ಸೈಟ್ ರಿಜಿಸ್ಟರ್ ಆಗದೇ ಪರದಾಟ ನಡೆಸುತ್ತಿರುವವರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಮುಂದಿನ ವಾರದಿಂದ ಮತ್ತೆ ಬಿ ಖಾತಾ ನಿವೇಶನಗಳನ್ನು ನೋಂದಣಿ ಮಾಡಲು ಸರಕಾರ ತೀರ್ಮಾನಿಸಿದೆ. ಈ ಬಗ್ಗೆ ನೋಂದಣಿ ಮಹಾಪರಿವೀಕ್ಷಕರು ಹಾಗೂ ಮುದ್ರಾಂಕ ಆಯುಕ್ತ ಕೆ.ಎ ದಯಾನಂದ ಮಾಹಿತಿ ನೀಡಿದ್ದಾರೆ.
ಮತ್ತೆ ಮೊಳಗಲಿದೆ ವಾರ್ ಸೈರನ್..ನಾಳೆ 4 ರಾಜ್ಯದಲ್ಲಿ ಮಾಕ್ ಡ್ರೀಲ್!?
ಈ ಬಗ್ಗೆ ಮಾತನಾಡಿದ ಅವರು, ಕಳೆದ ಅಕ್ಟೋಬರ್ 30 ರಿಂದ ಇ ಸ್ವತ್ತು ಆಗದ ಯಾವುದೇ ಸೈಟ್ ರಿಜಿಸ್ಟ್ರೇಷನ್ ಆಗುತ್ತಿರಲಿಲ್ಲ. ಇದೀಗ ಬಿಬಿಎಂಪಿ ಹಾಗೂ ಆರ್ಡಿಪಿಆರ್ ಇಲಾಖೆ ಜೊತೆ ಮಾತುಕತೆ ಆಗಿದ್ದು, 2024 ಅಕ್ಟೋಬರ್ 31 ರೊಳಗೆ ಯಾವುದೆಲ್ಲಾ ಬಿ ಖಾತಾ ರಿಜಿಸ್ಟ್ರೇಷನ್ ಆಗಿದೆಯೋ ಅಂತಹ ಸೈಟ್ಗಳಿಗೆ ಇ ಸ್ವತ್ತು ನೀಡಲು ನಿರ್ಧರಿಸಲಾಗಿದೆ. ಇದರಿಂದ ಲಕ್ಷಾಂತರ ನಿವೇಶನದಾರರಿಗೆ ಸಹಕಾರಿಯಾಗಲಿದೆ ಎಂದು ಹೇಳಿದ್ದಾರೆ.
ಇನ್ನು ಸರ್ಕಾರ ಸೈಟ್ ರಿಜಿಸ್ಟ್ರೇಷನ್ಗೆ ಸಂಬಂಧಿಸಿದಂತೆ ಕೆಲ ಬದಲಾವಣೆಗಳನ್ನು ಮಾಡಿದೆ. ಇತ್ತೀಚೆಗಷ್ಟೇ ಆಸ್ತಿಯಲ್ಲಿ ಮಾಲೀಕರ ಹೆಸರು ಸೇರ್ಪಡೆ ಮಾಡುವುದಕ್ಕೆ ಸಹ ಶುಲ್ಕ ನಿಗದಿ ಮಾಡಲಾಗಿತ್ತು. ಆ ಮೂಲಕ ಆಸ್ತಿಗಳ ಮಾರಾಟ ಹಾಗೂ ಖರೀದಿಯಲ್ಲಿ ಆಗುವ ಮೋಸವನ್ನು ತಪ್ಪಿಸುವುದಾಗಿದೆ.