Close Menu
Ain Live News
    Facebook X (Twitter) Instagram YouTube
    Monday, June 30
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಹೊಸವರ್ಷಕ್ಕೆ ಹೊಸ ಕಾರು ತೆಗೆದುಕೊಳ್ಳುವ ಪ್ಲಾನ್‌ ಇದೆಯೇ: ಹಾಗಾದ್ರೆ ಇಲ್ಲಿದೆ ಟಿಪ್ಸ್ !

    By AIN AuthorDecember 13, 2023
    Share
    Facebook Twitter LinkedIn Pinterest Email
    Demo

    ಹೊಸವರ್ಷಕ್ಕೆ ಯಾರಾದರೂ ಕಾರು ಕೊಳ್ಳುವ ಆಸ್ಕ್ತಿ ಇದೆಯಾ ಹಾಗಿದ್ರೆ ಈ ಸ್ಟೋರಿ ತಪ್ಪದೇ ನೋಡಿ ಯಾಕಂದರೆ 2024ರ ಹೊಸ ವರ್ಷದ ವೇಳೆಗೆ ಹೊಸ ಕಾರುಗಳು ಬಿಡುಗಡೆಯಾಗಲಿವೆ. ಹೊಸ ಕಾರುಗಳ ನೀರಿಕ್ಷಿತ ಬಿಡುಗಡೆ ದಿನಾಂಕ, ತಾಂತ್ರಿಕ ಮಾಹಿತಿ ಮತ್ತು ಅಂದಾಜು ಬೆಲೆಯ ಮತ್ತಷ್ಟು ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

    ಮಾರುತಿ ಸುಜುಕಿ ಸ್ವಿಫ್ಟ್

    ಮಾರುತಿ ಸುಜುಕಿ ಕಂಪನಿಯು ಸ್ವಿಫ್ಟ್ ಕಾರಿನ ಹೊಸ ತಲೆಮಾರಿನ ಆವೃತ್ತಿಯನ್ನು ಶೀಘ್ರದಲ್ಲಿಯೇ ಬಿಡುಗಡೆ ಮಾಡಲು ಸಜ್ಜಾಗುತ್ತಿದೆ. ಹೊಸ ಸ್ವಿಫ್ಟ್ ಮಾದರಿಯು ಹಲವಾರು ಬದಲಾವಣೆಗಳೊಂದಿಗೆ ನವೀಕೃತ ಎಂಜಿನ್ ಆಯ್ಕೆಯನ್ನು ಪಡೆದುಕೊಂಡಿದ್ದು, ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ. ಹೊಸ ಕಾರು ಈ ಬಾರಿ ಜೆಡ್ ಸೀರಿಸ್ ತ್ರಿ ಸಿಲಿಂಡರ್ 1.2 ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆ ಪಡೆದುಕೊಳ್ಳಲಿದ್ದು, ಇದು ಹೆಚ್ಚಿನ ಇಂಧನ ದಕ್ಷತೆಯೊಂದಿಗೆ ಪರ್ಫಾಮೆನ್ಸ್ ನಲ್ಲೂ ಗ್ರಾಹಕರನ್ನು ಸೆಳೆಯಲಿದೆ. ಪ್ರತಿ ಲೀಟರ್ ಪೆಟ್ರೋಲ್ ಗೆ ಇದು ಗರಿಷ್ಟ 40 ಕಿ.ಮೀ ಮೈಲೇಜ್

    ಟಾಟಾ ಪಂಚ್ ಇವಿ

    ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಸದ್ಯ ಅಗ್ರಸ್ಥಾನ ಕಾಯ್ದುಕೊಂಡಿರುವ ಟಾಟಾ ಮೋಟಾರ್ಸ್ ಕಂಪನಿಯು ಮುಂಬರುವ ಕೆಲವೇ ತಿಂಗಳಿನಲ್ಲಿ ಪಂಚ್ ಇವಿ ಬಿಡುಗಡೆ ಮಾಡಲಿದೆ. ಮೈಕ್ರೊ ಎಸ್ ಯುವಿ ವೈಶಿಷ್ಟ್ಯತೆಯ ಹೊಸ ಪಂಚ್ ಇವಿ ಕಾರು 350 ಕಿ.ಮೀ ಮೈಲೇಜ್ ರೇಂಜ್ ಪಡೆದುಕೊಳ್ಳಬಹುದಾಗಿದ್ದು, ಇದು ಬಜೆಟ್ ಬೆಲೆಯಲ್ಲಿ ಇವಿ ಕಾರು ಖರೀದಿದಾರರಿಗೆ ಉತ್ತಮ ಆಯ್ಕೆಯಾಗಲಿದೆ. ಹೊಸ ಪಂಚ್ ಇವಿ ಕಾರು ಸಾಮಾನ್ಯ ಕಾರಿಗಿಂತ ರೂ. 2 ಲಕ್ಷ ಹೆಚ್ಚುವರಿ ಬೆಲೆ ಪಡೆದುಕೊಳ್ಳಬಹುದಾಗಿದ್ದು, ಅತಿ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಮಟ್ಟದ ಬ್ಯಾಟರಿ ಪ್ಯಾಕ್ ಹೊಂದಿದೆ.

    ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್

    ಶೀಘ್ರದಲ್ಲಿಯೇ ಹ್ಯುಂಡೈ ಕ್ರೆಟಾ ಕಾರಿನ ಫೇಸ್‌ಲಿಫ್ಟ್ ಆವೃತ್ತಿ ಬಿಡುಗಡೆಯಾಗಲಿದ್ದು, ಇದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿರುವ ಹ್ಯುಂಡೈ ಜನಪ್ರಿಯ ಕಾರು ಮಾದರಿಯಾಗಿರುವ ಪಾಲಿಸೇಡ್ ಎಸ್‌ಯುವಿಯಿಂದ ಹಲವಾರು ವಿನ್ಯಾಸ ಅಂಶಗಳನ್ನು ಎರವಲು ಪಡೆದುಕೊಂಡಿದೆ. ಈ ಮೂಲಕ ಇದು ಭರ್ಜರಿ ಪರ್ಫಾಮೆನ್ಸ್ ಪ್ರೇರಿತ ಎಂಜಿನ್ ನೊಂದಿಗೆ ತಾಂತ್ರಿಕ ಅಂಶಗಳಲ್ಲೂ ಗಮನಸೆಳೆಯಲಿದೆ. ಹೊಸ ಆವೃತ್ತಿಯಲ್ಲಿ ಈ ಬಾರಿ ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂ ಸೇರಿದಂತೆ ಹಲವಾರು ಹೊಸ ಬದಲಾವಣೆಗಳನ್ನು ನೀಡಬಹುದಾಗಿದ್ದು, ಇದು 2024ರ ಆರಂಭದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ.

    ಟಾಟಾ ಕರ್ವ್ ಇವಿ

    ಟಾಟಾ ಮೋಟಾರ್ಸ್ ತನ್ನ ಹೊಸ ಕರ್ವ್ ಕಾನ್ಸೆಪ್ಟ್ ಆವೃತ್ತಿಯನ್ನು ಬಿಡುಗಡೆ ಮಾಡಲು ವಿವಿಧ ಹಂತದ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಆರಂಭಿಸಿದ್ದು, ಹೊಸ ಕಾರು ಮಾದರಿಯು ಕೂಪೆ ಎಸ್ ಯುವಿ ವೈಶಿಷ್ಟ್ಯತೆಯೊಂದಿಗೆ ಭರ್ಜರಿ ಬೇಡಿಕೆ ಪಡೆದುಕೊಳ್ಳು ನೀರಿಕ್ಷೆಯಲ್ಲಿದೆ. 2023ರ ಆಟೋ ಎಕ್ಸ್ ಪೋದಲ್ಲಿ ಮೊದಲ ಬಾರಿಗೆ ಅನಾವರಣಗೊಂಡಿದ್ದ ಕರ್ವ್ ಕಾನ್ಸೆಪ್ಟ್ ಕಾರು ಮೊದಲ ಹಂತದಲ್ಲಿ ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಬಿಡುಗಡೆಯಾಗಲಿದ್ದರೆ ತದನಂತರ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲೂ ಬಿಡುಗಡೆಯಾಗಲಿದೆ. ಕರ್ವ್ ಇವಿ ಕಾರು ಮಾದರಿಯು ಪ್ರತಿ ಚಾರ್ಜ್ ಗೆ 400 ರಿಂದ 500 ಕಿ.ಮೀ ಮೈಲೇಜ್ ನೀಡಬಹುದಾದ ಬ್ಯಾಟರಿ ಪ್ಯಾಕ್ ಆಯ್ಕೆ ಪಡೆದುಕೊಳ್ಳಬಹುದಾಗಿದೆ.

    Demo
    Share. Facebook Twitter LinkedIn Email WhatsApp

    Related Posts

    DK Shivakumar: ಇ-ಖಾತೆ ಮಾಡಿಸಿಕೊಳ್ಳಿ, ವಂಚನೆಯಿಂದ ತಪ್ಪಿಸಿಕೊಳ್ಳಿ; ಡಿಸಿಎಂ- ಡಿ.ಕೆ. ಶಿವಕುಮಾರ್!

    June 29, 2025

    ಆಸ್ತಿದಾರರಿಗೆ ಗುಡ್ ನ್ಯೂಸ್: ಬೃಹತ್ ಇ-ಖಾತಾ ಮೇಳಕ್ಕೆ DCM ಡಿಕೆ ಶಿವಕುಮಾರ್ ಚಾಲನೆ!

    June 29, 2025

    ನಿರುದ್ಯೋಗಿಗಳಿಗೆ ಗುಡ್ ನ್ಯೂಸ್: ಇಲ್ಲಿದೆ ಇನ್ಸೆಕ್ಟ್ ಕಲೆಕ್ಟರ್ ಹುದ್ದೆ.. ಆಸಕ್ತರು ಅಪ್ಲೈ ಮಾಡಿ!

    June 29, 2025

    ಪಿಯುಸಿ, ಡಿಗ್ರಿ ಪಾಸಾಗಿದ್ಯಾ!? ನಿರುದ್ಯೋಗಿಗಳಿಗೆ ಇಲ್ಲಿದೆ ಭರ್ಜರಿ ಉದ್ಯೋಗ; ಕೂಡಲೇ ಸಂದರ್ಶನಕ್ಕೆ ಹಾಜರಾಗಿ

    June 29, 2025

    ಆಸ್ತಿ ಮಾಲೀಕರ ಗಮನಕ್ಕೆ: ಪಂಚಾಯ್ತಿ ವ್ಯಾಪ್ತಿಯಲ್ಲೂ ಸಿಗಲಿದೆ ಇ-ಖಾತಾ!

    June 29, 2025

    ಬ್ರ್ಯಾಂಡ್ ಎಂದು ಜೀನ್ಸ್ ಖರೀದಿಸೋ ಜನರೇ ಈ ಸುದ್ದಿ ನಿಮಗಾಗಿ: ಎಲ್ಲವೂ Fake!

    June 29, 2025

    ದಿನಕ್ಕೆ ಎಷ್ಟು ಬಾರಿ ಮೊಬೈಲ್ ಚಾರ್ಜ್ ಮಾಡಬೇಕು ಗೊತ್ತಾ!? ಮೊಬೈಲ್ ಪ್ರಿಯರು ತಿಳಿಯಬೇಕು!

    June 29, 2025

    ಅತಿಯಾದ ಮೊಬೈಲ್ ಬಳಕೆ ಅನೇಕ ರೋಗಗಳಿಗೆ ಕಾರಣವಾಗುತ್ತಂತೆ!

    June 28, 2025

    Power Cut: ನಾಳೆ ಬೆಂಗಳೂರಿನ ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯ; ನಿಮ್ಮ ಏರಿಯಾದಲ್ಲಿ ಕರೆಂಟ್ ಇರುತ್ತಾ ನೋಡಿ?

    June 28, 2025

    ಬಂಗಾರ ಖರೀದಿಗೆ ಇದೇ ಬೆಸ್ಟ್ ಟೈಂ: ಇದ್ದಕ್ಕಿದ್ದಂತೆ ಭರ್ಜರಿ ಇಳಿಕೆ ಕಂಡ ಚಿನ್ನದ ಬೆಲೆ! ಹೀಗಿದೆ ದರ ವಿವರ

    June 28, 2025

    ಟಾಟಾ ಗ್ರೂಪ್ ಪ್ರಮುಖ ನಿರ್ಧಾರ: ವಿಮಾನ ದುರಂತ ಸಂತ್ರಸ್ತರಿಗೆ 500 ಕೋಟಿ ರೂ. ಟ್ರಸ್ಟ್..!

    June 28, 2025

    ಬೇರೆಯವರಿಗೆ ತಿಳಿಯದಂತೆ ಕಾಲ್ ರೆಕಾರ್ಡ್ ಮಾಡ್ಬಹುದು: ಈ ಟ್ರಿಕ್ ಫಾಲೋ ಮಾಡಿ!

    June 28, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.