದೆ.
ಬಿಬಿಎಂಪಿ ಕೋರುವ ಮಾಹಿತಿಯನ್ನು ಒದಗಿಸಲು ಹಾಗೂ ಈ ಕೆಳಕಂಡ ಆನ್‌ಲೈನ್ ಲಿಂಕ್‌ನಲ್ಲಿ ನೊಂದಾಯಿತ ಎಂಜಿನಿಯರ್ಗಳ ಮುಖಾಂತರ ಸ್ವಾಧೀನಾನುಭವ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸುವಂತೆ ಬೆಂಗಳೂರು ನಾಗರೀಕರನ್ನು ಕೋರಲಾಗಿದೆ.